ಬಳ್ಳಾರಿ: ಬಳ್ಳಾರಿಯ ಬಿಮ್ಸ್ (BIMS) ನಲ್ಲಿ ಒಂದು ತಿಂಗಳಲ್ಲಿಯೇ ಐವರು ಬಾಣಂತಿಯರ ಸಾವನ್ನು ಅನುಕೂಲಕರವಾಗಿ ಮಾಡಿಕೊಂಡಿರುವ ಕೆಲ ಖಾಸಗಿ ಆಸ್ಪತ್ರೆಗಳು ಗರ್ಭಿಣಿಯರ ದಾಖಲಾತಿಗೆ ದರ ಹೆಚ್ಚಿಸುವ ಮೂಲಕ ರೋಗಿಗಳನ್ನು ಸುಲಿಗೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
BIMS ವೈದ್ಯರು ಮತ್ತು ಸಿಬ್ಬಂದಿ ರೋಗಿಗಳಿಗೆ ನಿಷೇಧಿತ IV ದ್ರವವನ್ನು ನೀಡಿದ ನಂತರ ಐದು ಸಾವುಗಳು ಸಂಭವಿಸಿವೆ ಎಂದು ಹೇಳಲಾಗಿದೆ. ಈ ಘಟನೆ ನಂತರ ಬಿಮ್ಸ್ ಮತ್ತಿತರ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಅನೇಕ ರೋಗಿಗಳು ಕಳೆದ 15 ದಿನಗಳಿಂದ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಗೊಂಡಿದ್ದಾರೆ.
ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ರೋಗಿಗಳಿಗೆ ಸುಲಿಗೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಗರ್ಭಿಣಿಯರ ಪೋಷಕರು ಹಾಗೂ ಸಂಬಂಧಿಕರು ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿದ ಕಂಪ್ಲಿ ನಿವಾಸಿ ನಾಗಶೇಖರ್ ರೆಡ್ಡಿ (ಹೆಸರು ಬದಲಾಯಿಸಲಾಗಿದೆ) ಐದು ಸಾವುಗಳು ವರದಿಯಾದ ನಂತರ, ಬಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ನನ್ನ ಮಗಳನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದೆ.
ಈ ಹಿಂದೆ ಆ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾದ ನನ್ನ ಸಂಬಂಧಿಕರೊಬ್ಬರಿಗೆ ಸುಮಾರು 30,000 ರೂ. ಶುಲ್ಕ ವಸೂಲಿ ಮಾಡಲಾಗಿತ್ತು. ಆದರೆ ನನ್ನ ಮಗಳನ್ನು ಅದೇ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ 50 ಸಾವಿರ ರೂ. ನೀಡುವಂತೆ ಒತ್ತಾಯಿಸಿದರು. ಆಕೆಯ ಆರೋಗ್ಯ ಕುರಿತ ಎಲ್ಲಾ ವರದಿಗಳು ಸಾಮಾನ್ಯವಾಗಿದ್ದರೂ ಅನೇಕ ಗರ್ಭಿಣಿಯರು ಆಸ್ಪತ್ರೆಯಲ್ಲಿ ದಾಖಲಾಗಿರುವುದರಿಂದ ಹಾಸಿಗೆ ಲಭ್ಯವಿಲ್ಲ ಎಂದು ಆಸ್ಪತ್ರೆಯವರು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದರು.