ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಚಲಿಸುತ್ತಿದ್ದ ಆಟೋದಲ್ಲಿ ಮಹಿಳಾ ಟೆಕ್ಕಿಗೆ ಲೈಂಗಿಕ ಕಿರುಕುಳ; ಚಾಲಕನ ವಿರುದ್ಧ ದೂರು ದಾಖಲು

ಆಂಧ್ರ ಪ್ರದೇಶದ 32 ವರ್ಷದ ಮಹಿಳಾ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಆಟೋ ಚಾಲಕನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ.

ಬೆಂಗಳೂರು: ಆಂಧ್ರ ಪ್ರದೇಶದ 32 ವರ್ಷದ ಮಹಿಳಾ ಸಾಫ್ಟ್‌ವೇರ್ ಡೆವಲಪರ್ ಒಬ್ಬರು ಆಟೋ ಚಾಲಕನ ವಿರುದ್ಧ ಲೈಂಗಿಕ ಕಿರುಕುಳ ದೂರು ದಾಖಲಿಸಿದ್ದಾರೆ.

ಗುರುವಾರ ರಾತ್ರಿ 9.15ರಿಂದ 10.15ರ ನಡುವೆ ಸಂಪಿಗೆಹಳ್ಳಿಯ ಅಗ್ರಹಾರ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಶನಿವಾರ ರಾತ್ರಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಂತ್ರಸ್ತೆ ಪ್ರಕೃತಿ ನಗರದ ನಿವಾಸಿಯಾಗಿದ್ದು, ಕೊಡಿಗೇಹಳ್ಳಿಯ ಖಾಸಗಿ ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕೆಲಸ ಮಾಡುತ್ತಿದ್ದಾರೆ. ಗುರುವಾರ ತನ್ನ ಕೆಲಸ ಮುಗಿಸಿ ಕೊಡಿಗೇಹಳ್ಳಿ ಜಂಕ್ಷನ್ ಬಳಿ ಆಟೋಗಾಗಿ ಕಾಯುತ್ತಿದ್ದಾಗ ದುಷ್ಕರ್ಮಿಯು 140 ರೂ. ದರ ನಿಗದಿ ಮಾಡಿ ತನ್ನ ಮನೆಯಿರುವ ಏರಿಯಾಗೆ ಡ್ರಾಪ್ ಮಾಡಲು ಒಪ್ಪಿಕೊಂಡರು.

ಕೋಗಿಲು ಕ್ರಾಸ್‌ನ ಮುಖ್ಯರಸ್ತೆಯಲ್ಲಿ ಆಟೋ ಚಾಲಕನು ಹಿಂಬದಿಯ ಕನ್ನಡಿಯಲ್ಲಿ ಸಂತ್ರಸ್ತೆಯನ್ನು ನೋಡುತ್ತಾ ಆಕ್ಷೇಪಾರ್ಹ ಸನ್ನೆಗಳನ್ನು ಮಾಡುತ್ತಿದ್ದ. ಸಂತ್ರಸ್ತೆ ಗಾಬರಿಗೊಂಡರು ಮತ್ತು ಚಲಿಸುತ್ತಿದ್ದ ಆಟೋದಿಂದ ಹೊರಬರಲು ಹೆದರಿಕೆಯಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅಗ್ರಹಾರ ಕಡೆಗೆ ಬಲಕ್ಕೆ ತೆಗೆದುಕೊಂಡ ನಂತರ ಆಟೋ ಚಾಲಕ ವಾಹನ ನಿಲ್ಲಿಸಿ ಆಟೋ ಇಂಜಿನ್ ಸಮಸ್ಯೆ ಉಂಟಾಗಿದೆ ಎಂದು ಹೇಳಿದ್ದಾನೆ, ಈ ವೇಳೆ ಆಕೆ ಆಟೋದಿಂದ ಇಳಿಯಲು ಯತ್ನಿಸಿದಾಗ ಆಕೆಯನ್ನು ತಡೆದಿದ್ದಾನೆ ಎನ್ನಲಾಗಿದೆ.

ಆಟೋ ಚಾಲಕ ಆಕೆಯ ಬಟ್ಟೆ ಹರಿದ್ದಿದ್ದಾನೆ, ಕೂಡಲೇ ಆತನನ್ನು ತಳ್ಳಿ ಧೈರ್ಯ ತುಂಬಿಕೊಂಡು ಅಗ್ರಹಾರ ಮುಖ್ಯರಸ್ತೆಯತ್ತ ಓಡಿದ್ದಾರೆ. ಈ ವೇಳೆ ಸಂತ್ರಸ್ತೆ ಇಬ್ಬರು ಮಹಿಳೆಯರನ್ನು ಕಂಡು ಅವರ ಸಹಾಯ ಪಡೆದು, ಆತನಿಂದ ತಪ್ಪಿಸಿಕೊಂಡು ಮನೆಗೆ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಆಟೋ ಚಾಲಕನನ್ನು ಇನ್ನೂ ಬಂಧಿಸಿಲ್ಲ. ಸಂತ್ರಸ್ತೆ ಸಾಗಿದ ಮಾರ್ಗದಲ್ಲಿ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ತನಿಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಟೋ ಚಾಲಕನ ವಿರುದ್ಧ ಐಪಿಸಿ 354ಬಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾಚಿಕೆಗೇಡಿನ ಸಂಗತಿ'; ಎಲ್ಲಾ ಪಕ್ಷಗಳ ದೊಡ್ಡ ಕುಳಗಳು 'ಅಕ್ರಮ ಮರಳು ಗಣಿಗಾರಿಕೆಯಲ್ಲಿ ಭಾಗಿ': ಪರಮೇಶ್ವರ್

MP: ಗಣರಾಜ್ಯೋತ್ಸವದಂದು ತಟ್ಟೆಗಳ ಬದಲಿಗೆ ಹಾಳೆಗಳ ಮೇಲೆ ಮಕ್ಕಳಿಗೆ ಉಪಹಾರ, ಶಿಕ್ಷಣ ವ್ಯವಸ್ಥೆಗೆ ನಾಚಿಕೆಗೇಡು!

U19 ವಿಶ್ವಕಪ್: ಜಿಂಬಾಬ್ವೆ ತಂಡವನ್ನು 204 ರನ್ ಗಳಿಂದ ಮಣಿಸಿದ ಭಾರತ; ಸೂಪರ್ ಸಿಕ್ಸ್‌ನಲ್ಲಿ ನಂಬರ್ 1 ಸ್ಥಾನ!

ಉಡುಪಿ: ದೋಣಿ ಮುಳುಗಿ ಮೂವರು ಪ್ರವಾಸಿಗರು ಸಾವು; ಜಿಲ್ಲಾಡಳಿತದಿಂದ ಸುರಕ್ಷತಾ ಕ್ರಮ

FTA ಗೆ ಸಹಿ ಬೆನ್ನಲ್ಲೇ ಮಹತ್ವದ ಘೋಷಣೆ: ಭಾರತದಲ್ಲಿ ಮೊದಲ ಲೀಗಲ್ ಗೇಟ್‌ವೇ ಕಚೇರಿ ತೆರೆಯಲಿರುವ EU

SCROLL FOR NEXT