ದುಬೈನಿಂದ ವಾಪಸಾದ ಮಗ 
ರಾಜ್ಯ

ಉಡುಪಿ: 3 ವರ್ಷಗಳ ಬಳಿಕ ದುಬೈನಿಂದ ತವರಿಗೆ ಬಂದು ಅಮ್ಮನ ಬಳಿ ಅಪರಿಚಿತನಂತೆ ಮೀನು ಖರೀದಿಸಿ ಮಗನ ಸರ್ಪ್ರೈಸ್!

ಯಾರಿಗೂ ಮಾಹಿತಿ ನೀಡದೆ ಮೂರು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕನೋರ್ವ ಮೀನು ವ್ಯಾಪಾರಿಯಾದ ತನ್ನ ತಾಯಿಯ ಬಳಿಗೆ ಅಪರಿಚಿತನಂತೆ ತೆರಳಿ ಮೀನು ಖರೀದಿಸುವ ಮೂಲಕ ಅಮ್ಮನನ್ನು ಅಚ್ಚರಿಗೊಳಿಸಿದ್ದಾರೆ.

ಉಡುಪಿ: ಯಾರಿಗೂ ಮಾಹಿತಿ ನೀಡದೆ ಮೂರು ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಿದ ಯುವಕನೋರ್ವ ಮೀನು ವ್ಯಾಪಾರಿಯಾದ ತನ್ನ ತಾಯಿಯ ಬಳಿಗೆ ಅಪರಿಚಿತನಂತೆ ತೆರಳಿ ಮೀನು ಖರೀದಿಸುವ ಮೂಲಕ ಅಮ್ಮನನ್ನು ಅಚ್ಚರಿಯಲ್ಲಿ ಕೆಡವಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಗಂಗೊಳ್ಳಿ ನಿವಾಸಿ ರೋಹಿತ್‌ 3 ವರ್ಷಗಳ ಅನಂತರ ದುಬೈನಿಂದ ತಾಯ್ನಾಡಿಗೆ ಮರಳಿದ್ದರು. ಮನೆಯವರಿಗೆ, ದಿಢೀರ್‌ ಖುಷಿ ನೀಡುವ ಯೋಚನೆಯಿಂದ ತಾನು ಬರುವ ಮಾಹಿತಿಯನ್ನು ಯಾರಿಗೂ ನೀಡಿರಲಿಲ್ಲ. ಮನೆಗೆ ಬಂದಾಗ ಮನೆಮಂದಿ ರೋಹಿತ್‌ನನ್ನು ಅಚ್ಚರಿ, ಖುಶಿಯಿಂದ ಎದುರುಗೊಂಡರು. ತಾಯಿ ಸುಮಿತ್ರಾ ಅವರು ಮನೆಯಲ್ಲಿ ಇಲ್ಲದ್ದರಿಂದ ಬೇಸರಗೊಂಡ ರೋಹಿತ್‌ ನೇರವಾಗಿ ಗಂಗೊಳ್ಳಿ ಬಂದರಿನ ಬಳಿ ಆಕೆ ಮೀನು ಮಾರುವ ಸ್ಥಳಕ್ಕೆ ತೆರಳಿದರು.

ಅಮ್ಮನಿಗೆ ಗುರುತು ಸಿಗಬಾರದೆಂದು ಟೋಪಿ ಮತ್ತು ಕನ್ನಡಕ ಧರಿಸಿ, ಮುಖಕ್ಕೆ ಕರವಸ್ತ್ರ ಕಟ್ಟಿಕೊಂಡು ಮೀನು ಖರೀದಿಯ ನಾಟಕವಾಡಿದರು. ಗ್ರಾಹಕನ ಹಾವಭಾವ, ಸ್ವರ ಗಮನಿಸಿದ ತಾಯಿಗೆ ಇದು ತನ್ನ ಮಗನೇ ಎಂದು ಹೆತ್ತ ಕರುಳು ಹೇಳಿತು. ತತ್‌ಕ್ಷಣ ಮಗನನ್ನು ಬಿಗಿದಪ್ಪಿ ಆನಂದಬಾಷ್ಪ ಹರಿಸಿ ಕಣ್ಣೊರೆಸುತ್ತಿರುವ ದೃಶ್ಯ ವೈರಲ್‌ ಆಗಿರುವ ವೀಡಿಯೋದಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಬಹು ಅಂಗಾಂಗ ವೈಫಲ್ಯದಿಂದ ಗಾಯಕಿ ಆಶಾ ಭೋಸ್ಲೆ ನಿಧನ': ಬ್ರೀಚ್ ಕ್ಯಾಂಡಿ ಆಸ್ಪತ್ರೆ ಸ್ಪಷ್ಟನೆ

US-Iran ಶಾಂತಿ ಒಪ್ಪಂದ ವಿಫಲ: ಪಾಕಿಸ್ತಾನ ಕುತಂತ್ರ; ಸೌದಿಗೆ 13,000 Pak ಸೈನಿಕರು, 18 ಯುದ್ಧ ವಿಮಾನ ರವಾನೆ!

40 ಲಕ್ಷ ರೂ ಸಂಬಳ, ದಿಢೀರ್ ಕೆಲಸದಿಂದ ವಜಾ; 1.4 ಕೋಟಿ ಮೌಲ್ಯದ ಮನೆ EMI ತೀರಿಸಲು Rapido ಚಾಲಕನಾದ ಟೆಕ್ಕಿ!

ಇರಾನ್ ಜೊತೆಗಿನ 21 ಗಂಟೆಗಳ ಶಾಂತಿ ಮಾತುಕತೆ; ಡೊನಾಲ್ಡ್ ಟ್ರಂಪ್‌ಗೆ 'ಡಜನ್‌ಗಟ್ಟಲೆ' ಬಾರಿ ಫೋನ್ ಕರೆ ಮಾಡಿದ ಜೆಡಿ ವ್ಯಾನ್ಸ್!

ಪ್ರತಿ ಪಂದ್ಯಕ್ಕೂ ಬನ್ನಿ... ನೀವು ನನ್ನ ಅದೃಷ್ಟ: IPLನಲ್ಲಿ ಶತಕ ಸಿಡಿಸಿ ವಿನಮ್ರ ಮನವಿ ಮಾಡಿದ ಸಂಜು ಸ್ಯಾಮ್ಸನ್, Video!

SCROLL FOR NEXT