ರ‍್ಯಾಂಕ್ ಹೋಲ್ಡರ್ ಕೃಪಾ ಜೈನ್ ನಿವಾಸದಲ್ಲಿ ಸಂಭ್ರಮ
ರ‍್ಯಾಂಕ್ ಹೋಲ್ಡರ್ ಕೃಪಾ ಜೈನ್ ನಿವಾಸದಲ್ಲಿ ಸಂಭ್ರಮ 
ರಾಜ್ಯ

UPSC ಪರೀಕ್ಷೆ ಪಾಸ್ ಮಾಡಬೇಕೇ? ಭಯ ಬೇಡ, ತಾಳ್ಮೆ ಇರಲಿ: ರ‍್ಯಾಂಕ್ ಹೋಲ್ಡರ್ ಕೃಪಾ ಜೈನ್ ಸಲಹೆ

Nagaraja AB

ಹುಬ್ಬಳ್ಳಿ: ಯುಪಿಎಸ್‌ಸಿ ಪರೀಕ್ಷೆಯಲ್ಲಿ 400ನೇ ರ‍್ಯಾಂಕ್ ಪಡೆದಿರುವ ಕೃಪಾ ಜೈನ್ ಹೆಚ್ಚಿನ ಸಾಧನೆಯ ಹಂಬಲದಲ್ಲಿದ್ದಾರೆ. ಭಾರತೀಯ ಆಡಳಿತ ಸೇವೆಯಲ್ಲಿಯೇ ಕೆಲಸ ಮಾಡಬೇಕೆಂಬುದು ಅವರ ಮಹತ್ವಕಾಂಕ್ಷೆಯಾಗಿದೆ. ಅದಕ್ಕಿಂತ ಕಡಿಮೆ ಅರ್ಹತೆಯ ಉದ್ಯೋಗದಲ್ಲಿ ಕೆಲಸ ಮಾಡಲು ಅವರು ಸಿದ್ಧರಿಲ್ಲ. ಒಂದು ವೇಳೆ ತನ್ನ ಕನಸು ಈಡೇರದಿದ್ದಲ್ಲಿ ಮತ್ತೆ ಪರೀಕ್ಷೆ ಬರೆಯಲು ನಿರ್ಧರಿಸಿದ್ದಾರೆ.

“ಐಎಎಸ್ ಹೆಚ್ಚು ಜನ ಕೇಂದ್ರಿತವಾಗಿದೆ ಮತ್ತು ಸಮಾಜದೊಂದಿಗೆ ಕೆಲಸ ಮಾಡಬಹುದು. ನನಗೆ ಬಹಳಷ್ಟು ಅವಕಾಶಗಳಿವೆ. ನಾನು ಮಾಡಬಹುದಾದ ಕೆಲಸದ ಪ್ರಮಾಣವು ಹೆಚ್ಚಾಗಿರುತ್ತದೆ. ಈಗಾಗಲೇ ನಾನು ರೈಲ್ವೆ ನಿರ್ವಹಣಾ ಸೇವೆಗಳಲ್ಲಿ ಇದ್ದೇನೆ ಆದರೆ ಅದು ತಾಂತ್ರಿಕ ಸ್ಟ್ರೀಮ್ ಆಗಿದೆ. ಐಎಎಸ್ ಅಧಿಕಾರಿಯಾಗುವ ವಿಷಯಕ್ಕೆ ಬಂದರೆ ನಾನು ಯಾವ ವಲಯದಲ್ಲಿ ಬೇಕಾದರೂ ಇರಬಲ್ಲೆ ಎಂದು ಅವರು ಹೇಳಿದರು.

ಹುಬ್ಬಳ್ಳಿಯ ಕೆಎಲ್‌ಇಯ ಪ್ರೇರಣಾ ಕಾಲೇಜಿನಲ್ಲಿ ಪಿಯು ಮುಗಿಸಿದ ನಂತರ ಬೆಂಗಳೂರಿನ ಆರ್‌ವಿ ಕಾಲೇಜ್ ಆಫ್ ಇಂಜಿನಿಯರಿಂಗ್‌ನಲ್ಲಿ ಎಂಜಿನಿಯರಿಂಗ್ ಮುಗಿಸಿರುವ ಕೃಪಾ ಜೀನ್, MNC ಯಲ್ಲಿ ಸ್ವಲ್ಪ ದಿನ ಕೆಲಸ ಮಾಡಿದ್ದಾರೆ. ಅವರು ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, 400ನೇ ರ‍್ಯಾಂಕ್ ಗಳಿಸಿದ್ದಾರೆ. ತನ್ನ ಸಿದ್ಧತೆಗಳ ಬಗ್ಗೆ ಮಾತನಾಡಿದ ಕೃಪಾ, ಉತ್ತರ ಕರ್ನಾಟಕದಲ್ಲಿ ತನಗೆ ಸಾಕಷ್ಟು ಬೆಂಬಲ ಮತ್ತು ಸಂಭವನೀಯ ಅಧ್ಯಯನ ಗುಂಪುಗಳು ಸಿಗಲಿಲ್ಲ ಎಂದು ಹೇಳಿದರು.

''2020 ರಲ್ಲಿ ಕೆಲಸದಲ್ಲಿದ್ದಾಗ ಅಧ್ಯಯನ ಶುರು ಮಾಡಿದೆ. ಒಂದೇ ವೇಳೆಯಲ್ಲಿ ಓದುವುದು ಮತ್ತು ಕೆಲಸ ನಿರ್ವಹಿಸುವುದು ನನಗೆ ಕಷ್ಟಕರವಾಗಿತ್ತು. ಆದ್ದರಿಂದ ನಾನು 2021 ರಿಂದ UPSC ಗಾಗಿ ಅಧ್ಯಯನ ಮಾಡಲು ನಿರ್ಧರಿಸಿದೆ. ನನ್ನ ಇಡೀ ಕುಟುಂಬ ಮತ್ತು ಸಂಬಂಧಿಕರಲ್ಲಿ ನಾನು ಏಕೈಕ ವಿಜ್ಞಾನ ಹಿನ್ನೆಲೆ ವಿದ್ಯಾರ್ಥಿಯಾಗಿರುವುದರಿಂದ ಇದು ಆರಂಭದಲ್ಲಿ ಯಾವುದೇ ಹೋರಾಟಕ್ಕಿಂತ ಕಡಿಮೆ ಇರಲಿಲ್ಲ. ಸಿದ್ಧತೆಗಳ ಬಗ್ಗೆ ತಿಳಿಯಲು ಆನ್‌ಲೈನ್ ಸಂಪನ್ಮೂಲಗಳ ಮೊರೆ ಹೋಗಬೇಕಾಯಿತು ಎಂದು ವಿವರಿಸಿದರು.

“ನವದೆಹಲಿಯಲ್ಲಿನ ಅಧ್ಯಯನದ ವಾತಾವರಣವನ್ನು ಹೋಲಿಸಿದಾಗ, ಅದು ಬೆಂಗಳೂರು ಅಥವಾ ಧಾರವಾಡದಿಂದ ತುಂಬಾ ಹೆಚ್ಚಾಗಿದೆ. ಉತ್ತರ ಕರ್ನಾಟಕದಲ್ಲಿ ನಮಗೆ ಗಂಭೀರ ಅಧ್ಯಯನ ಕೇಂದ್ರಗಳು ಮತ್ತು ಸಂಸ್ಥೆಗಳು ಬೇಕಾಗುತ್ತವೆ. ಇದರಿಂದ ಅಲ್ಲಿನ ವಿದ್ಯಾರ್ಥಿಗಳು ದೂರ ಪ್ರಯಾಣಿಸುವ ಅನೀವಾರ್ಯತೆ ಇರಲ್ಲ. ಕಳೆದ ವರ್ಷವಷ್ಟೇ ಧಾರವಾಡದಲ್ಲಿ ಕೆಲವು ಕೋಚಿಂಗ್ ತರಗತಿಗಳನ್ನು ಸ್ಥಾಪಿಸಲಾಗಿದೆ. ಬೆಂಗಳೂರಿನಲ್ಲಿ ಮಾಕ್ ಕೋಚಿಂಗ್ ಕೂಡ ತೆಗೆದುಕೊಂಡೆ. ನಾನು ಆಯ್ಕೆ ಮಾಡಿಕೊಂಡ ವಿಷಯಕ್ಕೆ ಯಾವುದೇ ಮಾರ್ಗದರ್ಶನ ಇರಲಿಲ್ಲ. ಕರ್ನಾಟಕದ ಹೆಚ್ಚಿನ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ತಮ್ಮ ಐಚ್ಛಿಕ ವಿಷಯವಾಗಿ ಆರಿಸಿಕೊಂಡರೆ ನಾನು ಸಮಾಜಶಾಸ್ತ್ರವನ್ನು ಆರಿಸಿಕೊಂಡೆ, ಆದ್ದರಿಂದ ನಾನು ದೆಹಲಿಯಲ್ಲಿ ಅಧ್ಯಯನ ಮಾಡಲು ನಿರ್ಧರಿಸಿದೆ ಎಂದು ಅವರು ಹೇಳಿದರು.

UPSC ಪರೀಕ್ಷೆ ಬರೆಯಬೇಕೆಂಬ ಆಕಾಂಕ್ಷಿಗಳು ತಾಳ್ಮೆಯಿಂದಿರಿ. ನೀವು ಇಂಜಿನಿಯರಿಂಗ್ ಕಾಲೇಜಿನಲ್ಲಿ ರ‍್ಯಾಂಕ್ ಹೋಲ್ಡರ್ ಆಗಿರಬಹುದು ಅಥವಾ B.Com ನಲ್ಲಿ ಪದವಿ ಪಡೆದಿರಬಹುದು, UPSCಗೆ ಬಂದಾಗ ಎಲ್ಲರೂ ಸಮಾನರು. ಕಷ್ಟಪಟ್ಟು ಅಧ್ಯಯನ ಮಾಡಬೇಕು ಮತ್ತು ಭಯಪಡಬೇಡಿ ಎಂದು ಅವರು ಸಲಹೆ ನೀಡಿದರು.

SCROLL FOR NEXT