ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಜಲ ಬಿಕ್ಕಟ್ಟಿಗೆ ಬೆಂಗಳೂರು ಕಂಗಾಲು: ಸಮಸ್ಯೆ ಪರಿಹಾರಕ್ಕೆ ಆನ್‌ಲೈನ್‌ ಮೊರೆ ಹೋಗುತ್ತಿರುವವರ ಸಂಖ್ಯೆ ಶೇ.101ರಷ್ಟು ಹೆಚ್ಚಳ!

Manjula VN

ಬೆಂಗಳೂರು: ಜಜಲ ಬಿಕ್ಕಟ್ಟು ಸಮಸ್ಯೆಗೆ ಬೆಂಗಳೂರು ಜನತೆ ಕಂಗಾಲಾಗಿದ್ದು, ನೀರಿನ ಸಮಸ್ಯೆ ಪರಿಹರಿಸಿಕೊಳ್ಳಲು ಆನ್ ಲೈನ್ ಮೊರೆ ಹೋಗುತ್ತಿರುವವರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ ಎಂದು ವರದಿಯೊಂದು ತಿಳಿಸಿದೆ.

ಈ ಕುರಿತು ಕಳೆದ ಅಕ್ಟೋಬರ್ 1ರಿಂದ ಮಾರ್ಚ್ 31ರವರೆಗಿನ ಅಂಕಿ–ಅಂಶಗಳನ್ನು Just Dial ಆನ್‌ಲೈನ್ ವೇದಿಕೆ ಶುಕ್ರವಾರ ಬಿಡುಗಡೆ ಮಾಡಿದೆ.

ವರದಿಯಲ್ಲಿ ಬೆಂಗಳೂರಿನಲ್ಲಿ ನೀರು ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆನ್‌ಲೈನ್‌ನಲ್ಲಿ ಸಹಾಯವಾಣಿಗಳನ್ನು ಸಂಪರ್ಕಿಸುವವರ ಸಂಖ್ಯೆ ಶೇ 101 ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದೆ.

ನೀರಿನ ಟ್ಯಾಂಕರ್‌ಗಳಿಗಾಗಿ, ಕುಡಿಯುವ ನೀರಿನ ಟ್ಯಾಂಕರ್‌ಗಳಿಗಾಗಿ ಹಾಗೂ ಅವುಗಳ ರಿಪೇರಿಗಳಿಗಾಗಿ, ವಾಟರ್‌ ಟ್ಯಾಂಕ್ ಸ್ವಚ್ಛತೆಗಾಗಿ, ನೀರು ಸಂಬಂಧಿತ ಮಿಷಿನ್, ಸಲಕರಣೆಗಳ ರಿಪೇರಿ/ಸುಧಾರಣೆಗಳಿಗಾಗಿ ಆನ್‌ನೈನ್ ಮೂಲಕ ಸಂಪರ್ಕಗಳ ಮೊರೆ ಹೋಗುವವರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ ಎಂದು ತಿಳಿಸಿದೆ.

ನೀರಿಗೆ ಸಂಬಂಧಿಸಿದ ಆನ್ ಲೈನ್ ಹುಡುಕಾಟಗಳಲ್ಲಿ ಶೇ 56ರಷ್ಟು ಏರಿಕೆಯೊಂದಿಗೆ ಹೈದರಾಬಾದ್ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪುಣೆ (ಶೇ 31), ಮುಂಬೈ (ಶೇ 11), ಅಹಮದಾಬಾದ್ (ಶೇ 7), ಚೆನ್ನೈ (ಶೇ 6), ದೆಹಲಿ (ಶೇ 3), ಹಾಗೂ ಕೋಲ್ಕತ್ತದಲ್ಲಿ (ಶೇ 3) ಕಂಡು ಬಂದಿವೆ.

ಮಳೆ ಕೊರತೆ ಹಾಗೂ ತಾಪಮಾನದ ಹೆಚ್ಚಳದಿಂದ ಈ ಭಾರಿಬೆಂಗಳೂರು ಹಾಗೂ ಬೆಂಗಳೂರು ಸುತ್ತಮುತ್ತ ಕುಡಿಯುವ ಮತ್ತು ಬಳಸುವ ನೀರಿಗೆ ವ್ಯಾಪಕ ಹಾಹಾಕಾರ ಉಂಟಾಗಿದೆ. ಇದರಿಂದ ಜನರು ನೀರು ಸಂಬಂಧಿತ ಸಮಸ್ಯೆಗಳಿಗಾಗಿ ಆನ್‌ಲೈನ್‌ನಲ್ಲಿ ಸಂಪರ್ಕಗಳ/ಸಹಾಯವಾಣಿಗಳ ಮೊರೆ ಹೋಗುತ್ತಿರುವುದು ಹೆಚ್ಚುತ್ತಿದೆ.

SCROLL FOR NEXT