ರಾಜ್ಯ

ಬೆಂಗಳೂರು ಬಂದ್ ಎಫೆಕ್ಟ್: ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್; ರಸ್ತೆಗಳು ನಿರ್ಜನ

Srinivasamurthy VN

ಬೆಂಗಳೂರು: ಕಾವೇರಿ ನದಿ ನೀರಿಗಾಗಿ ರೈತಪರ ಸಂಘಟನೆಗಳು ಕರೆಕೊಟ್ಟಿದ್ದ ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯ ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್ ಗೆ ಸೂಚಿಸಲಾಗಿತ್ತು.

ಹೌದು.. ಬೆಂಗಳೂರು ಬಂದ್ ಹಿನ್ನಲೆಯಲ್ಲಿ ಅಪಾಯಕ್ಕೆ ತೆಗೆದುಕೊಳ್ಳಲು ಬಯಸದ ಟೆಕ್ ಸಂಸ್ಥೆಗಳು ತಮ್ಮ ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚಿಸಿದ್ದವು. ಪರಿಣಾಮ ಸಾಮಾನ್ಯ ದಿನಗಳಲ್ಲಿ ಟ್ರಾಫಿಕ್ ಜಾಮ್ ನಿಂದ ಕೂಡಿರುತ್ತಿದ್ದ ರಸ್ತೆಗಳು ಮಂಗಳವಾರ ಬೆರಳಿಣೆಕೆಯ ವಾಹನಗಳಿಂದ ಬಿಕೋ ಎನ್ನುತ್ತಿದ್ದವು. ಟೆಕ್ಕಿಗಳಿಗೆ ವರ್ಕ್ ಫ್ರಂ ಹೋಮ್ ಗೆ ಸೂಚಿಸಿದ್ದರಿಂದ ರಸ್ತೆಗಳು ನಿರ್ಜನವಾಗಿದ್ದವು.

ನಗರದ ಶೇ 90 ಕ್ಕೂ ಹೆಚ್ಚು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಘೋಷಿಸಿದ್ದವು. ಹೀಗಾಗಿ ಟೆಕ್ಕಿಗಳು ಕಚೇರಿಗಳಿಗೆ ಪ್ರಯಾಣಿಸದಂತೆ ಮೇಲ್‌ಗಳನ್ನು ಸ್ವೀಕರಿಸಿದ್ದರು ಮತ್ತು ವೈಯಕ್ತಿಕ ಸಭೆಗಳಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಗಳನ್ನು ಸಹ ಹಿಂತಿರುಗುವಂತೆ ಕೇಳಲಾಗಿತ್ತು. ಬಂದ್ ನಿಂದಾಗಿ ಉದ್ವಿಗ್ನತೆಗೆ ಸಾಕ್ಷಿಯಾಗಬಹುದಾದ ಪ್ರದೇಶಗಳಲ್ಲಿ ಮನೆಯಿಂದಲೇ ಕೆಲಸ ಸಂಸ್ಥೆಗಳಿಗೆ ಮತ್ತು ಟೆಕ್ಕಿಗಳಿಗೆ ನೆರವಾಗಿತ್ತು.

ಸಾಮಾನ್ಯ ಜನರು ಬಂದ್ ಹಿನ್ನಲೆಯಲ್ಲಿ ಯಾವುದೇ ಅಹಿತಕರ ಘಟನೆಗಳನ್ನು ತಪ್ಪಿಸಲು ತಮ್ಮ ಬಂದ್ ಆರಂಭಕ್ಕೂ ಮೊದಲೇ ದಿನಸಿ, ತರಕಾರಿ, ಇತರೆ ಅಗತ್ಯವಸ್ತುಗಳಿಗಾಗಿ ಬೆಳಗ್ಗೆಯೇ ಮಾರುಕಟ್ಟೆಗೆ ಆಗಮಿಸಿದ್ದು ಸಾಮಾನ್ಯವಾಗಿತ್ತು. ಆದಾಗ್ಯೂ, ಕೆಲವು ಪ್ರದೇಶಗಳಲ್ಲಿನ ಅನೇಕ ಸೇವೆಗಳು ಎಂದಿನಂತೆ ತೆರೆದಿದ್ದು, ರೆಸ್ಟೋರೆಂಟ್‌ಗಳು ಮತ್ತು ಡೆಲಿವರಿ ಏಜೆಂಟ್‌ಗಳು ನಗರದಲ್ಲಿ ಸುತ್ತಾಡುತ್ತಿದ್ದವು. 

ಆದರೆ ಕನ್ನಡಪರ ಸಂಘಟನೆಗಳು ಮತ್ತು ರೈತಪರ ಸಂಘಟನೆಗಳು ಕಾವೇರಿಗಾಗಿ ಬಂದ್ ಗೆ ಸಹಕರಿಸಿ.. 'ನೀರು ಉಳಿಸಿ ಮತ್ತು ಕಾವೇರಿಯನ್ನು ಉಳಿಸಿ' ಎಂದು ಪ್ರದರ್ಶನಗಳನ್ನು ನಡೆಸುವಂತೆ ಜನರನ್ನು ಕೇಳಿಕೊಂಡವು.
 

SCROLL FOR NEXT