ಅರುಂಧತಿ ನಾಗ್  
ರಾಜ್ಯ

ರಂಗಶಂಕರದಂತಹ ಥಿಯೇಟರ್ ಗಳು ಸಣ್ಣ ಪಟ್ಟಣಗಳಲ್ಲಿ ತಲೆಯೆತ್ತಬೇಕು: ಅರುಂಧತಿ ನಾಗ್

ಅರುಂಧತಿ ನಾಗ್ ಅವರು ರಂಗಶಂಕರದ ಸಂಸ್ಥಾಪಕರು -- ಬೆಂಗಳೂರಿನ ಅಚ್ಚುಮೆಚ್ಚಿನ ರಂಗಮಂದಿರಗಳಲ್ಲಿ ಒಂದು ಮತ್ತು ಅತ್ಯಂತ ಜನಪ್ರಿಯವಾದದ್ದು. ರಂಗಶಂಕರ ಇತ್ತೀಚೆಗೆ ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸಿದೆ.

ಬೆಂಗಳೂರು: ''ನನಗೆ ಸೂಪರ್ ಪವರ್ ಇದ್ದರೆ ಭಾರತದ ಸಣ್ಣ ಪಟ್ಟಣಗಳಲ್ಲಿ ರಂಗಶಂಕರದಂತಹ ರಂಗಮಂದಿರಗಳನ್ನು ಸ್ಥಾಪಿಸುವಂತೆ ಶ್ರೀಮಂತರನ್ನು ಕೇಳಿಕೊಳ್ಳುತ್ತಿದೆ'' ಇದು ಹಿರಿಯ ರಂಗಕರ್ಮಿ, ನಟಿ ರಂಗಶಂಕರದ ನಿರ್ದೇಶಕಿ 2024ನೇ ಸಾಲಿನ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (New Indian Express)ನ ದೇವಿ ಪ್ರಶಸ್ತಿ ವಿಜೇತೆ ಅರುಂಧತಿ ನಾಗ್ ಅವರ ಮಾತು.

ಅರುಂಧತಿ ನಾಗ್ ಅವರು ರಂಗಶಂಕರದ ಸಂಸ್ಥಾಪಕರು -- ಬೆಂಗಳೂರಿನ ಅಚ್ಚುಮೆಚ್ಚಿನ ರಂಗಮಂದಿರಗಳಲ್ಲಿ ಒಂದು ಮತ್ತು ಅತ್ಯಂತ ಜನಪ್ರಿಯವಾದದ್ದು. ರಂಗಶಂಕರ ಇತ್ತೀಚೆಗೆ ತನ್ನ 20ನೇ ವಾರ್ಷಿಕೋತ್ಸವವನ್ನು ಆಚರಿಸಿದೆ.

ಅವರು 'ಲೀಡಿಂಗ್ ಚೇಂಜ್: ವಾಟ್ಸ್ ದಿ ಸೂಪರ್ ಪವರ್' ಎಂಬ ಶೀರ್ಷಿಕೆಯ ದುಂಡುಮೇಜಿನ ಮಾತುಕತೆಯಲ್ಲಿ ಖ್ಯಾತ ಲೇಖಕಿ ಮತ್ತು ಪತ್ರಕರ್ತೆ ಕಾವೇರಿ ಬಾಮ್‌ಜೈ ಅವರೊಂದಿಗೆ ನಡೆದ ಸಂಭಾಷಣೆ ವೇಳೆ ಹೀಗೆ ಹೇಳಿದ್ದಾರೆ. ನಿನ್ನೆ ಶನಿವಾರ ಬೆಂಗಳೂರಿನಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಸ್ಥಾಪಿಸಿದ ದೇವಿ ಪ್ರಶಸ್ತಿಗಳ 29 ನೇ ಆವೃತ್ತಿಯ ಕಾರ್ಯಕ್ರಮ ಏರ್ಪಟ್ಟಿತ್ತು.

ದೆಹಲಿ, ಮುಂಬೈ, ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ರಂಗಮಂದಿರಗಳಿರುತ್ತವೆ. ಅಲ್ಲಿಂದಾಚೆಗೆ ಸಣ್ಣಪುಟ್ಟ ಪಟ್ಟಣಗಳಲ್ಲಿ ರಂಗಮಂದಿರಗಳು ತಲೆಯೆತ್ತಬೇಕು. ರಂಗಮಂದಿರಗಳನ್ನು 'ಬಿ' ಮತ್ತು 'ಸಿ' ವರ್ಗದ ನಗರಗಳಿಗೆ ಕೊಂಡೊಯ್ಯುವ ಸಮಯ ಬಂದಿದೆ ಎಂದು ಹೇಳಿದರು. ಸಣ್ಣ ಪಟ್ಟಣಗಳಲ್ಲಿ ರಂಗಶಂಕರದಂತಹ ರಂಗಮಂದಿರಗಳು ಸ್ಥಾಪನೆಯಾಗುವುದರಿಂದ ದೊಡ್ಡ ಬದಲಾವಣೆಯನ್ನು ತರಬಹುದು, ಇದು ತಮ್ಮ ಕನಸಾಗಿದೆ ಎಂದರು.

ಶಿಕ್ಷಣತಜ್ಞ ಮತ್ತು ನೀವ್ ಶಾಲೆಗಳ ಸಂಸ್ಥಾಪಕ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಕವಿತಾ ಗುಪ್ತಾ ಸಬರ್ವಾಲ್ ಮಾತನಾಡಿ, ನಾವು ನಮ್ಮ ಶಾಲೆಯಲ್ಲಿ ಸುಮಾರು 15,000 ಮಕ್ಕಳನ್ನು ಹೊಂದಿದ್ದೇವೆ. ಸರ್ಕಾರಿ ಮತ್ತು ಅನಾಥಾಶ್ರಮ ಶಾಲೆಗಳೊಂದಿಗೆ ಕೆಲಸ ಮಾಡುತ್ತೇವೆ. ಸರಿಯಾದ ಶಿಕ್ಷಣವನ್ನು ಹೊಂದಿರದ ಅನೇಕ ಮಕ್ಕಳನ್ನು ನಾವು ನೋಡುತ್ತೇವೆ. ಎಲ್ಲ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಬೇಕೆಂದು ನನ್ನ ಇಚ್ಛೆ ಎಂದರು.

ಇದಕ್ಕೂ ಮುನ್ನ ದುಂಡುಮೇಜಿನ ಸಭೆಯ ಆರಂಭದಲ್ಲಿ ಕವಿತಾ ಮಾತನಾಡಿ, ಭಾರತ ಬದಲಾಗುತ್ತಿರುವ ಸಂದರ್ಭದಲ್ಲಿ ಶಿಕ್ಷಣವು ಹೆಚ್ಚಾಗಿ ಮುಂದುವರಿದಿಲ್ಲ. 'ಶಿಕ್ಷಣದಲ್ಲಿ ಶ್ರೇಷ್ಠತೆ' ಎಂದರೆ ಏನು ಎಂಬ ವ್ಯಾಖ್ಯಾನವನ್ನು ನಾವು ಬದಲಾಯಿಸಬೇಕಾಗಿದೆ," ಶಿಕ್ಷಣವು ಅದರ ದೃಷ್ಟಿಯನ್ನು ಮರು ವ್ಯಾಖ್ಯಾನಿಸಬೇಕು ಎಂದು ಅಭಿಪ್ರಾಯಪಟ್ಟರು.

ಲೇಖಕಿ ಸಂಹಿತಾ ಅರ್ನಿ , ಆರ್ಥಿಕತೆಯನ್ನು ಸೃಷ್ಟಿಸಿ ಕಲೆಗಳನ್ನು ಹೆಚ್ಚು ಉತ್ಪಾದಕವಾಗಿಸಿ ಹೆಚ್ಚಿನ ಆದಾಯ ಗಳಿಸಬೇಕು ಎಂದರು.

ಸಿಕ್ಕಿರುವಂತಹ ಸರಿಯಾದ ಅವಕಾಶವನ್ನು ಪಡೆಯದ ಅನೇಕ ಯುವ ಕಥೆಗಾರರಿದ್ದಾರೆ, ಪ್ರಕಟಣೆ, ಮಾರುಕಟ್ಟೆ ಮತ್ತು ಆದಾಯದ ಮಾದರಿಯನ್ನು ಬದಲಾಯಿಸುವ ಮೂಲಸೌಕರ್ಯಗಳನ್ನು ಸೃಷ್ಟಿಸುವ ಮೂಲಕ ಕಲೆಗಳನ್ನು ಹೆಚ್ಚು ಉತ್ಪಾದಕವಾಗಿಸಲು ನಾನು ಬಯಸುತ್ತೇನೆ, ಇದರಿಂದ ಕಲಾ ವೃತ್ತಿಪರರು ಬೆಳೆದು ಹೆಚ್ಚಿನ ಆದಾಯವನ್ನು ತರಬಹುದು ಎಂದರು,

ವಿಜ್ಞಾನ ಮತ್ತು ತಂತ್ರಜ್ಞಾನದ ಇತಿಹಾಸಕಾರರಾದ ಜಾಹ್ನವಿ ಫಾಲ್ಕಿ ಅವರು ಸಾರ್ವಜನಿಕ ಗ್ರಂಥಾಲಯಗಳು, ಉದ್ಯಾನವನಗಳು ಮತ್ತು ಮ್ಯೂಸಿಯಂ ತರಹದ ಗ್ಯಾಲರಿಗಳನ್ನು ಸ್ಥಾಪಿಸಬೇಕೆಂದು ಹೇಳಿದರು, ವೈಫಲ್ಯಗಳು ಎಲ್ಲೆಡೆ ಇವೆ, ಆದರೆ ಎಲ್ಲಿಯೂ ಕಾಣಿಸುವುದಿಲ್ಲ. ಇತಿಹಾಸಕಾರರು ವಿಜ್ಞಾನದ ಇತಿಹಾಸದಲ್ಲಿ ವಿವಿಧ ಅಂಶಗಳ ಬಗ್ಗೆ ಬರೆಯುವಾಗಲೂ, ವೈಫಲ್ಯಗಳನ್ನು ವಿರಳವಾಗಿ ಹೇಳಲಾಗುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

SCROLL FOR NEXT