ಮರಿಯಾನೆ ಮೃತದೇಹದ ಬಳಿ ರೋಧಿಸುತ್ತಿರುವ ತಾಯಾನೆ.
ಮರಿಯಾನೆ ಮೃತದೇಹದ ಬಳಿ ರೋಧಿಸುತ್ತಿರುವ ತಾಯಾನೆ. 
ರಾಜ್ಯ

ಹುಲಿ ದಾಳಿಗೆ ಆನೆ ಮರಿ ಸಾವು: ತಾಯಾನೆ ರೋಧನೆ, ಟ್ರಾಫಿಕ್ ಜಾಮ್

Manjula VN

ಮೈಸೂರು: ಹುಲಿ ದಾಳಿಗೆ ಆನೆ ಮರಿಯೊಂದು ನಡು ರಸ್ತೆಯಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರದ ಬಂಡೀಪುರ ಅಭಯಾರಣ್ಯದಲ್ಲಿ ನಡೆದಿದೆ.

ಬಂಡೀಪುರ-ಊಟಿ ರಾಷ್ಟ್ರೀಯ ಹೆದ್ದಾರಿ ಬದಿಯ ರಸ್ತೆ ಬದಿಯಲ್ಲಿ ಮರಿಯಾನೆ ಮೇವು ಮೆಯ್ಯುತ್ತಿದ್ದ ಸಂದರ್ಭ ಹುಲಿ ಏಕಾ ಏಕಿ ದಾಳಿ ನಡೆಸಿ ಕೊಂದು ಹಾಕಿದೆ. ಈ ವೇಳೆ ಕೂಗಳತೆ ದೂರಲ್ಲಿದ್ದ ತಾಯಿಯಾನೆ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಹುಲಿ ಓಡಿ ಹೋಗಿದೆ.

ಬಳಿಕ ಸ್ಥಳಕ್ಕೆ ಆಗಮಿಸಿದ ತಾಯಿ ಆನೆ ತನ್ನ ಮರಿಯ ಶವವನ್ನು ಬಿಟ್ಟು ಕದಲದೆ ಕಣ್ಣೀರಾಕುತ್ತಾ ರೋಧಿಸಲು ಆರಂಭಿಸಿದೆ. ಇದರ ಮನಕಲಕುವ ದೃಶ್ಯ ಇದೀಗ ಎಲ್ಲೆಡೆ ವೈರಲ್‌ ಆಗುತ್ತಿದೆ.

ಮತ್ತೊಂದೆಡೆ ರಸ್ತೆ ಪಕ್ಕದಲ್ಲೇ ಆನೆ ಮರಿ ಸಾವನ್ನಪ್ಪಿರುವ ಹಿನ್ನೆಲೆ ಬಂಡೀಪುರ ಅರಣ್ಯ ವ್ಯಾಪ್ತಿಯ ಮೈಸೂರು ಊಟಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳು ಕಿಲೋಮೀಟರ್ ಗಟ್ಟಲೇ ಸಾಲುಗಟ್ಟಿ ನಿಂತಿ ಭಾರೀ ಸಂಚಾರ ದಟ್ಟಣೆ ಎದುರಾಗಿದ್ದು, ಬಳಿಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅರಣ್ಯಾಧಿಕಾರಿಗಳು ಹರಸಾಹಸಪಟ್ಟರು.

SCROLL FOR NEXT