Image used for representational purpose only. 
ರಾಜ್ಯ

ಬದಲಾದ ವಾತಾವರಣ; ಉಸಿರಾಟ ಸಮಸ್ಯೆ ಹೆಚ್ಚಳ: ಮಕ್ಕಳನ್ನು ಬಾಧಿಸುತ್ತಿದೆ ಶ್ವಾಸಕೋಶ ಸೋಂಕು!

ವಾತಾವರಣ ಬದಲಾಗಿದ್ದು, ಕಳೆದ ನಾಲ್ಕು ವಾರಗಳಿಂದ ನಗರದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ 75 ರಷ್ಟು ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಪತ್ತೆಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಬೆಂಗಳೂರು: ವಾತಾವರಣ ಬದಲಾಗಿದ್ದು, ಕಳೆದ ನಾಲ್ಕು ವಾರಗಳಿಂದ ನಗರದ ಮಕ್ಕಳಲ್ಲಿ ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಿಗೆ ಭೇಟಿ ನೀಡುತ್ತಿರುವ 75 ರಷ್ಟು ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಪತ್ತೆಯಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ವಾತಾವರಣ ಬದಲಾಗಿದ್ದು, ಮಕ್ಕಳಿಗೆ ಬೇಸಿಗೆಯ ರಜೆ ಆರಂಭವಾಗಿದೆ. ಹೊರಾಂಗಣ ಆಟದಲ್ಲಿ ತೊಡಗುತ್ತಿರುವ ಮಕ್ಕಳಿಗೆ ಶ್ವಾಸಕೋಶ ಸೋಂಕು ಹೆಚ್ಚಾಗುತ್ತಿದೆ.

ವೈಟ್‌ಫೀಲ್ಡ್‌ನ ಆಸ್ಟರ್ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪೀಡಿಯಾಟ್ರಿಕ್ ಪಲ್ಮನಾಲಜಿಯ ಹಿರಿಯ ತಜ್ಞ ಡಾ.ತೇಜಸ್ವಿ ಚಂದ್ರ ಮಾತನಾಡಿ, ಕಳೆದ ಒಂದು ತಿಂಗಳಲ್ಲಿ ಆಸ್ಪತ್ರೆಗೆ ಬಂದ 140 ಮಕ್ಕಳ ಪೈಕಿ 100 ಮಕ್ಕಳಲ್ಲಿ ಶ್ವಾಸಕೋಶ ಸೋಂಕು ಪತ್ತೆಯಾಗಿದೆ. ಈ ಸ್ಥಿತಿಯನ್ನು ವೈದ್ಯಕೀಯವಾಗಿ viral febrile illness ಅಥವಾ viral-induced wheeze ಎಂದು ಕರೆಯಲಾಗುತ್ತದೆ.

ಸಾಕಷ್ಟು ಮಕ್ಕಳಲ್ಲಿ ಸ್ರವಿಸುವ ಮೂಗು ಮತ್ತು ಅತೀವ್ರ ಕೆಮ್ಮಿನ ಲಕ್ಷಣಗಳು ಕಂಡು ಬಂದಿವೆ. ಇದರಿಂತ ಸೋಂಕು ಮತ್ತಷ್ಟು ಉಲ್ಭಣಗೊಳ್ಳುವ ಸಾಧ್ಯತೆಗಳಿವೆ. ಇದನ್ನು ತಡೆಯಲು ಮನೆಯಲ್ಲಿಯೇ ಕೈಗೊಳ್ಳಬೇಕಾದ ಕ್ರಮಗಳಿವೆ. ಆಗಾಗ್ಗೆ ಕೈ ತೊಳೆಯುವುದು, ಮಾಸ್ಕ್ ಧರಿಸುವುದು ಮತ್ತು ನಿಂಬೆ, ತುಳಸಿ ಮತ್ತು ಜೇನುತುಪ್ಪದ ಮಿಶ್ರಣಗಳನ್ನು ಸೇವಿಸಬೇಕು.

ಬನ್ನೇರುಘಟ್ಟದ ರೇನ್‌ಬೋ ಚಿಲ್ಡ್ರನ್ಸ್ ಹಾಸ್ಪಿಟಲ್‌ನ ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ಇಂಟೆನ್ಸಿವಿಸ್ಟ್ ಮತ್ತು ಪೀಡಿಯಾಟ್ರಿಶಿಯನ್ ಡಾ.ಅನುಪಮ್ ಜೈಸ್ವಾಲ್ ಅವರು ಮಾತನಾಡಿ, “ಕಳೆದ 2-3 ವಾರಗಳಿಂದ ಆಸ್ಪತ್ರೆಗೆ ಭೇಟಿ ನೀಡುವ ಶೇ.75ರಷ್ಟು ಮಕ್ಕಳಲ್ಲಿ ಉಸಿರಾಟ ಸಮಸ್ಯೆಗಳು (ಸೋಂಕು) ಕಂಡು ಬಂದಿದೆ. ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ ಮತ್ತು ವಾಂತಿ, ಅತಿಸಾರಕ್ಕೆ ಸಂಬಂಧಿಸಿದ ರೋಗಲಕ್ಷಣಗಳು ಪತ್ತೆಯಾಗುತ್ತಿವೆ. 10 ಮಕ್ಕಳಲ್ಲಿ 1 ಪೀಡಿಯಾಟ್ರಿಕ್ ಇಂಟೆನ್ಸಿವ್ ಯುನಿಟ್ ಮತ್ತು ಆಕ್ಸಿಜನ್ ಅಗತ್ಯವಾಗುತ್ತಿದೆ.

ಜನರು ಮನೆಯಲ್ಲಿಯೇ ತೆಗೆದುಕೊಳ್ಳಬಹುದಾದ ತಡೆಗಟ್ಟುವ ಕ್ರಮಗಳ ಕುರಿತು ಮಾತನಾಡಿಜ ಡಾ.ಅನುಪನ್ ಜೈಸ್ವಾಲ್ ಅವರು, ಜನರು ಆಗಾಗ್ಗೆ ಕೈಗಳನ್ನು ಸ್ವಚ್ಛಗೊಳಿಸಬೇಕು, ಮಾಸ್ಕ್ ಧರಿಸಬೇಕು. ಮಕ್ಕಳು ತೀವ್ರ ಬಿಸಿಲು ಇರುವ ಸಂದರ್ಭದಲ್ಲಿ ಹೊರಾಂಗಣದಲ್ಲಿ ಆಟವಾಡುವುದನ್ನು ತಪ್ಪಿಸೂೇಕು. ಮಕ್ಕಳ ಆರೋಗ್ಯದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ನಿರ್ಲಕ್ಷಿಸಬಾರದು. ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕೆಂದು ಸಲಹೆ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT