ರಾಜ್ಯ

ಪೊಲೀಸರಿಗೆ ಸಿಪಿಆರ್ ತರಬೇತಿ ಕಡ್ಡಾಯ: ಸಚಿವ ಡಾ. ಜಿ.ಪರಮೇಶ್ವರ್

Manjula VN

ಬೆಂಗಳೂರು: ರಾಜ್ಯದ ಎಲ್ಲಾ 12 ತರಬೇತಿ ಅಕಾಡೆಮಿಗಳಲ್ಲಿ ಪೊಲೀಸ್ ಸಿಬ್ಬಂದಿಗೆ ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ತರಬೇತಿಯನ್ನು ಕಡ್ಡಾಯಗೊಳಿಸಲಾಗುವುದು. ಸಿಪಿಆರ್ ಶಿಕ್ಷಣವನ್ನು ಶಾಲಾ ಪಠ್ಯಕ್ರಮದ ಭಾಗವಾಗಿಸಲಾಗುವುದು’ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ಬುಧವಾರ ಹೇಳಿದರು.

ನಗರದಲ್ಲಿ ಗುರುವಾರ ಮಣಿಪಾಲ್ ಆಸ್ಪತ್ರೆ ವತಿಯಿಂದ ‘ಎಸ್‌ಒಎಸ್ ಕ್ಯೂಆರ್ ಕೋಡ್’ ಮತ್ತು ಸಿಪಿಆರ್ ಶಿಕ್ಷಣ ಕುರಿತ ಕಾರ್ಯಕ್ರಮಕ್ಕೆ ಸಚಿವರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಸುದರ್ಶನ್ ಬಲ್ಲಾಳ್ ಅವರು, ರಾಜ್ಯ ಸರ್ಕಾರವು ಎಲ್ಲಾ ಪೊಲೀಸ್ ಸಿಬ್ಬಂದಿ, ತುರ್ತು ಸೇವಾ ಸಿಬ್ಬಂದಿ, ಶಾಲಾ-ಕಾಲೇಜುಗಳಲ್ಲಿ ಸಿಪಿಆರ್ ತರಬೇತಿಯನ್ನು ನೀಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಸರಿಯಾಗಿ ಸಿಪಿಆರ್ ನೀಡುವುದು ಹೇಗೆ ಎಂಬುದು ಶೇಕಡಾ 2 ರಷ್ಟು ಜನರಿಗೂ ತಿಳಿದಿಲ್ಲ. ಸಿಪಿಆರ್ ಜೀವ ಉಳಿಸುವ ಕೌಶಲ್ಯವಾಗಿದ್ದು. ಸರಿಯಾಗಿ ಸಿಪಿಆರ್ ನೀಡುವುದು ಹೇಗೆ ಎಂದು ತಿಳಿದುಕೊಳ್ಳುವುದು ತುರ್ತು ಸಮಯದಲ್ಲಿ ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಾ.ಪರಮೇಶ್ವರ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, 'ಸಿಪಿಆರ್ ತರಬೇತಿ' ಕುರಿತು ಸರ್ಕಾರ ಈಗಾಗಲೇ ಕಾರ್ಯನಿರ್ವಹಿಸುತ್ತಿದೆ. ಇದು ವಿದ್ಯಾರ್ಥಿಗಳಿಗೆ ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯು ಮುಂತಾದ ವಿವಿಧ ಕಾಯಿಲೆಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಣಿಪಾಲ್ ಆಸ್ಪತ್ರೆಯು ‘ಎಸ್‌ಒಎಸ್ ಕ್ಯೂಆರ್ ಕೋಡ್’ ಅನ್ನು ಕೂಡ ಪ್ರಾರಂಭಿಸಿತು.

ಈ ಕುರಿತು ಮಾತನಾಡಿದ ಬಲ್ಲಾಳ್ ಅವರು, ಎಸ್‌ಒಎಸ್ ಕ್ಯೂಆರ್ ಕೋಡ್ಗ ಗಳನ್ನು ಟ್ರಾಫಿಕ್ ಸಿಗ್ನಲ್ ಗಳು ಹಾಗೂ ಅಪಾರ್ಟ್ ಮೆಂಟ್ ಗಳ ಬಳಿ ಇರಿಸಲಾಗುತ್ತದೆ. ಈ ಕ್ಯೂಆರ್ ಕೋಡ್ ಅನ್ನು ಹತ್ತಿರದ ಮಣಿಪಾಲ್ ಆಂಬ್ಯುಲೆನ್ಸ್ ರೆಸ್ಪಾನ್ಸ್ ಸೇವೆ ಮತ್ತು ರಾಜ್ಯ ಸರ್ಕಾರದ 108 ಆಂಬ್ಯುಲೆನ್ಸ್ ತಂಡಕ್ಕೆ ನೈಜ-ಸಮಯದ ಮಾಹಿತಿಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಆ್ಯಂಬುಲೆನ್ಸ್ ಗಳು ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯುತ್ತದೆ. ಈ ಆಂಬ್ಯುಲೆನ್ಸ್‌ಗಳನ್ನು ನಗರದಾದ್ಯಂತ ವಿವಿಧ ಪ್ರಮುಖ ಸ್ಥಳಗಳಲ್ಲಿ ಆಯಕಟ್ಟಿನ ರೀತಿಯಲ್ಲಿ ಇರಿಸಲಾಗುವುದು ಎಂದು ಹೇಳಿದರು.

SCROLL FOR NEXT