ನಟ ದರ್ಶನ್  
ರಾಜ್ಯ

ಬ್ರಾಂಡೆಡ್ ಟೀ ಶರ್ಟ್, ಕೂಲಿಂಗ್ ಗ್ಲಾಸ್ ನೊಂದಿಗೆ ಬಳ್ಳಾರಿ ಜೈಲಿಗೆ ಎಂಟ್ರಿ ಕೊಟ್ಟ ದರ್ಶನ್: ಹೊಸ ವಿವಾದ!

ಜೈಲಾಧಿಕಾರಿಗಳು ದರ್ಶನ್​ ಆಗಮನದ ಬಳಿಕ ಹೊಸ ಕೈದಿ ನಂಬರ್​ ನೀಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ 6,106 ಕೈದಿ ನಂಬರ್​ ನೀಡಲಾಗಿತ್ತು. ಆದರೆ ಬಳ್ಲಾರಿ ಜೈಲಿನಲ್ಲಿ 511 ಕೈದಿ ನಂಬರ್​ ದರ್ಶನ್​ಗೆ ಸಿಕ್ಕಿದೆ.

ಬೆಂಗಳೂರು: ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ ಹೆಸರಿಗೆ ಮಾತ್ರ ಜೈಲು, ಅರಮನೆಯಲ್ಲಿದ್ದಂತೆ ರಾಜಾತಿಥ್ಯ ಸಿಗುತ್ತಿದೆ ಎಂದು ಫೋಟೋ-ವಿಡಿಯೊ ವೈರಲ್ ಆಗಿ ವಿವಾದವೆದ್ದು ಬಳ್ಳಾರಿ ಸೆಂಟ್ರಲ್ ಜೈಲಿಗೆ ಶಿಫ್ಟ್ ಆದ ನಟ ದರ್ಶನ್ ಗೆ ಅಲ್ಲಿ ಕೂಡ ವಿವಾದ ಬೆಂಬಿಡದ ಭೂತದಂತೆ ಕಾಡುತ್ತಿದೆ.

ಇಂದು ಬಳ್ಳಾರಿ ಜೈಲಿಗೆ ನಟ ದರ್ಶನ್ ಎಂಟ್ರಿಯಾಗುತ್ತಿದ್ದಂತೆ ಹೊಸ ವಿವಾದವೊಂದು ಹುಟ್ಟಿಕೊಂಡಿದೆ. ಪ್ಯೂಮಾ ಬ್ರಾಂಡೆಡ್ ಟೀ ಶರ್ಟ್, ಕಪ್ಪು ಕೂಲಿಂಗ್ ಗ್ಲಾಸನ್ನು ಟೀ ಶರ್ಟಿಗೆ ಸಿಕ್ಕಿಸಿ ಎಡಗೈಯಲ್ಲಿ ಕ್ರೇಪ್ ಬ್ಯಾಂಡ್ ಧರಿಸಿ, ಬೆಡ್ ಶೀಟ್ ಸುತ್ತಿಕೊಂಡು, ಬಲಗೈಯಲ್ಲಿ ನೀರಿನ ಬಾಟಲ್ ಹಿಡಿದು ಮುಖದಲ್ಲಿ ಸ್ವಲ್ಪ ಆತಂಕ ಮತ್ತು ನಗುವಿನೊಂದಿಗೆ ಪೊಲೀಸರಿಗೆ ಹ್ಯಾಂಡ್ ಶೇಕ್ ಕೊಟ್ಟು ಜೈಲಿನ ಬ್ಯಾರಕ್​ಗೆ ಎಂಟ್ರಿ ಕೊಟ್ಟಿದ್ದಾರೆ.ಆದರೀಗ ದರ್ಶನ್​ ಅಷ್ಟು ಸ್ಟೈಲ್​ ಆಗಿ ಜೈಲಿಗೆ ಎಂಟ್ರಿ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ. ಅನೇಕರು ಕೊಲೆ ಆರೋಪಿಗೆ ಇಷ್ಟೆಲ್ಲಾ ಫೆಸಿಲಿಟಿ ಯಾರು ಕೊಟ್ಟರು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಸೌಲಭ್ಯಗಳೊಂದಿಗೆ ಅವರನ್ನು ಜೈಲಿನೊಳಗೆ ಬಿಡಲು ಅವಕಾಶ ಕೊಟ್ಟಿರುವುದೇಕೆ ಎಂದು ಪೊಲೀಸರು ಮತ್ತು ಜೈಲಿನ ಸಿಬ್ಬಂದಿಯನ್ನು ಪ್ರಶ್ನಿಸಲಾಗುತ್ತಿದೆ. ದರ್ಶನ್ ಜೈಲಿಗೆ ಎಂಟ್ರಿ ಆಗುವಾಗ ಬಿಗಿ ಭದ್ರತೆ ಆಯೋಜನೆ ಮಾಡಲಾಗಿತ್ತು.

ಪೊಲೀಸರ ಸಮ್ಮುಖದಲ್ಲಿ ಅವರು ಜೈಲಿನ ಒಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮೊದಲು ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಲಾಗುತ್ತದೆ.ಬಳ್ಳಾರಿಯಲ್ಲಿ ಜೈಲಿನ ನಿಯಮಗಳನ್ನ ಪಾಲನೆ ಮಾಡಲು ದರ್ಶನ್​ಗೆ ಸೂಚನೆ ನೀಡಲಾಗಿದೆ. ಹೀಗಾಗಿಯೇ ದರ್ಶನ್ ಹಾಕಿದ್ದ ಬೆಳ್ಳಿ ಕಡಗ, ಸನ್​ಗ್ಲಾಸ್, ಕತ್ತಿನಲ್ಲಿ ಹಾಕಿದ್ದ ಮಣಿ ಸರ ಹಾಗೂ ದಾರವನ್ನು ಪೊಲೀಸರು ಬಿಚ್ಚಿಸಿದ್ದಾರೆ.

ಕೈದಿ ನಂಬರ್ 511: ಜೈಲಾಧಿಕಾರಿಗಳು ದರ್ಶನ್​ ಆಗಮನದ ಬಳಿಕ ಹೊಸ ಕೈದಿ ನಂಬರ್​ ನೀಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ 6,106 ಕೈದಿ ನಂಬರ್​ ನೀಡಲಾಗಿತ್ತು. ಆದರೆ ಬಳ್ಲಾರಿ ಜೈಲಿನಲ್ಲಿ 511 ಕೈದಿ ನಂಬರ್​ ದರ್ಶನ್​ಗೆ ಸಿಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್