ಕ್ರೀಡಾಪಟುಗಳಿಗೆ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದ ಸಿಎಂ. 
ರಾಜ್ಯ

ಸಾಧಕ ಕ್ರೀಡಾಪಟುಗಳಿಗೆ ಶೀಘ್ರದಲ್ಲೇ ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ

ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್ ಮತ್ತು ಇತರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಬೇಕು. ಅಂತಹ ವಾತಾವರಣ ನಿರ್ಮಿಸಲು ಮತ್ತು ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲು ಸರ್ಕಾರ ಬದ್ಧವಾಗಿದೆ.

ಬೆಂಗಳೂರು: ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್, ಪ್ಯಾರಾ ಏಷ್ಯನ್ ಗೇಮ್ಸ್ ಮತ್ತು ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ರಾಜ್ಯದ 12 ಕ್ರೀಡಾಪಟುಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ವಿವಿಧ ಇಲಾಖೆಗಳಲ್ಲಿ ಗ್ರೂಪ್ ಎ, ಬಿ ಮತ್ತು ಇತರ ಹುದ್ದೆಗಳಿಗೆ ನೇಮಕಾತಿಗೆ ಆಫರ್ ಲೆಟರ್ ವಿತರಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ 12 ಮಂದಿ ಕ್ರೀಡಾ ಪಟುಗಳಿಗೆ ಅವಕಾಶ ಪತ್ರ (ಆಫರ್ ಲೆಟರ್) ವಿತರಿಸಿದರು.

ಈ ಮಾತನಾಡಿದ ಸಿಎಂ, ಪದಕ‌ ಪಡೆದವರಿಗೆ ರಾಜ್ಯ ಸರ್ಕಾರ ನೆರವಾಗಲಿದೆ. ಕ್ರೀಡಾಪಟುಗಳಿಗೆ ಸರ್ಕಾರಿ‌ ಉದ್ಯೋಗ ನೀಡಲು‌ ತೀರ್ಮಾನಿಸಿದ್ದೇವೆ. ಸುಮಾರು‌ 12 ಜನರಿಗೆ ನೇರ ನೇಮಕಾತಿಗೆ ಅವಕಾಶ ಪತ್ರ ನೀಡುತ್ತಿದ್ದೇವೆ. 2016-17 ಒಲಿಂಪಿಕ್ಸ್ ಅಸೋಸಿಯೇಷನ್ ಏರ್ಪಾಡು ಮಾಡಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದೆ. ಆಗ ಸಾಧನೆ, ಪದಕ ಪಡೆದವರಿಗೆ ಸರ್ಕಾರದಲ್ಲಿ‌ ಆದ್ಯತೆ ಮೇಲೆ ಕೆಲಸ ನೀಡುವ ಬಗ್ಗೆ ಘೋಷಣೆ ಮಾಡಿದ್ದೆ ಎಂದು ಹೇಳಿದರು.

ನಂತರ ಬಂದ ಸರ್ಕಾರ ಕ್ರೀಡಾ ಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ಜಾರಿ ಮಾಡುವ ಪ್ರಯತ್ನ ಮಾಡಲಿಲ್ಲ. ನಾನು ಮತ್ತೆ ಅಧಿಕಾರಕ್ಕೆ ಬಂದ ಮೇಲೆ ಮಾಡಿದ್ದೇನೆ. ಪೊಲೀಸ್ ಇಲಾಖೆಯಲ್ಲಿ ಶೇ.2ರಷ್ಟು ಮೀಸಲಾತಿ ಮಾತ್ರ ಬೊಮ್ಮಾಯಿ‌ ಸರ್ಕಾರ ಮಾಡಿತ್ತು. ನಾನು ಬಂದ ಮೇಲೆ ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ.3ರಷ್ಟು ನೀಡಿದೆ. ಪದವಿ ಪಡೆದವರಿಗೆ ಗ್ರೂಪ್-ಸಿ ನೀಡಲು‌ ತೀರ್ಮಾನ ಮಾಡಿದ್ದೇವೆ. 12 ಸಾಧಕರಿಗೆ ಸರ್ಕಾರಿ ಉದ್ಯೋಗ ನೀಡುತ್ತಿದ್ದೇವೆ. ಒಬ್ಬರಿಗೆ ಮಾತ್ರ ಗ್ರೂಪ್ A, ಬಾಕಿ ಉಳಿದವರಿಗೆ ಗ್ರೂಪ್- B ಹುದ್ದೆ ನೀಡುತ್ತಿದ್ದೇವೆ ಎಂದು ತಿಳಿಸಿದರು.

ಉದ್ಯೋಗ ಪತ್ರ ಪಡೆದ, ಪದಕ‌ ವಿಜೇತರಿಗೆ ತುಂಬು ಹೃದಯದ ಅಭಿನಂದನೆಗಳು. 35-40 ವರ್ಷದ ವಯೋಮಿತಿಯನ್ನ ಮಾಡಿದ್ದೇವೆ. ಉದ್ಯೋಗಕ್ಕೆ ಸೇರಿಕೊಳ್ಳಲು 45 ವರ್ಷಗಳ ವಯೋಮಿತಿಯನ್ನು ನೀಡಿದ್ದೇವೆ. ನಮ್ಮ ಕ್ರೀಡಾಪಟುಗಳು ಒಲಿಂಪಿಕ್ಸ್ ಮತ್ತು ಇತರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಬೇಕು. ಅಂತಹ ವಾತಾವರಣ ನಿರ್ಮಿಸಲು ಮತ್ತು ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸಲು ಸರ್ಕಾರ ಬದ್ಧವಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಭೋವಿ' ನಿಗಮದಲ್ಲಿ 'ಕಮಿಷನ್' ಆರೋಪ ಬೆನ್ನಲ್ಲೇ ಮೊದಲ ತಲೆದಂಡ: ಅಧ್ಯಕ್ಷ ಸ್ಥಾನಕ್ಕೆ ಎಸ್. ರವಿಕುಮಾರ್ ರಾಜೀನಾಮೆ

34 ಮಾನವ ಬಾಂಬ್‌, 400 ಕೆಜಿ RDX, 14 ಪಾಕ್ ಭಯೋತ್ಪಾದಕರು! ಮುಂಬೈ ಪೊಲೀಸರಿಗೆ ಬೆದರಿಕೆ ಸಂದೇಶ; ಎಲ್ಲೆಡೆ ಕಟ್ಟೆಚ್ಚರ!

ಡ್ಯಾಂಗೆ ಹಾರುತ್ತಿದ್ದ ಯುವತಿಯ ರಕ್ಷಣೆ, ವ್ಯಕ್ತಿಯ ಸಮಯಪ್ರಜ್ಞೆಗೆ ವ್ಯಾಪಕ ಮೆಚ್ಚುಗೆ, Video Viral

'Delhi Metroಗೆ ಹೋಲಿಕೆ ಮಾಡಿದರೆ Bengaluru Metro ದರ ಅತ್ಯಂತ ದುಬಾರಿ': BMRCL, ರಾಜ್ಯ ಸರ್ಕಾರದ ವಿರುದ್ಧ Tejasvi Surya ಕಿಡಿ!

Thane: ವೇಶ್ಯಾವಾಟಿಕೆ ದಂಧೆ, ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ನಟಿ!

SCROLL FOR NEXT