ಎಸ್.ಜೈಶಂಕರ್ 
ರಾಜ್ಯ

ಇರಾನ್-ಇಸ್ರೇಲ್ ಯುದ್ಧ ಸೂಕ್ಷ್ಮ ವಿಚಾರ; ಬಿಕ್ಕಟ್ಟು ಪರಿಹಾರಕ್ಕೆ ಮಾರ್ಗ ಹುಡುಕಲಾಗುತ್ತಿದೆ: ಎಸ್.ಜೈಶಂಕರ್

ಇರಾನ್-ಇಸ್ರೇಲ್ ಯುದ್ಧ ಸೂಕ್ಷ್ಮ ವಿಚಾರವಾಗಿದ್ದು. ಬಿಕ್ಕಟ್ಟು ಪರಿಹಾರಕ್ಕೆ ಮಾರ್ಗಗಳ ಹುಡುಕಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸೋಮವಾರ ಹೇಳಿದರು.

ಬೆಂಗಳೂರು: ಇರಾನ್-ಇಸ್ರೇಲ್ ಯುದ್ಧ ಸೂಕ್ಷ್ಮ ವಿಚಾರವಾಗಿದ್ದು. ಬಿಕ್ಕಟ್ಟು ಪರಿಹಾರಕ್ಕೆ ಮಾರ್ಗಗಳ ಹುಡುಕಲಾಗುತ್ತಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಸೋಮವಾರ ಹೇಳಿದರು.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಷ್ಯಾ ಉಕ್ರೇನ್ ಯುದ್ಧ, ಇಂಡೋ ಪೆಸಿಪಿಕ್ ಬಿಕ್ಕಟ್ಟು ಸೇರಿದಂತೆ ಜಾಗತಿಕವಾಗಿ ಎದುರಾಗಿದ್ದ ಎಲ್ಲ ಸಮಸ್ಯೆಗಳನ್ನೂ ಪ್ರಧಾನಿ ನರೇಂದ್ರ ಮೋದಿ ನಿಭಾಯಿಸಿದ್ದಾರೆ. ಇರಾನ್-ಇಸ್ರೇಲ್ ಯುದ್ಧ ಸೂಕ್ಷ್ಮ ವಿಚಾರವಾಗಿದೆ. ಈಗಾಗಲೇ ನಾವು ಎರಡು ದೇಶಗಳ ಜೊತೆ ಮಾತನಾಡಿದ್ದೇವೆ. ಆದಷ್ಟು ಬೇಗ ಭಾರತೀಯರನ್ನ ಇರಾನ್ ಬಿಡುಗಡೆ ಮಾಡುವ ಭರವಸೆ ಇದೆ ಎಂದು ಹೇಳಿದರು.

ಭಾರತೀಯರಿದ್ದ ಹಡಗು ಇರಾನ್ ವಶದಲ್ಲಿದೆ. ದೇಶದೊಳಗಷ್ಟೇ ಅಲ್ಲ ಹೊರದೇಶದಲ್ಲೂ ಮೋದಿಯವರೇ ಗ್ಯಾರಂಟಿ, ನಿನ್ನೆ ಇರಾನ್ ಸರ್ಕಾರದ ಜೊತೆ ನಮ್ಮ‌ ಭಾರತೀಯರ ಬಿಡುಗಡೆ ಬಗ್ಗೆ ಮಾತಾಡಿದ್ದೇನೆ. ಈ ನಿಟ್ಟಿನಲ್ಲಿ ಸಕಾರಾತ್ಮಕ ಮಾತುಕತೆ ನಡೆದಿದೆ, ನಮ್ಮ ವಿದೇಶಾಂಗ ಇಲಾಖೆ ಅಧಿಕಾರಿಗಳು ಇರಾನ್ ವಶದಲ್ಲಿರುವ ಭಾರತೀಯರ ಭೇಟಿ ಮಾಡಿದ್ದಾರೆ. ಇದು ನಮಗೆ ಸಮಾಧಾನ ತಂದಿರುವ ವಿಚಾರ, ಆದಷ್ಟು ಬೇಗ ಇರಾನ್ ಭಾರತೀಯರನ್ನ ಬಿಡುಗಡೆ ಮಾಡುವ ಭರವಸೆ ಇದೆ ಎಂದರು.

ಯಾವುದೇ ದೇಶದ ಮೇಲೆ ನಡೆಯುವ ದಾಳಿ, ಆ ಎರಡು ದೇಶಗಳ ಭೌಗೋಳಿಕ ವಿಷಯವಷ್ಟೇ ಆಗಿರದೆ ಇತರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿವೆ. ರಷ್ಯಾ–ಉಕ್ರೇನ್‌, ಇಸ್ರೇಲ್‌–ಪ್ಯಾಲೆಸ್ಟೀನ್ ಯುದ್ಧಗಳು ಜಗತ್ತಿನ ಮೇಲೂ ಪರಿಣಾಮ ಬೀರುತ್ತವೆ. ಎಲ್ಲೋ ನಡೆಯುವ ಯುದ್ಧ, ಇತರೆ ರಾಷ್ಟ್ರಗಳ ಆರ್ಥಿಕತೆಯ ಮೇಲೂ ಪ್ರಭಾವ ಬೀರುತ್ತವೆ. ಇಂತಹ ವಾತಾವರಣ ತಿಳಿಗೊಳ್ಳಬೇಕಿದೆ.

2014 ರಿಂದ ದೇಶದ ವಿದೇಶಾಂಗ ನೀತಿಯು ಬದಲಾಗಿದೆ. ದೇಶದ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಗಡಿ ಉದ್ದಕ್ಕೂ ನಡೆಯುತ್ತಿರುವ ಭಯೋತ್ಪಾದನಾ ಕೃತ್ಯಗಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಎಂತಹ ಸನ್ನಿವೇಶಗಳಲ್ಲೂ ವಿಚ್ಛಿದ್ರ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಾಗ ರಾಜಿಯಾಗುವುದಿಲ್ಲ. ಭಯೋತ್ಪಾದನೆಯ ನಿಗ್ರಹಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಮುಂದಿನ 25 ವರ್ಷಗಳಲ್ಲಿ ಭಾರತ ವಿಶ್ವಕ್ಕೇ ಮಾದರಿಯಾಗಲಿದೆ. ಚೀನಾದ ಪ್ರಗತಿಯನ್ನು ಎದುರಿಸುವುದು ದೊಡ್ಡ ಸವಾಲಾಗಿದೆ. ವಿಶ್ವದ ಇತರೆ ರಾಷ್ಟ್ರಗಳ ವೇಗಕ್ಕೆ ತಕ್ಕಂತೆ ಬೆಳೆಯಲು ತಂತ್ರಜ್ಞಾನ, ಕೈಗಾರಿಕೆಗಳ ಬೆಳವಣಿಗೆಗಳೂ ಮುಖ್ಯ. ಅದಕ್ಕೆ ಪೂರಕ ವಾತಾವರಣ ಇದೀಗ ಸೃಷ್ಟಿಯಾಗಿದೆ. ಭಾರತ ಮಧ್ಯಪ್ರಾಚ್ಯ, ಪಾಶ್ಚಿಮಾತ್ಯ ಮತ್ತು ಅರಬ್‌ ಜಗತ್ತಿನ ಜತೆ ಹಳೆಯ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಭಾರತ ಆಸಕ್ತಿ ಹೊಂದಿದೆ.

ಕೋವಿಡ್‌ ನಂತರ ವಿಶ್ವದ ಹಲವು ದೇಶಗಳ ಆರ್ಥಿಕತೆ ನೆಲಕಚ್ಚಿದ್ದರೂ, ಭಾರತದ ಆರ್ಥಿಕ ಸಾಧನೆಗೆ ವಿಶ್ವವೇ ಬೆರಗಾಗಿದೆ. ಎನ್‌ಡಿಎ ರೂಪಿಸಿದ ಆರ್ಥಿಕ ನೀತಿಗಳು. ತೆಗೆದುಕೊಂಡ ದೃಢ ನಿರ್ಧಾರಗಳಿಂದಾಗಿ ದೇಶ ಆರ್ಥಿಕ ಸದೃಢತೆಯತ್ತ ಸಾಗಿದೆ ಎಂದರು.

ರಾಜ್ಯಕ್ಕೆ ಬರ ಪರಿಹಾರ ತಡವಾದ ಬಗ್ಗೆ ಪ್ರತಿಕ್ರಿಯಿಸಿ, ಕೇವಲ ಕರ್ನಾಟಕ ಮಾತ್ರ ಅಲ್ಲ ಕೆಲವು ರಾಜ್ಯಗಳದ್ದು ಬಾಕಿ ಇದೆ. ಎನ್​​ಡಿಆರ್​​ಎಫ್​​ಗೆ ಅದರದ್ದೇ ಆದ ನಿಯಮ ಇದೆ. ಈಗ ಬಿಡುಗಡೆ ಮಾಡಲು ಚುನಾವಣಾ ‌ಆಯೋಗದ ಅನುಮತಿ ಬೇಕು, ಅವರ ಅನುಮತಿ ಕೇಳಿದ್ದೇವೆ ಎಂದರು.

ಇದೇ ವೇಳೆ ಅಮೆರಿಾಕದಲ್ಲಿ ಭಾರತೀಯ ವಿದ್ಯಾರ್ಥಿಗಳ ಅನುಮಾನಾಸ್ಪದ ಸರಣಿ ಸಾವು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿ, ಇದು ನಮಗೆ ಹೆಚ್ಚಿನ ಆತಂಕ ಹುಟ್ಟಿಸಿದೆ. ಸರ್ಕಾರಕ್ಕೆ ಇದು ತುಂಬಾ ಕಳವಳ ತಂದಿದೆ. ಆ ವಿದ್ಯಾರ್ಥಿಗಳ ಕುಟುಂಬಳಿಗೆ ದುರಂತ ಈ ರೂಪದಲ್ಲಿ ಎದುರಾಗಿದೆ, ಮೃತರ ಬಗ್ಗೆ ನಾನು ತೀವ್ರ ಸಂತಾಪ ಸೂಚಿಸುತ್ತೇನೆ. ಅವರ ಕುಟುಂಬಗಳಿಗೂ ಸಾಂತ್ವನ ಹೇಳಲು ಬಯಸುತ್ತೇನೆ. ನಮ್ಮ ವಿದೇಶಾಂಗ ಇಲಾಖೆ ಮತ್ತು ರಾಯಭಾರ ಕಚೇರಿ ಈ ವಿಚಾರದಲ್ಲಿ ಗಮನ ಹರಿಸಿದೆ, ಹಲವು ಕಾರಣಗಳಿಗೆ ಭಾರತೀಯ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸಾವನ್ನಪ್ಪುತ್ತಿದ್ದಾರೆ, ಹೊಸ ವಿದ್ಯಾರ್ಥಿಗಳು ಅಲ್ಲಿಗೆ ಹೋದಾಗ ರಾಯಭಾರ ಕಚೇರಿ ಅಧಿಕಾರಿಗಳು ನಿಗಾ ಇಡಿ ಅಂತ ಸೂಚಿಸಲಾಗಿದೆ. ಅಮೆರಿಕದಲ್ಲಿ ವಿದ್ಯಾರ್ಥಿಗಳ ಜೀವ ರಕ್ಷಣೆ, ಭದ್ರತೆ ನಮ್ಮ ಆದ್ಯತೆಯಾಗಿದ್ದು, ಈ‌ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಿದೆ ಎಂದರು.

ಮಾಲ್ಡೀವ್ಸ್ ವಿವಾದ ಕುರಿತು ಮಾತನಾಡಿ, ಭಾರತೀಯ ಪ್ರವಾಸಿಗರ ನಿರೀಕ್ಷೆಯಲ್ಲಿ ದ್ವೀಪ ರಾಷ್ಟ್ರ ಇದೆ. ಮಾಲ್ಡೀವ್ಸ್ ಪ್ರವಾಸೋದ್ಯಮ ಅಭಿವೃದ್ಧಿಗೆ ಭಾರತದಲ್ಲಿ ರೋಡ್ ಶೋ ನಡೆಸುವ ಆ ರಾಷ್ಟ್ರದಿಂದ ಪ್ರಸ್ತಾವನೆ ಬಂದಿದೆ. ಏನೆಲ್ಲ ಘಟನೆಗಳು ನಡೆದರೂ ಕೂಡ ಭಾರತವೇ ನೆರೆಯ ರಾಷ್ಟ್ರವೆಂದು ಮಾಲ್ಡೀವ್ಸ್‌ಗೆ ನಿಧಾನವಾಗಿಯಾದರೂ ಮನವರಿಕೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಶ್ರೀಲಂಕಾ, ಭೂತಾನ್, ನೇಪಾಳ ವಿಚಾರದಲ್ಲಿ ಏನಾಯಿತು, ಈಗ ಏನೆಲ್ಲ ಬದಲಾವಣೆ, ಪರಿವರ್ತನೆಗಳಾಗಿವೆ ಎನ್ನುವುದೂ ನಮ್ಮ ಕಣ್ಮುಂದಿದೆ. ಶ್ರೀಲಂಕಾಕ್ಕೆ ಭಾರತವೇ ನೆಚ್ಚಿನ ಮಿತ್ರ ರಾಷ್ಟ್ರ ಮತ್ತು ಅಭಿವೃದ್ಧಿಗೆ ಆಧಾರಸ್ತಂಭ ಎನ್ನುವುದು ನೇಪಾಳಕ್ಕೂ ಅರ್ಥವಾಗಿ, ಇಂಧನ ಪೂರೈಕೆ ಕಾರ್ಯಜಾಲ ಸೃಷ್ಟಿಗೆ ಒಪ್ಪಿಕೊಂಡಿದೆ. ಕಳೆದ ಒಂದು ದಶಕದಲ್ಲಿ ರಾಜತಾಂತ್ರಿಕ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲಾಗಿದೆ. ಮೋದಿ ಭಾರತದ ರಾಜನೀತಿಯಲ್ಲಿ ದಿಟ್ಟತನವಿದೆ. ದೇಶದ ನಾಗರಿಕರ ಹಿತ, ಸಮಗ್ರತೆ ರಕ್ಷಣೆ ಜೊತೆಗೆ ಬೇರೆ ದೇಶಗಳನ್ನು ಅಷ್ಟೇ ಗೌರವದಿಂದ ನೋಡುವಂತಹ ಛಾತಿಯಿದೆ. ಹಾಗೆಯೇ ವಿದೇಶಾಂಗ ನೀತಿಗೆ ಹೃದಯವಿದೆ ಎಂದು ತಿಳಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಿವೆ. ನಾವು ಈ‌ ಪ್ರಯತ್ನಗಳನ್ನು ವಿಫಲಗೊಳಿಸಿ, ಪ್ರಜಾಪ್ರಭುತ್ವದ ವರ್ಚಸ್ಸು ಹೆಚ್ಚಿಸಬೇಕಿದೆ. ಶೇ 70ರಷ್ಟು ಮತದಾರರು ನಮ್ಮ ದೇಶದಲ್ಲಿ ತಮ್ಮ ಸ್ವಂತ ನಿರ್ಧಾರದ ಮೇಲೆ ಹಕ್ಕು ಚಲಾಯಿಸ್ತಾರೆ, ಜನ ಪ್ರಜ್ಞಾವಂತರಾಗ್ತಿದ್ದಾರೆ, ಯಾವ ಸರ್ಕಾರದಲ್ಲಿ ಏನಾಯಿತು ಅಂತ ಹೋಲಿಕೆ ಮಾಡುತ್ತಿದ್ದಾರೆ, ಯುಪಿಎ ಅವಧಿಯಲ್ಲಿ ಪಾಸ್‌ಪೋರ್ಟ್ ಪಡೆಯುವುದು ಎಷ್ಟು ಕಷ್ಟ ಆಗಿತ್ತು? ಈಗ ಎಷ್ಟು ಸುಲಭ? ಆಗಿನ ಸರ್ಕಾರದ ಯೋಜನೆಗಳು, ಈಗಿನ ಸರ್ಕಾರದ ಯೋಜನೆಗಳ ಬಗ್ಗೆ ಜನರ ನಡುವೆ ಚರ್ಚೆ ನಡೆಯುತ್ತಿದೆ, ಮೇಕ್ ಇನ್ ಇಂಡಿಯಾಕ್ಕೆ ಜನರ ಮೆಚ್ಚುಗೆ ಇದೆ, ಮೇಕ್ ಇನ್ ಇಂಡಿಯಾ ಮೂಲಕ ವರ್ಕ್ ಇನ್ ಇಂಡಿಯಾ, ವರ್ಕ್ ಫಾರ್ ಇಂಡಿಯಾ ಮನಸ್ಥಿತಿ ಬಂದಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ, ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ 'ಸುಪ್ರೀಂ' ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT