ಭೋಜನ ಬಂಡಿಗಳಾಗಿ ಪರಿವರ್ತನೆಗೊಂಡಿರುವ ಬಿಎಂಟಿಸಿ ಬಸ್ ಗಳು. 
ರಾಜ್ಯ

BMTC ಸ್ಕ್ರ್ಯಾಪ್ ಬಸ್'ಗಳ ಪರಿವರ್ತನೆ; 'ಭೋಜನ ಬಂಡಿ'ಗಳಾಗಿ ಬಳಕೆ!

10.64 ಲಕ್ಷ ಕಿ.ಮೀ ಕ್ರಮಿಸಿದ ಉತ್ತರ ವಿಭಾಗಕ್ಕೆ ಸೇರಿದ ಬಿಎಂಟಿಸಿ ಸ್ಟೋರ್ ಬಸ್ ಅನ್ನು ದಾಸನಾಪುರದ ಸೆಂಟ್ರಲ್ ವರ್ಕ್‌ಶಾಪ್-4 ರ ತಾಂತ್ರಿಕ ಮತ್ತು ಇತರೆ ಸಿಬ್ಬಂದಿಗಳು ‘ಭೋಜನ ಬಂಡಿ’ (ಮೊಬೈಲ್ ಕ್ಯಾಂಟೀನ್)ಗಳಾಗಿ ಪರಿವರ್ತಿಸಿದ್ದಾರೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಕೆಲ ತಾಂತ್ರಿಕ ಸಿಬ್ಬಂದಿ ಸ್ಕ್ರ್ಯಾಪ್​ ಆದ ಬಸ್ ಅನ್ನು ಮೊಬೈಲ್ ಕ್ಯಾಂಟೀನ್ ಗಳಾಗಿ ಪರಿವರ್ತಿಸಿದ್ದು, ಈ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

10.64 ಲಕ್ಷ ಕಿ.ಮೀ ಕ್ರಮಿಸಿದ ಉತ್ತರ ವಿಭಾಗಕ್ಕೆ ಸೇರಿದ ಬಿಎಂಟಿಸಿ ಸ್ಟೋರ್ ಬಸ್ ಅನ್ನು ದಾಸನಾಪುರದ ಸೆಂಟ್ರಲ್ ವರ್ಕ್‌ಶಾಪ್-4 ರ ತಾಂತ್ರಿಕ ಮತ್ತು ಇತರೆ ಸಿಬ್ಬಂದಿಗಳು ‘ಭೋಜನ ಬಂಡಿ’ (ಮೊಬೈಲ್ ಕ್ಯಾಂಟೀನ್)ಗಳಾಗಿ ಪರಿವರ್ತಿಸಿದ್ದಾರೆ, ಸಿಬ್ಬಂದಿಗಳ ಈ ಶ್ರಮಕ್ಕೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕ್ಯಾಂಟಿನ್​ಗಳು ಇಲ್ಲದ ಬಿಎಂಟಿಸಿ ಡಿಪೋಗಳಿಗೆ ಈ ಮೊಬೈಲ್​ ಕ್ಯಾಂಟೀನ್ ಸಿದ್ಧಪಡಿಸಲಾಗಿದೆ. ಹಳೆ BMTC ಬಸ್​ಗಳನ್ನೇ ಕ್ಯಾಂಟೀನ್​ಗಳಾಗಿ ಮಾಡಿದ್ದು, ಇದಕ್ಕೆ ಭೋಜನ ಬಂಡಿ ಎಂದು ಹೆಸರಿಡಲಾಗಿದೆ.

ಈ ಮೊಬೈಲ್ ಕ್ಯಾಂಟೀನ್‌ನಲ್ಲಿ ಆಸನ, ಟೇಬಲ್, ಫ್ಯಾನ್ ಮತ್ತು ವಾಶ್ ಬೇಸಿನ್ ಇದೆ. ಇದಲ್ಲದೆ, ಇದು ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಹೊಂದಿದೆ. ಕ್ಯಾಂಟೀನ್‌ನ ಮೇಲ್ಭಾಗದಲ್ಲಿ ಗಾಜಿನ ಕಿಟಕಿ ಹೊಂದಿದ್ದು, ಗಾಳಿ ಮತ್ತು ಬೆಳಕು ಬರುವಂತೆ ವಿನ್ಯಾಸಗೊಳಿಸಲಾಗಿದೆ.

ಈ ಕುರಿತು ಬಿಎಂಟಿಸಿ ಪ್ರಕಟಣೆ ಹೊರಡಿಸಿದ್ದು, ಸಿಬ್ಬಂದಿಗಳ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮೊಬೈಲ್ ಕ್ಯಾಂಟೀನ್‌ಗೆ 'ಬನ್ನಿ, ಕುಳಿತುಕೊಳ್ಳಿ, ಒಟ್ಟಿಗೆ ಆಹಾರ ಸೇವಿಸೋಣ...ಇದು ತಾಂತ್ರಿಕ ಸಿಬ್ಬಂದಿಯ ಸೃಜನಶೀಲತೆ ಮತ್ತು ಶ್ರಮಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT