ರಾಜ್ಯ

ಬೆಂಗಳೂರು ಬಂದ್ ಎಫೆಕ್ಟ್: 13 ವಿಮಾನ ರದ್ದು, ಪ್ರಯಾಣಿಕರಿಗೆ ಅನಾನುಕೂಲ

Srinivasamurthy VN

ಬೆಂಗಳೂರು: ಕಾವೇರಿಗಾಗಿ ಮಂಗಳವಾರ ನಡೆದ ನಡೆದ ಬಂದ್ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರಿಗೆ ಬರಬೇಕಿದ್ದ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ.

ಹೌದು.. ಕಾವೇರಿಗಾಗಿ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಹಾರಾಟ ರದ್ದಾಗಿದೆ. ಬೆಂಗಳೂರಿಗೆ ಬರಬೇಕಿದ್ದ 13 ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದ್ದು, ಕೆಲವು ಪ್ರಯಾಣಿಕರು ತಮ್ಮ ವಿಮಾನಗಳನ್ನು ಹತ್ತಲು ಸುಮಾರು 12 ಗಂಟೆಗಳ ಕಾಲ ಕಾಯಬೇಕಾಯಿತು. ರದ್ದಾದ 13 ಒಳಬರುವ ವಿಮಾನಗಳಲ್ಲಿ ಹತ್ತು ದೆಹಲಿ, ಕೊಚ್ಚಿ ಮತ್ತು ಚೆನ್ನೈನಿಂದ ಇಂಡಿಗೋ ವಿಮಾನಗಳು ಎಂದು ಹೇಳಲಾಗಿದೆ. 

ಈ ಅಸ್ತವ್ಯಸ್ತತೆಯಿಂದ ಆಕ್ರೋಶಗೊಂಡ ಕೆಲ ಪ್ರಯಾಣಿಕರು ಸಾರ್ವಜನಿಕರಿಗೆ ತುಂಬಾ ತೊಂದರೆ ನೀಡುವ ಬಂದ್ ಭಾರತದಲ್ಲಿ ಮಾತ್ರ ಸಂಭವಿಸುತ್ತದೆ ಎಂದು ಹೇಳಿದರು. ಅಂತೆಯೇ ಅಧಿಕಾರಿಗಳು ವಿಮಾನ ರದ್ದತಿಗೆ ಕಾರಣವೇನು ಎಂದು ಕೇಳಿದಾಗ "ಕಾರ್ಯಾಚರಣೆಯ ಕಾರಣಗಳು" ನೆಪ ನೀಡಿದ್ದಾರೆ. ಆದಾಗ್ಯೂ, ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ರದ್ದುಗೊಳಿಸಿರುವುದು ಅಥವಾ ಮರುಹೊಂದಿಸುವುದು ವಿಮಾನಗಳ ರದ್ದತಿಗೆ ನಿಜವಾದ ಕಾರಣ ಎಂದು ಮೂಲಗಳು ತಿಳಿಸಿವೆ. 

ಬಂದ್ ಮತ್ತು ನಂತರದ ವಿಮಾನ ರದ್ದತಿಯಿಂದಾಗಿ ವಾಯು ವಜ್ರ ಬಸ್‌ಗಳು ಕೂಡ ದಿನವಿಡೀ ಪ್ರಯಾಣಿಕರ ಕೊರತೆ ಎದುರಿಸಿತ್ತು.

SCROLL FOR NEXT