ಬೆಂಗಳೂರು: ತನ್ನ ಸಹೋದರನ ಮೇಲೆ ಹಾಕಿ ಸ್ಟಿಕ್ ನಿಂದ ಹಲ್ಲೆ ಮಾಡಿದ ಆರೋಪದ ಮೇಲೆ ಖ್ಯಾತ ಕ್ವಿಜ್ ಮಾಸ್ಟರ್, ಎಂಸಿ ಮತ್ತು ರೆಸ್ಟೋರೇಟರ್ ಮಾರ್ಕ್ ರೇಗೊ (55) ಅವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಆಗಸ್ಟ್ 1 ರಂದು ಸಂಭವಿಸಿದೆ. ಅವರ ತಾಯಿ ಹಾಗೂ ಮಾಜಿ ಸಂಸದೆ 87 ವರ್ಷದ ಹೆಡ್ವಿಗ್ ಬ್ರಿಡ್ಜೆಟ್ ರೆಗೋ ನಿಧನದ 2 ದಿನಗಳ ನಂತರ ಘಟನೆ ನಡೆದಿದೆ.
ಕಳೆದ ಗುರುವಾರ ಬೆಳಗ್ಗೆ 8 ರಿಂದ 8.20 ರ ನಡುವೆ ಮಾರ್ಕ್ ರೆಗೊ ತನ್ನ ಸಹೋದರ ಸಂಗೀತಗಾರ ಅಲನ್ (60) ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲನ್, ಬ್ಯಾಚುಲರ್ ಆಗಿದ್ದು ಮೊದಲ ಮಹಡಿಯಲ್ಲಿ ವಾಸಿಸುತ್ತಾರೆ. ಮಾರ್ಕ್ ರೆಸ್ಟ್ ಹೌಸ್ ಕ್ರೆಸೆಂಟ್‌ನಲ್ಲಿರುವ ತುಳಸಿ ಅಪಾರ್ಟ್‌ಮೆಂಟ್ ಎದುರು ಇರುವ ಮನೆಯ ನೆಲ ಮಹಡಿಯಲ್ಲಿ ವಾಸಿಸುತ್ತಾರೆ.
ಹಲ್ಲೆಯಿಂದ ಅಲನ್ ತಲೆಗೆ ಗಂಭೀರ ಗಾಯಗಳಾಗಿವೆ. ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆಗೆ ಹೊಲಿಗೆ ಹಾಕಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ಅಲನ್ ಕುಕ್ ಟೌನ್‌ನ ಮಿಲ್ಟನ್ ಸ್ಟ್ರೀಟ್‌ನಲ್ಲಿರುವ ಡಾನ್ ಬಾಸ್ಕೋ ಪ್ರಾಂತೀಯ ಹೌಸ್‌ನಲ್ಲಿ ತಂಗಿದ್ದಾರೆ. ಅಲನ್ ಅಪಾಯದಿಂದ ಪಾರಾಗಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ದೂರು ನೀಡಿರುವ ಅಲನ್ , ನನ್ನ ಮೇಲೆ ನಡೆದಿರುವ ಎರಡನೇ ಹಲ್ಲೆ ಇದಾಗಿದೆ.ತನ್ನ ಸಹೋದರನಿಂದ ಹಲ್ಲೆ ಮತ್ತು ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿದ್ದಾರೆ. ತಮ್ಮ ಮೇಲಿನ ಹಲ್ಲೆಯ ನಂತರ, ಅಲನ್ ಘಟನೆಯ ಕುರಿತು ರೆಸ್ಟ್ ಹೌಸ್ ಪಾರ್ಕ್ ರಸ್ತೆ ನಿವಾಸಿಗಳ ಕಲ್ಯಾಣ ಸಂಘದ (RWA) ವಾಟ್ಸಾಪ್ ಗುಂಪಿನಲ್ಲಿ ತುರ್ತಾಗಿ ಸಹಾಯ ಕೋರಿದರು. “ನಮ್ಮ ಪ್ರದೇಶದ ಆತ್ಮೀಯ ನಿವಾಸಿಗಳೇ, ನನಗೆ ನಿಮ್ಮ ಸಹಾಯ ತುರ್ತಾಗಿ ಬೇಕು. ನಮ್ಮ ಕುಟುಂಬದ ಮನೆಯಲ್ಲಿ (ಕೆಳಗಡೆ) ವಾಸಿಸುವ ನನ್ನ ಕಿರಿಯ ಸಹೋದರ ಮಾರ್ಕ್ ರೇಗೊ ಎರಡನೇ ಬಾರಿಗೆ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ಅಲನ್ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾರೆ.
ಡಿಸ್ಚಾರ್ಜ್ ಆದ ನಂತರ, ಅಲನ್ ಮತ್ತೊಂದು ಸಂದೇಶವನ್ನು ಕಳುಹಿಸಿದ್ದಾರೆ, ಮಾರ್ಕ್‌ನ ಕುಡಿತದ ದುಶ್ಚಟದಿಂದಾಗಿ ನನಗೆ ಭಯವಿದ್ದು, ನಿದ್ರೆ ಬರುವುದಿಲ್ಲ,ನಿದ್ದೆ ಮಾಡಿದ್ದರೇ ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ರೀತಿಯ ಹೆಚ್ಚಿನ ಒತ್ತಡವು ಪಾರ್ಶ್ವವಾಯು ಅಥವಾ ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ನನ್ನ ವೈದ್ಯರು ನನಗೆ ಎಚ್ಚರಿಸಿದ್ದಾರೆ ಎಂದು ಸಂದೇಶ ಕಳುಹಿಸಿದ್ದಾರೆ.
ಏತನ್ಮಧ್ಯೆ, ಕಬ್ಬನ್ ಪಾರ್ಕ್ ಪೊಲೀಸರು ಬೌರಿಂಗ್ ಆಸ್ಪತ್ರೆಗೆ ಸ್ಥಳಾಂತರಿಸಿದ ನಂತರ ವಾಟ್ಸಾಪ್ ಗ್ರೂಪ್‌ನಲ್ಲಿ ಆಡಿಯೊ ಸಂದೇಶವನ್ನು ಕಳುಹಿಸಿದ್ದಾರೆ, ಸಂತ್ರಸ್ತರ ಕುಟುಂಬದ ಯಾವುದೇ ಸದಸ್ಯರು ತಕ್ಷಣ ಅವರನ್ನು ಆಸ್ಪತ್ರೆಗೆ ಸಂಪರ್ಕಿಸುವಂತೆ ಕೇಳಿಕೊಂಡಿದ್ದಾರೆ. ಹಲ್ಲೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಪೊಲೀಸರು ರೆಸ್ಟ್ ಹೌಸ್ ಪಾರ್ಕ್ ರಸ್ತೆ RWA ಯೊಂದಿಗೆ ಮಾತನಾಡಿದ್ದಾರೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.