ಬೆಂಗಳೂರು: ಡಿಸೆಂಬರ್ 1 ರಿಂದ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಫ್ಲಾಟ್‌ಗಳ ಮಾರಾಟದ ಸಮಯದಲ್ಲಿ ಅದರ ಸಂಪೂರ್ಣ ವೆಚ್ಚದೊಂದಿಗೆ ಒಂದು ವರ್ಷದ ನಿರ್ವಹಣಾ ಶುಲ್ಕವನ್ನು ಸೇರಿಸಲು ನಿರ್ಧರಿಸಿದೆ. ಈ ಸಂಬಂಧ ಬಿಡಿಎ ಆಯುಕ್ತ ಎನ್.ಜಯರಾಮ್ ಆಂತರಿಕ ಆದೇಶ ಹೊರಡಿಸಿದ್ದಾರೆ.
ನವೆಂಬರ್ 30 ರಂದು ಆದೇಶ ಬಿಡುಗಡೆಯಾಗಿದೆ. ಬಿಡಿಎಯ ಪ್ರತಿಯೊಂದು ವಸತಿ ಸಂಕೀರ್ಣವು ಒಂದು ವರ್ಷದೊಳಗೆ ತನ್ನದೇ ಆದ ಸಂಘವನ್ನು ಸ್ಥಾಪಿಸಬೇಕು ಮತ್ತು ನಿರ್ವಹಣೆ ಚಟುವಟಿಕೆಗಳನ್ನು ನೋಡಿಕೊಳ್ಳಬೇಕು ಎಂದು ಆದೇಶಿಸಿದೆ. ಇದನ್ನು ಮಾಡದಿದ್ದರೆ, ಬಿಡಿಎ ನಿರ್ವಹಣಾ ಶುಲ್ಕವನ್ನು ಸಂಗ್ರಹಿಸುವುದನ್ನು ಮುಂದುವರಿಸುತ್ತದೆ ಎಂದು ತಿಳಿಸಿದೆ. ಸುತ್ತೋಲೆಯಲ್ಲಿ ನಿರ್ದಿಷ್ಟಪಡಿಸಿದ ಮತ್ತೊಂದು ಪ್ರಮುಖ ಕ್ರಮವೆಂದರೆ, ಬಿಡಿಎ ಫ್ಲಾಟ್‌ಗಳ ಮಾರಾಟಕ್ಕೆ ಅನುಕೂಲವಾಗುವ ಮಾರ್ಕೆಟಿಂಗ್ ಏಜೆನ್ಸಿಗಳಿಗೆ ಬಿಡಿಎ ಪಾವತಿಸಬೇಕಾದ ಶೇ.3ರಷ್ಟು ಕಮಿಷನ್ ಅನ್ನು ಇನ್ನು ಮುಂದೆ ಖರೀದಿದಾರರು ಫ್ಲಾಟ್‌ನ ಸಂಪೂರ್ಣ ವೆಚ್ಚವನ್ನು ಪಾವತಿಸಿದ ನಂತರವೇ ಅವರಿಗೆ ಪಾವತಿಸಲಾಗುವುದು ಎಂದು ಬಿಡಿಎ ಆಯುಕ್ತ ಎನ್ ಜಯರಾಮ್ ದಿ ನ್ಯ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ಒಂದು ಕಾಂಪ್ಲೆಕ್ಸ್‌ನೊಳಗೆ ನಮ್ಮ ಎಲ್ಲಾ ಫ್ಲಾಟ್ ಹಂಚಿಕೆದಾರರು ಸಾಧ್ಯವಾದಷ್ಟು ಬೇಗ ತಮ್ಮ ಸಂಘವನ್ನು ರಚಿಸಬೇಕೆಂದು ಮತ್ತು ನಿರ್ವಹಣಾ ಚಟುವಟಿಕೆಗಳನ್ನು ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.
ಉದ್ಯಾನ, ಲಿಫ್ಟ್‌ಗಳು, ಕೊಳಚೆ ನೀರು ಸಂಸ್ಕರಣಾ ಘಟಕ ಹೀಗೆ ಸಾಮಾನ್ಯ ಪ್ರದೇಶವನ್ನು ಸರಿಯಾಗಿ ನಿರ್ವಹಿಸಬೇಕಾಗಿದ್ದು ಇದಕ್ಕೆ ಹಣದ ಅಗತ್ಯವಿದೆ. ನಾವು ಅದನ್ನು ಫ್ಲಾಟ್ ವೆಚ್ಚದೊಂದಿಗೆ ಮುಂಚಿತವಾಗಿ ಸಂಗ್ರಹಿಸಿದರೆ, ನಿಯಮಿತ ನಿರ್ವಹಣಾ ಕಾರ್ಯವನ್ನು ನಿರ್ವಹಿಸುವಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಅಸೋಸಿಯೇಷನ್ ರಚನೆಯಾಗುವವರೆಗೆ, ನಿರ್ವಹಣೆಯ ಪಾವತಿಗಾಗಿ ನಿಯಮಿತವಾಗಿ ಮಾಲೀಕರನ್ನು ಹಿಂಬಾಲಿಸುವುದು ಬಿಡಿಎಗೆ ಕಷ್ಟವಾಗಿದೆ. ಅನೇಕ ಮಾಲೀಕರು ತಮ್ಮ ಫ್ಲಾಟ್ ಅನ್ನು ಖಾಲಿ ಬಿಡುತ್ತಾರೆ ಮತ್ತು ಅವುಗಳನ್ನು ಖರೀದಿಸಿದ ನಂತರ ನಿರ್ವಹಣೆಯನ್ನು ಪಾವತಿಸಲು ಚಿಂತಿಸುವುದಿಲ್ಲ ಎಂದು ಅವರು ಹೇಳಿದರು.
ಹೆಚ್ಚಿನ ನಿರ್ವಹಣಾ ಶುಲ್ಕವನ್ನು ಪಾವತಿಸಬೇಕಾದ ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್ ಮಾಲೀಕರಿಂದ ಹೆಚ್ಚಿನ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿಯ ಬಂದಿದೆ, ಏಕೆಂದರೆ ಮನೆಗಳನ್ನು ಖರೀದಿಸಿದ ನಂತರ ಮನೆಗಳನ್ನು ಖಾಲಿ ಬಿಡಲಾಗುತ್ತದೆ ಅಥವಾ ಕೆಲವು ಬಿಡಿಎನಲ್ಲಿ ಮಾರಾಟವಾಗದೆ ಉಳಿದಿವೆ. ನಾವು ಈಗಾಗಲೇ ಖಾಸಗಿ ವಲಯದಲ್ಲಿ ಈ ವ್ಯವಸ್ಥೆಯನ್ನು ಹೊಂದಿದ್ದೇವೆ. ಹೆಚ್ಚಿನ ಬಿಲ್ಡರ್‌ಗಳು ನಿರ್ವಹಣಾ ಠೇವಣಿಯನ್ನು ಆರು ತಿಂಗಳ ಅವಧಿಗೆ ಅಥವಾ ಪ್ರತಿ ತ್ರೈಮಾಸಿಕದಲ್ಲಿ ಅದನ್ನು ನಿರ್ವಹಿಸಲು ಸಂಘವು ರಚನೆಯಾಗುವವರೆಗೆ ಮುಂಚಿತವಾಗಿ ಸಂಗ್ರಹಿಸುತ್ತಾರೆ. ಇದನ್ನು ಮೊದಲು ಕಾರ್ಪಸ್ ಫಂಡ್ ಎಂದು ಕರೆಯಲಾಗುತ್ತಿತ್ತು, ಪಾವತಿಸಬೇಕಾದ ಮಾಸಿಕ ಠೇವಣಿಯನ್ನು ಅದರಿಂದ ಕಡಿತಗೊಳಿಸಲಾಗುತ್ತದೆ. ಅವರು ನಿಧಿಯ ಕೊರತೆಯನ್ನು ಎದುರಿಸಿದಾಗ ಹಣವನ್ನು ತಿರುಗಿಸಲು ಇದು ಅವರಿಗೆ ಸಹಾಯ ಮಾಡುತ್ತದೆ ಎಂದು ಕರ್ನಾಟಕ ಮನೆ ಖರೀದಿದಾರರ ಸಂಘದ ಸಂಚಾಲಕ ಧನಂಜಯ್ ಪದ್ಮನಾಭಚಾರ್ ದಿ ನ್ಯೀ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.