ಕಾರವಾರದ ಮೂವರು ಸಾವು
ಕಾರವಾರದ ಮೂವರು ಸಾವು 
ರಾಜ್ಯ

ಸೌದಿ ಅರೇಬಿಯಾ: ಹಜ್ ಯಾತ್ರೆಗೆ ತೆರಳಿದ್ದ ಕಾರವಾರದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ದಾರುಣ ಸಾವು!

Vishwanath S

ಸೌದಿ ಅರೇಬಿಯಾ/ಕಾರವಾರ: ಹಜ್ ಯಾತ್ರೆಗೆ ತೆರಳಿದ್ದ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ಒಂದೇ ಕುಟುಂಬದ ಮೂವರು ಅಪಘಾತದಲ್ಲಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಮುಂಡಗೋಡ ಫಯಾಜ್ ರೋಣ, ಪತ್ನಿ ಆಫ್ರಿನಾ ಬಾನು, ಅಣ್ಣನ ಮಗ ಆಯಾನ್ ರೋಣ ಹಜ್ ಯಾತ್ರೆಗೆಂದು ಮಾ.26ರಂದು ಮಕ್ಕಾ ಮದೀನಾಕ್ಕೆ ತೆರಳಿದ್ದರು. ಏ.6ರ ರಾತ್ರಿ ಮಕ್ಕಾ ಮದೀನಾ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ.

ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಮಕ್ಕಳು ಹಾಗೂ ಇನ್ನೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ.

SCROLL FOR NEXT