ಒತ್ತುವರಿ ತೆರವು ಕಾರ್ಯಾಚರಣೆ. 
ರಾಜ್ಯ

ಬೆಂಗಳೂರು: 3 ವಲಯಗಳಲ್ಲಿ ಫುಟ್‌ಪಾತ್‌ ಒತ್ತುವರಿ, ಅನಧಿಕೃತ ಕೇಬಲ್‌ಗಳ ತೆರವು

ದಕ್ಷಿಣ ವಲಯದ ಜಯನಗರ 1ನೇ ಬ್ಲಾಕ್ ನ 3ನೇ ಅಡ್ಡರಸ್ತೆ, ಲಕ್ಕಸಂದ್ರ ವಾರ್ಡ್ ನ 16ನೇ ಅಡ್ಡರಸ್ತೆ ಹಾಗೂ ರಾಜರಾಜೇಶ್ವರಿನಗರ ವಲಯದ ನಾಗರಭಾವಿ 2ನೇ ಹಂತದ 6ನೇ ಅಡ್ಡರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.

ಬೆಂಗಳೂರು: ನಗರದ ಮೂರು ವಿವಿಧ ವಲಯಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪಾದಚಾರಿಗಳ ಅತಿಕ್ರಮಣ ಹಾಗೂ ಅನಧಿಕೃತ ಕೇಬಲ್ ಗಳ ತೆರವು ಕಾರ್ಯಾಚರಣೆಯನ್ನು ಶನಿವಾರ ನಡೆಸಿತು.

ಆಯಾ ವಲಯಗಳಲ್ಲಿನ ಪಾದಚಾರಿ ಮಾರ್ಗಗಳನ್ನು ಪರಿಶೀಲಿಸಿದ ನಂತರ ಅತಿಕ್ರಮಣದಿಂದ ಪಾದಚಾರಿಗಳಿಗೆ ಆಗುತ್ತಿರುವ ತೊಂದರೆಗಳನ್ನು ಗಮನಿಸಲಾಯಿತು. ಈ ವೇಳೆ ಅನಧಿಕೃತ ಕೇಬಲ್‌ಗಳು ನಗರದ ಸೌಂದರ್ಯಕ್ಕೆ ಧಕ್ಕೆ ತರುತ್ತಿರುವುದಲ್ಲದೆ, ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ದೂರಿದರು.

ಬಳಿಕ ವಲಯ ಆಯುಕ್ತರು ಮತ್ತು ಜಂಟಿ ಆಯುಕ್ತರ ನಿರ್ದೇಶನಗಳನ್ನು ಅನುಸರಿಸಿ ಅಧಿಕಾರಿಗಳು ತೆರವು ಕಾರ್ಯಾಚರಣೆ ನಡೆಸಿದರು.

ದಕ್ಷಿಣ ವಲಯದ ಜಯನಗರ 1ನೇ ಬ್ಲಾಕ್ ನ 3ನೇ ಅಡ್ಡರಸ್ತೆ, ಲಕ್ಕಸಂದ್ರ ವಾರ್ಡ್ ನ 16ನೇ ಅಡ್ಡರಸ್ತೆ ಹಾಗೂ ರಾಜರಾಜೇಶ್ವರಿನಗರ ವಲಯದ ನಾಗರಭಾವಿ 2ನೇ ಹಂತದ 6ನೇ ಅಡ್ಡರಸ್ತೆಯಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.

ಅಲ್ಲದೆ, ಮಹದೇವಪುರ ವಲಯದ ಹಳೆ ವಿಮಾನ ನಿಲ್ದಾಣ ರಸ್ತೆ, ಮಾರತ್ತಹಳ್ಳಿ ಸೇತುವೆ ಮುಖ್ಯರಸ್ತೆಯಲ್ಲಿನ ಅತಿಕ್ರಮಣ ಹಾಗೂ ಅನಧಿಕೃತ ಓವರ್‌ಹೆಡ್‌ ಕೇಬಲ್‌ಗಳನ್ನು ತೆರವುಗೊಳಿಸಲಾಯಿತು.

ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರ ನಿರ್ದೇಶನದಂತೆ ಪಾದಚಾರಿ ಮಾರ್ಗದಲ್ಲಿದ್ದ ಅಂಗಡಿಗಳನ್ನು ತೆರವು ಮಾಡಲಾಗಿದ್ದು, ಪಾದಚಾರಿ ಮಾರ್ಗಗಳಲ್ಲಿ ಶಾಶ್ವತ ಪೆಟ್ಟಿಗೆಗಳನ್ನು ತೆರವು ಮಾಡಿ, ಮತ್ತೆ ವ್ಯಾಪಾರ ಮಾಡದಂತೆ ಕಟ್ಟೆಚ್ಚರ ನೀಡಲಾಗುತ್ತಿದೆ ಎಂದು ಪಾಲಿಕೆ ಎಂಜಿನಿಯರ್ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗೋವಾ ನೈಟ್ ಕ್ಲಬ್​ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 23 ಮಂದಿ ಸಜೀವ ದಹನ, ತನಿಖೆಗೆ ಆದೇಶ

ಗೋವಾ ನೈಟ್ ಕ್ಲಬ್​ ಅಗ್ನಿ ದುರಂತ: ಪ್ರಧಾನಿ ಮೋದಿ, ರಾಷ್ಟ್ರಪತಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

'ಹಿಂದೂ ಬೆಳವಣಿಗೆ ದರ' ಧರ್ಮ ಕೆಣಕುವ ಒಂದು ಮಾರ್ಗವಾಗಿತ್ತು: ಪ್ರಧಾನಿ ಮೋದಿ

ನನ್ನ ಶ್ರಮ, ನನ್ನ ಸಂಪಾದನೆ, ನನ್ನ ಆಸ್ತಿ, ನನಗೆ ಇಷ್ಟವಾದ ಶೂ, ವಾಚ್ ಧರಿಸುವೆ: ಡಿ.ಕೆ. ಶಿವಕುಮಾರ್

ದೆಹಲಿಯಲ್ಲಿ 2ನೇ ಮದುವೆಗೆ ಪತಿಯ ಸಿದ್ಧತೆ: ನ್ಯಾಯಕ್ಕಾಗಿ ಪ್ರಧಾನಿ ಮೋದಿ ಬೇಡಿದ ಪಾಕ್ ಮಹಿಳೆ!

SCROLL FOR NEXT