ರಾಜ್ಯ

ಬೆಂಗಳೂರು: ಒಂದು ರಾತ್ರಿಯಲ್ಲಿ 52 ಮಿಮೀ ಮಳೆ; ಮಿಂದು ತೇಲಾಡಿದ ಸಿಲಿಕಾನ್ ಸಿಟಿ

ಕಳೆದ ವರ್ಷದಂತೆ ಈ ಬಾರಿ ಕೂಡ ಮಹದೇವಪುರ ವಲಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತರ ಅನೇಕ ಕಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಬೆಂಗಳೂರು: ಈ ವರ್ಷ ಮುಂಗಾರು ಮಳೆ ಆರಂಭವಾದ ನಂತರ ಭಾರೀ ವರ್ಷಧಾರೆಯನ್ನು ಇಂದು ಕಂಡ ರಾಜಧಾನಿ ಬೆಂಗಳೂರು ನಿನ್ನೆ ಭಾನುವಾರ ತಡರಾತ್ರಿಯಿಂದ ಇಂದು ಸೋಮವಾರ ಬೆಳಗಿನ ಜಾವದವರೆಗೆ 52 ಮಿ.ಮೀ ಮಳೆಯಾಗಿದ್ದು, ನಗರ ನಿವಾಸಿಗಳನ್ನು ಆತಂಕಕ್ಕೀಡುಮಾಡಿದೆ.

ಕಳೆದ ವರ್ಷದಂತೆ ಈ ಬಾರಿ ಕೂಡ ಮಹದೇವಪುರ ವಲಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಇತರ ಅನೇಕ ಕಡೆ ತಗ್ಗು ಪ್ರದೇಶಗಳು ಜಲಾವೃತವಾಗಿದೆ.

ಇಂದು ಬೆಳಗಿನ ಜಾವ ಮಳೆಯಲ್ಲೇ ವಾಹನ ಸವಾರರು ತಮ್ಮ ಕಚೇರಿ ಹಾಗೂ ದಿನನಿತ್ಯದ ಕೆಲಸದ ಸ್ಥಳಗಳಿಗೆ ತೆರಳಿದರು. ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು. ಶಾಲಾ ವಾಹನಗಳು ಜಲಾವೃತಗೊಂಡ ರಸ್ತೆಗಳಲ್ಲಿ ಸಿಲುಕಿಕೊಂಡವು. ಐಟಿ ವಲಯದ ವರ್ತೂರು ಮತ್ತು ಬೆಳ್ಳಂದೂರಿನಲ್ಲಿ ಮುಖ್ಯರಸ್ತೆ ಜಲಾವೃತಗೊಂಡಿದ್ದರಿಂದ ಕಚೇರಿಗೆ ತೆರಳುವವರು ಟ್ರಾಫಿಕ್ ಸಮಸ್ಯೆ ಎದುರಿಸಿದರು.

ಹೆಬ್ಬಾಳ ಮೇಲ್ಸೇತುವೆ ಹಾಗೂ ಎಸ್ಟೀಮ್ ಮಾಲ್ ಕಡೆಯಿಂದ ಮೇಖ್ರಿ ವೃತ್ತದತ್ತ ಸಾಗುವ ವಾಹನ ಸಂಚಾರ ನಿಧಾನಗತಿಯಲ್ಲಿ ಸಾಗಿತು. ವೀರಸಂದ್ರ ಬಳಿ ಎಲೆಕ್ಟ್ರಾನಿಕ್ ಸಿಟಿ ಎಲಿವೇಟೆಡ್ ರಸ್ತೆಯಿಂದ ಹೊರಡುವ ವಾಹನಗಳು ಟ್ರಾಫಿಕ್‌ನಲ್ಲಿ ಸಿಲುಕಿಹಾಕಿಕೊಂಡವು. ಈ ರಸ್ತೆಯಲ್ಲಿ ಸಂಚರಿಸುವ ಜನರು ಬೇರೆ ಮಾರ್ಗಗಳತ್ತ ಮುಖ ಮಾಡಿದರು.

ಬಿಬಿಎಂಪಿ ವ್ಯಾಪ್ತಿಯ ಹಲವೆಡೆ ಮಳೆ ನೀರು ನಿಂತಿದ್ದರಿಂದ ಸಮಸ್ಯೆ ಉಂಟಾಗಿದೆ. ಹೆಬ್ಬಾಳ, ಮೇಖ್ರಿ ವೃತ್ತ, ನಾಗವಾರದಲ್ಲಿ ಮಳೆ ನೀರು ಚರಂಡಿಯಲ್ಲಿ ಹರಿಯುವಂತೆ ಪೊಲೀಸರು, ಬಿಬಿಎಂಪಿಯ ವಿಪತ್ತು ನಿರ್ವಹಣಾ ಪಡೆ ಕಸಕಡ್ಡಿಗಳನ್ನು ತೆಗೆಯುವಲ್ಲಿ ನಿರತರಾದರು.

ಎಷ್ಟು ಮಳೆಯಾಗಿದೆ?

ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ ಕೊಡಿಗೇಹಳ್ಳಿಯಲ್ಲಿ ಅತಿ ಹೆಚ್ಚು ಅಂದರೆ 61.5 ಮಿ.ಮೀ ಮಳೆಯಾಗಿದೆ. ಅದೇ ರೀತಿ ವಿವಿ ಪುರದಲ್ಲಿ 57.5, ವಿದ್ಯಾಪೀಠದಲ್ಲಿ 56, ನಾಯಂಡಹಳ್ಳಿಯಲ್ಲಿ 55, ಹಗದೂರಿನಲ್ಲಿ 54, ರಾಜರಾಜೇಶ್ವರಿ ನಗರದಲ್ಲಿ 53 ಮಿ.ಮೀ.

ಎಚ್ ಎಸ್ ಆರ್ ಲೇಔಟ್ ನಲ್ಲಿ ವಿ.ನಾಗೇನಹಳ್ಳಿ 50.5 ಮಿ.ಮೀ, ರಾಜರಾಜೇಶ್ವರಿನಗರ (2)50.5 ಮಿ.ಮೀ, ಪುಲಕೇಶಿನಗರ 49.5 ಮಿ.ಮೀ, ಯಲಹಂಕ 49 ಮಿ.ಮೀ, ಅರಕೆರೆ 48.5 ಮಿ.ಮೀ, ದೊಡ್ಡನೆಕ್ಕುಂದಿ 4 5ಮಿ.ಮೀ, 44 ಮಿ.ಮೀ ಮಳೆ ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT