ನೇಹಾ-ಫಯಾಜ್ 
ರಾಜ್ಯ

ನೇಹಾಳ ಬರ್ಬರ ಹತ್ಯೆ ಸಮರ್ಥಿಸಿ ಕಿಡಿಗೇಡಿಗಳಿಂದ ಪೋಸ್ಟ್: ಇನ್ ಸ್ಟಾಗ್ರಾಂನಲ್ಲಿ ವಿಕೃತಿ ಮೆರೆದ ಸಾದಿಕ್-ಆದಿಲ್!

ನೇಹಾಳ ಬರ್ಬರ ಹತ್ಯೆಯನ್ನು ಸಮರ್ಥಿಸಿ ಆರೋಪಿಗಳು ಪೋಸ್ಟ್ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡ: ನೇಹಾಳ ಬರ್ಬರ ಹತ್ಯೆಯನ್ನು ಸಮರ್ಥಿಸಿ ಆರೋಪಿಗಳು ಪೋಸ್ಟ್ ಮಾಡಿರುವ ಘಟನೆ ಧಾರವಾಡದಲ್ಲಿ ನಡೆದಿದೆ.

ಏಪ್ರಿಲ್ 18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಓದುತ್ತಿದ್ದ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನಿರಂಜನ ಹಿರೇಮಠ ಅವರ 24 ವರ್ಷದ ಪುತ್ರಿ ನೇಹಾ ಹಿರೇಮಠಳನ್ನು ಕಾಲೇಜು ಕ್ಯಾಂಪಸ್‌ನಲ್ಲಿ ಫಯಾಜ್ ಎಂಬಾತ ಅನೇಕ ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದನು.

ಈ ಘಟನೆ ಕುರಿತಂತೆ ರಾಜ್ಯಾಂದ್ಯ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ ರಾಜಕೀಯ ಬಣ್ಣ ಪಡೆದುಕೊಂಡಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದು ಲವ್ ಜಿಹಾದ್ ಪ್ರಕರಣ ಎಂದು ಬಿಜೆಪಿ ಆರೋಪಿಸಿದ್ದರೆ ಕಾಂಗ್ರೆಸ್ಸಿಗರು ಇದೊಂದು ವೈಯಕ್ತಿಕ ಘಟನೆ ಎಂದು ಹೇಳಿದ್ದರು. ಇನ್ನು ಆರೋಪಿ ಫಯಾಜ್ ನನ್ನು ಎನ್ ಕೌಂಟರ್ ಮಾಡಬೇಕು ಎಂಬ ಹೇಳಿಕೆಯೂ ಕೇಳಿಬಂದಿದೆ.

ಇದರ ಮಧ್ಯೆ ಕಿಡಿಗೇಡಿಗಳು ನೇಹಾ ಹತ್ಯೆಯನ್ನು ಸಮರ್ಥಿಸಿ ಪೋಸ್ಟ್ ಮಾಡಿದ್ದಾರೆ. ಸಾದಿಕ್ ತಡಕೋಡ ಮತ್ತು ಆದಿಲ್ ಎಂಬುವರು ಇನ್ ಸ್ಟಾಗ್ರಾಂನಲ್ಲಿ ನೇಹಾ, ಫಯಾಜ್ ಫೋಟೋ ಬಳಸಿ ಪೋಸ್ಟ್ ಮಾಡಿದ್ದಾರೆ. # NehaFayazTrueLove #JusticeforLove ಎಂದು ಈ ಇಬ್ಬರು ಕಿಡಿಗೇಡಿಗಳು ಪೋಸ್ಟ್ ಮಾಡಿದ್ದರು. ಇದರ ವಿರುದ್ಧ ಹಿಂದೂ ಸಂಘಟನೆ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೆ ಹಿಂದೂ ಯುವಕರು ನೇಹಾ ಹತ್ಯೆಯನ್ನು ಸಮರ್ಥಿಸಿ ಪೋಸ್ಟ್ ಮಾಡಿದ್ದ ಸಾದಿಕ್ ತಡಕೋಡ ಮತ್ತು ಆದಿಲ್ ಎಂಬುವರನ್ನು ಹಿಡಿದು ದಾವಣಗೆರೆಯ ವಿದ್ಯಾಗಿರಿ ಠಾಣೆಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಎಲ್ಲವನ್ನೂ ತಡೆಯಲು ಸಾಧ್ಯವಿಲ್ಲ': CJP ದೆಹಲಿ ಪ್ರತಿಭಟನೆಗೆ ನಿರ್ಬಂಧ ಕುರಿತು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಚಾಟಿ

'ಮಕ್ಕಳನ್ನು ಪ್ರತಿಭಟನೆಗಳಿಂದ ದೂರವಿಡಿ': ದೆಹಲಿ ಪ್ರತಿಭಟನೆಗೆ ಸಿದ್ಧತೆ, ಮಸೀದಿ ಮೈಕ್‌ನಲ್ಲಿ ಪೊಲೀಸರ ಮನವಿ! Video

'ಜೀವನ ನರಕ, ನನ್ನ ಪಾಲಿನ ದೆವ್ವ ಸತ್ತಿದೆ, ಸತ್ತ ಮಾತ್ರಕ್ಕೆ ಪಾಪ ಕಳೆಯಲ್ಲ': ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಮತ್ತೆ ಕಿಡಿ-Video

ಈ ಬಾರಿ ಮೈಸೂರು ದಸರಾ ಮತ್ತಷ್ಟು ಆಕರ್ಷಕ; 146 ಕಿ.ಮೀ. ದೀಪಾಲಂಕಾರ; 3,500 ಡ್ರೋನ್‌ಗಳ ಪ್ರದರ್ಶನ

ಭಾರತೀಯ ಮೂಲದ ನ್ಯಾಯಶಾಸ್ತ್ರಜ್ಞೆಗೆ ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ; ನವನೇತಮ್ ನವಿ ಪಿಳ್ಳೈಗೆ ಒಲಿದ ನೊಬೆಲ್ ಶಾಂತಿ ಗರಿ