ಆನೆ ಮರಿಯನ್ನು ಮತ್ತೆ ಹಿಂಡಿನೊಂದಿಗೆ ಸೇರಿಸಲು ಯತ್ನ
ಆನೆ ಮರಿಯನ್ನು ಮತ್ತೆ ಹಿಂಡಿನೊಂದಿಗೆ ಸೇರಿಸಲು ಯತ್ನ 
ರಾಜ್ಯ

ಕೊಡಗು: ಆನೆ ಮರಿಯನ್ನು ಮತ್ತೆ ಹಿಂಡಿನೊಂದಿಗೆ ಸೇರಿಸಲು ಅರಣ್ಯಾಧಿಕಾರಿಗಳು ಯತ್ನ

Lingaraj Badiger

ಮಡಿಕೇರಿ: ಕೊಡಗಿನ ಮಾಲ್ದಾರೆಯಲ್ಲಿ ಕಾಡಾನೆಗಳ ಓಡಾಟ ಹೆಚ್ಚಾಗುತ್ತಿರುವುದರ ನಡುವೆಯೇ ಆನೆ ಹಿಂಡಿನಿಂದ ಬೇರ್ಪಟ್ಟ ಆನೆ ಮರಿಯೊಂದನ್ನು ಮತ್ತೆ ಹಿಂಡಿನೊಂದಿಗೆ ಸೇರಿಸಲು ಅರಣ್ಯಾಧಿಕಾರಿಗಳು ಯತ್ನಿಸುತ್ತಿದ್ದಾರೆ.

ಆನೆ ಮರಿ ಅರಣ್ಯದ ಅಂಚಿನಲ್ಲಿ ಏಕಾಂಗಿಯಾಗಿ ಓಡಾಡುತ್ತಿವುದನ್ನು ಗಮನಿಸಿದ ನಿವಾಸಿಗಳು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ನಂತರ ಆನೆ ಮರಿಯನ್ನು ಅದರ ತಾಯಿಯೊಂದಿಗೆ ಮತ್ತೆ ಸೇರಿಸಲು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ಸುಮಾರು ಆರು ದಿನಗಳ ಹಿಂದೆ ದಕ್ಷಿಣ ಕೊಡಗಿನ ಮಾಲ್ದಾರೆ ಗ್ರಾಮದ ಎಸ್ಟೇಟ್‌ಗಳಲ್ಲಿ ಮೂರು ತಿಂಗಳ ಗಂಡು ಆನೆ ಮರಿ ಸುತ್ತಾಡುತ್ತಿರುವುದು ಕಂಡುಬಂದಿತ್ತು. ಈ ಆನೆ ಮರಿ ತನ್ನ ತಾಯಿಯಿಂದ ಬೇರ್ಪಟ್ಟಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಿದ ನಂತರವೂ ಒಂಟಿಯಾಗಿ ತಿರುಗುತ್ತಿತ್ತು.

"ನಾವು ಮಾಹಿತಿಯನ್ನು ಪಡೆದ ನಂತರ, ಕ್ಷಿಪ್ರ ಪ್ರತಿಕ್ರಿಯೆ ತಂಡ(RRT) ಆನೆ ಮರಿಯನ್ನು ಪತ್ತೆಹಚ್ಚಲು ಪ್ರಾರಂಭಿಸಿತು ಮತ್ತು ಅದನ್ನು ಹಿಂಡಿನೊಂದಿಗೆ ಮತ್ತೆ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ನಾವು ಈ ಆನೆ ಮರಿಯ ಮೂಲ ಹಿಂಡನ್ನು ಪತ್ತೆ ಹಚ್ಚಲು ಪ್ರಯತ್ನಿಸಿದ್ದೇವೆ ಮತ್ತು ಮರಿ ಮತ್ತು ತಾಯಿಯನ್ನು ಮತ್ತೆ ಸೇರಿಸಲು ಸುಮಾರು ಐದು ದಿನಗಳಿಂದ ನಿರಂತರವಾಗಿ ಪ್ರಯತ್ನ ಮಾಡಿದ್ದೇವೆ ಎಂದು ವಿರಾಜಪೇಟೆ ಡಿಸಿಎಫ್ ಜಗನ್ನಾಥ್ ವಿವರಿಸಿದರು. ಅಲ್ಲದೆ ಈ ಆನೆ ಮರಿ ಆಕ್ರಮಣಕಾರಿಯಾಗಿದೆ ಎಂದು ಹೇಳಿದ್ದಾರೆ.

ಮರಿ ಪತ್ತೆಯಾದ ಸ್ಥಳದ ಸಮೀಪದಲ್ಲಿ ಆನೆಗಳ ಒಂದು ಹಿಂಡು ಚಲಿಸುತ್ತಿರುವುದನ್ನು ಕಂಡು ಬಂದಿದೆ. ಆದರೆ ಅದರ ತಾಯಿ ಇರುವ ಹಿಂಡನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT