ಸಾಂದರ್ಭಿಕ ಚಿತ್ರ  
ರಾಜ್ಯ

ಇದು ಮತ್ತೊಂದು ರೀತಿಯ ಸೈಬರ್ ವಂಚನೆ: ಸಂಚಾರ ನಿಯಮ ಉಲ್ಲಂಘನೆ ಹೆಸರಿನಲ್ಲಿ ಅಮಾಯಕರಿಂದ ಸುಲಿಗೆ!

ಸೈಬರ್ ಅಪರಾಧಿಗಳು ಕರ್ನಾಟಕ ರಾಜ್ಯ ಪೊಲೀಸ್ (KSP) ಹೆಸರನ್ನು ಬಳಸಿಕೊಂಡು ಅಮಾಯಕರಿಂದ ಹಣ ವಸೂಲಿ ಮಾಡುವ ದಂಧೆಗಿಳಿದಿದ್ದಾರೆ. ನಿಖರವಾದ ವಾಹನ ಮತ್ತು ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ವಾಟ್ಸಾಪ್ ಸಂದೇಶಗಳ ಮೂಲಕ, ವಂಚಕರು ಸಂಚಾರ ಉಲ್ಲಂಘನೆ ದಂಡವನ್ನು ಹೊರಡಿಸುವುದಾಗಿ ಬೆದರಿಕೆ ಹಾಕುತ್ತಾರೆ.

ಬೆಂಗಳೂರು: ಸಿಬಿಐ ಹೆಸರನ್ನು ಬಳಸಿಕೊಂಡು ವಂಚನೆ ಮಾಡುವ ಪ್ರವೃತ್ತಿಯ ನಂತರ ಮತ್ತೊಂದು ವಂಚನೆ ಪ್ರಕರಣದಲ್ಲಿ, ಸೈಬರ್ ಅಪರಾಧಿಗಳು ಕರ್ನಾಟಕ ರಾಜ್ಯ ಪೊಲೀಸ್ (KSP) ಹೆಸರನ್ನು ಬಳಸಿಕೊಂಡು ಅಮಾಯಕರಿಂದ ಹಣ ವಸೂಲಿ ಮಾಡುವ ದಂಧೆಗಿಳಿದಿದ್ದಾರೆ.

ನಿಖರವಾದ ವಾಹನ ಮತ್ತು ಮೊಬೈಲ್ ಸಂಖ್ಯೆಗಳನ್ನು ಹೊಂದಿರುವ ವಾಟ್ಸಾಪ್ ಸಂದೇಶಗಳ ಮೂಲಕ, ವಂಚಕರು ಸಂಚಾರ ಉಲ್ಲಂಘನೆ ದಂಡವನ್ನು ಹಾಕುವುದಾಗಿ ಬೆದರಿಕೆ ಹಾಕುತ್ತಾರೆ. ಈ ಸಂದೇಶಗಳ ಜೊತೆಗೆ, ದುರುದ್ದೇಶಪೂರಿತ APK ಫೈಲ್ ಗಳನ್ನು ಕಳುಹಿಸಿ ವಂಚನೆಗೊಳಗಾದವರಿಂದ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಕದಿಯುವ ದುರುದ್ದೇಶ ಹೊಂದಿರುತ್ತಾರೆ.

ವಂಚಕರು ನಿಖರವಾದ ವಾಹನ ಸಂಖ್ಯೆಗಳನ್ನು ಹೊಂದಿರುವುದರಿಂದ ಸುಲಭವಾಗಿ ವಂಚನೆ ಮಾಡಲು ಸಾಧ್ಯವಾಗುತ್ತದೆ. "ನಿಮ್ಮ ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಯನ್ನು ದಾಖಲಿಸಲಾಗಿದೆ ಎಂದು ತಿಳಿಸಲು ನಾವು ವಿಷಾದಿಸುತ್ತೇವೆ" ಎಂದು ವಾಟ್ಸಾಪ್ ಸಂದೇಶ ಪ್ರಾರಂಭವಾಗುತ್ತದೆ. ಸಂದೇಶದಲ್ಲಿ ಚಲನ್ ಸಂಖ್ಯೆ, ಉಲ್ಲಂಘನೆ ದಿನಾಂಕ ಮತ್ತು ನಿಮ್ಮ ವಾಹನ ಸಂಖ್ಯೆಯನ್ನು ಒಳಗೊಂಡಿರುತ್ತದೆ, ಜನರು ನಂಬುವ ರೀತಿಯಲ್ಲಿ ಸಂದೇಶಗಳನ್ನು ಕಳುಹಿಸಲಾಗುತ್ತದೆ.

ವಾಹನ್ ಪರಿವಾಹನ್ ಮೊಬೈಲ್ ಅಪ್ಲಿಕೇಶನ್ ಮೂಲಕ ಉಲ್ಲಂಘನೆಗೆ ಸಂಬಂಧಿಸಿದ ಪುರಾವೆಗಳನ್ನು ಪರಿಶೀಲಿಸಲು ಮತ್ತು ವೀಕ್ಷಿಸಲು ನಿರ್ದೇಶಿಸುವ ಮೂಲಕ ಸಂದೇಶ ಕೊನೆಗೊಳ್ಳುತ್ತದೆ. ಇದು ಉಲ್ಲಂಘನೆಯ ಫೋಟೋ ಸಾಕ್ಷ್ಯವನ್ನು ಒಳಗೊಂಡಂತೆ ವಿವರವಾದ ಮಾಹಿತಿಯನ್ನು ನೀಡುತ್ತದೆ. ಸಂದೇಶದ ಕೊನೆಗೆ ಬೆಂಗಳೂರು ಸೆಂಟ್ರಲ್ (RTO), ಕರ್ನಾಟಕದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿ ಎಂದು ನಮೂದಾಗಿರುತ್ತದೆ.

ಸರ್ಕಾರದಿಂದ ಇಂತಹ ಸಂದೇಶ ಬರುವುದಿಲ್ಲ:

ಯಾವುದೇ ಸರ್ಕಾರಿ ಸಂಸ್ಥೆ - ಸಂಚಾರ ಅಥವಾ ಸಾರಿಗೆ ಇಲಾಖೆ - ದಂಡ ಪಾವತಿಸಲು SMS ಅಥವಾ WhatsApp ಅಥವಾ ಯಾವುದೇ ಇತರ ಮೂಲಗಳ ಮೂಲಕ ಯಾವುದೇ ಸಂದೇಶವನ್ನು ಕಳುಹಿಸುವುದಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ ಎನ್ ಅನುಚೇತ್ TNIE ಪ್ರತಿನಿಧಿಗೆ ತಿಳಿಸಿದರು.

ಅಪರಿಚಿತ ವ್ಯಕ್ತಿಗಳಿಂದ ಬರುವ ಸಂದೇಶಗಳನ್ನು ಪರಿಗಣಿಸದಂತೆ ಅಥವಾ ಪರಿಶೀಲಿಸದ ಮೂಲಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡದಂತೆ ಜನರಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಇಂತಹ ಸಂದೇಶಗಳು ಸೈಬರ್ ವಂಚನೆಗಳಿಂದ ಬರುವವಾಗಿದ್ದು, ರಾಷ್ಟ್ರೀಯ ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ನ್ನು ಡಯಲ್ ಮಾಡುವ ಮೂಲಕ ಸಾರ್ವಜನಿಕರು ದೂರು ನೀಡಬೇಕೆಂದು ತಿಳಿಸಿದರು.

ಸಂಚಾರ ದಂಡವನ್ನು ಪರಿಶೀಲಿಸುವ ಮತ್ತು ಪಾವತಿಸುವ ವಿಧಾನಗಳು

  • ಅಧಿಕೃತ ವೆಬ್‌ಸೈಟ್ btp.gov.in ಗೆ ಭೇಟಿ ನೀಡಿ

  • ಕರ್ನಾಟಕ ರಾಜ್ಯ ಪೊಲೀಸರ ಅಧಿಕೃತ ಅಪ್ಲಿಕೇಶನ್ ನ್ನು ಡೌನ್‌ಲೋಡ್ ಮಾಡಿ (Android / iOS ಎರಡರಲ್ಲೂ ಲಭ್ಯವಿದೆ)

  • ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಗೆ ರೂ.10 ಕೋಟಿ: ಸುರಂಗ ರಸ್ತೆ ಯೋಜನೆಯಿಂದ 'ಸಸ್ಯೋದ್ಯಾನ'ದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ- ಡಿಕೆ ಶಿವಕುಮಾರ್

US tariff: ಚೀನಾ ಮೇಲೆ ಅಮೆರಿಕ ಶೇ.100 ರಷ್ಟು ಸುಂಕ; ಭಾರತಕ್ಕೆ ಎಚ್ಚರಿಕೆಯ ಗಂಟೆ!

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

ದ್ವಿಶತಕ ಮಿಸ್: ಗಿಲ್ ತಪ್ಪಿನಿಂದ ರನ್ ಔಟ್ ಆಗಿ ತಲೆ ಚಚ್ಚಿಕೊಂಡ ಜೈಸ್ವಾಲ್; ಮೈದಾನ ತೊರೆಯುವಂತೆ ಅಂಪೈರ್ ತಾಕೀತು; Video!

SCROLL FOR NEXT