ರಾಜ್ಯ

ಗಣೇಶ ಹಬ್ಬ ಸಮಯದಲ್ಲಿ ಪಿಒಪಿ ಮೂರ್ತಿಗಳ ಮಾರಾಟ, ಬಳಕೆ, ವಿಸರ್ಜನೆಗೆ ನಿಷೇಧ: ರಾಜ್ಯ ಪರಿಸರ ಇಲಾಖೆ ಆದೇಶ

Sumana Upadhyaya

ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಆಚರಣೆಗೆ ಇನ್ನು ಮೂರು ದಿನಗಳು ಬಾಕಿ ಇರುವುದು. ಈ ಸಂದರ್ಭದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (POP)ಯಿಂದ ತಯಾರಿಸಿದ ಗಣೇಶನ ಮೂರ್ತಿಗಳನ್ನು ನೀರಿಗೆ ಬಿಟ್ಟರೆ ಜಲಮಾಲಿನ್ಯ ಮತ್ತು ಪರಿಸರಕ್ಕೆ ಹಾನಿಯಾಗುತ್ತದೆ. ಇದನ್ನು ತಡೆಯಲು ಪರಿಸರ ಮತ್ತು ಅರಣ್ಯ ಇಲಾಖೆ ನಿನ್ನೆ ಶುಕ್ರವಾರ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಮೂರ್ತಿಗಳ ತಯಾರಿಕೆ, ಮಾರಾಟ ಮತ್ತು ಪರಿಸರಕ್ಕೆ ವಿಸರ್ಜನೆ ಮಾಡುವುದನ್ನು ನಿಷೇಧಿಸಿದೆ.

ಅರಣ್ಯ ಸಚಿವ ಈಶ್ವರ್ ಖಂಡ್ರೆ ಮತ್ತು ಇತರ ಸಂಬಂಧಪಟ್ಟವರ ನಡುವಿನ ಸಭೆಯ ನಂತರ ಈ ಆದೇಶ ಹೊರಬಿದ್ದಿದೆ. ಜಿಲ್ಲಾಧಿಕಾರಿಗಳು, ಸಿಇಒಗಳು, ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯಿತಿಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು. ಪಿಒಪಿ ವಿಗ್ರಹಗಳನ್ನು ಮುಳುಗಿಸಿದಾಗ, ರಾಸಾಯನಿಕ ಬಣ್ಣಗಳನ್ನು ಹೊಂದಿರುವ ಮೂರ್ತಿಗಳಿಂದ ನೀರಿನ ಮೇಲ್ಮೈಯಲ್ಲಿ ತೈಲ ಪದರವನ್ನು ಹೊರಬರುತ್ತದೆ, ಆಮ್ಲಜನಕದ ಮಟ್ಟವನ್ನು ಕಡಿಮೆಯಾಗುವುದಲ್ಲದೆ ಜಲಚರಗಳು ಸಾಯುತ್ತವೆ. 

2016 ರಲ್ಲಿ ರಾಜ್ಯ ಸರ್ಕಾರವು ಪಿಒಪಿ ವಿಗ್ರಹಗಳ ತಯಾರಿಕೆಯನ್ನು ನಿಷೇಧಿಸಿತ್ತು ಎಂದು TNIE ಗೆ ಸಚಿವ ಖಂಡ್ರೆ ಹೇಳುತ್ತಾರೆ. ಕೇಂದ್ರ ಸರ್ಕಾರವು 2020 ರಲ್ಲಿ ಈ ವಿಗ್ರಹಗಳ ಸಾಗಣೆ, ಸಂಗ್ರಹಣೆ, ಮಾರಾಟ ಮತ್ತು ವಿಸರ್ಜನೆ ನಿಷೇಧಿಸಿತು. ಈಗ, ರಾಜ್ಯ ಸರ್ಕಾರವು ಅಂತಹ ವಿಗ್ರಹಗಳ ಮಾರಾಟ, ತಯಾರಿಕೆ ಮತ್ತು ವಿಸರ್ಜನೆ ನಿಷೇಧಿಸಿದೆ, ಈಗಾಗಲೇ ಸಾಗಣೆ ವಿರುದ್ಧ ಆದೇಶ ಜಾರಿಯಲ್ಲಿದೆ ಎಂದರು. 

ಸರ್ಕಾರದ ಆದೇಶದ ಪ್ರಕಾರ, ವಾಣಿಜ್ಯ ಘಟಕಗಳು ಮತ್ತು ಮೂರ್ತಿಗಳು ಎಲ್ಲೆಲ್ಲಿ ಇರುತ್ತವೆ ಎಂಬುದರ ಮೇಲ್ವಿಚಾರಣೆಗಾಗಿ ಎಸ್ಪಿಗಳು, ಪರಿಸರ ಅಧಿಕಾರಿಗಳು, ಸಾರಿಗೆ ಇಲಾಖೆ ಅಧಿಕಾರಿಗಳು, ವಾಣಿಜ್ಯ ತೆರಿಗೆಗಳು, ಶಿಕ್ಷಣ ಇಲಾಖೆ, ಸಿಇಒಗಳು, ಪಂಚಾಯತ್ ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗುವುದು. 

ಒಮ್ಮೆ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ, ಧಾರ್ಮಿಕ ಭಾವನೆಗಳು ಒಳಗೊಂಡಿರುವುದರಿಂದ ಏನೂ ಮಾಡಲಾಗುವುದಿಲ್ಲ. ನಾವು ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ. ಹಾಗಾಗಿ ಪಿಒಪಿ ವಿಗ್ರಹಗಳನ್ನು ಪ್ರತಿಷ್ಠಾಪಿಸದಂತೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಸ್ವಲ್ಪ ತಡವಾದರೂ ಪ್ರಕ್ರಿಯೆ ಆರಂಭವಾಗಿದೆ ಎಂದು ಸಚಿವ ಖಂಡ್ರೆ ಹೇಳಿದರು.

ಕೆಎಸ್‌ಪಿಸಿಬಿಯ ಹಿರಿಯ ಅಧಿಕಾರಿಯೊಬ್ಬರು, ಪಿಒಪಿ ಗಣೇಶ ಮೂರ್ತಿಗಳನ್ನು ಮಾರಾಟ, ಉತ್ಪಾದನೆ ಮತ್ತು ನೀರಿಗೆ ವಿಸರ್ಜನೆ ಮಾಡುವುದನ್ನು ನಿಷೇಧಿಸುವ ಆದೇಶವನ್ನು ಸರ್ಕಾರ ಹೊರಡಿಸಿದಾಗ, ಅನುಸ್ಥಾಪನೆಯು ಸಹ ಅದರ ಭಾಗವಾಗುತ್ತದೆ. ಇಲ್ಲಿಯವರೆಗೆ, ಜಲ ಕಾಯಿದೆ, 1974 ರ ಸೆಕ್ಷನ್ 24 ಮತ್ತು ಪರಿಸರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ. 

ಆದೇಶದ ನಂತರವೂ ಪಿಒಪಿ ಗಣೇಶ ಮೂರ್ತಿಗಳನ್ನು ತಯಾರಿಸುವವರ ಮೇಲೆ ದಾಳಿಯೊಂದಿಗೆ ಐಪಿಸಿ ಸೆಕ್ಷನ್ 108 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುವುದು. ಆ ವಸ್ತುಗಳನ್ನು ಸಂಗ್ರಹಿಸುವುದು ವರ್ಷಪೂರ್ತಿ ಮುಂದುವರಿಯುತ್ತದೆ ಎಂದು ಹೇಳಿದರು. 

SCROLL FOR NEXT