ಬಿಡಿಎ ಫ್ಲಾಟ್ 
ರಾಜ್ಯ

BDA Flat Mela: ಕಣಮಿಣಿಕೆಯಲ್ಲಿ ಶನಿವಾರ 1,212 ಫ್ಲಾಟ್ ಮಾರಾಟ!

ಮಾರಾಟ ಮೇಳದಲ್ಲಿ ಮಾರಾಟವಾದ ಫ್ಲಾಟ್ ಗಳ ಹಂಚಿಕೆದಾರರಿಗೆ ಸ್ಥಳದಲ್ಲಿಯೇ ತಾತ್ಕಾಲಿಕ ಪತ್ರವನ್ನು ಹಸ್ತಾಂತರಿಸಲಾಗುವುದು, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಣಮಿಣಿಕೆ ವಸತಿ ಸಮುಚ್ಚಯದ ಬಳಿ ಫ್ಲಾಟ್ ಮೇಳ ನಡೆಯಲಿದೆ.

ಬೆಂಗಳೂರು: ಕಣಮಿಣಿಕೆಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ನಿರ್ಮಿಸಿರುವ 1,212 ಫ್ಲಾಟ್ ಗಳನ್ನು ಡಿಸೆಂಬರ್ 14 ( ಶನಿವಾರ) ನಡೆಯಲಿರುವ ಫ್ಲಾಟ್ ಮೇಳದಲ್ಲಿ ಸ್ಥಳದಲ್ಲಿಯೇ ಮಾರಾಟ ಮಾಡಲಾಗುತ್ತಿದೆ. ಅಲ್ಲದೇ, ತಿಪ್ಪಸಂದ್ರದಲ್ಲಿ ನಿರ್ಮಿಸಲಾಗಿರುವ ನೂರಾರು 1 BHK ಫ್ಲಾಟ್ ಗಳ ಮಾರಾಟವೂ ನಡೆಯಲಿದೆ.

ಮಾರಾಟ ಮೇಳದಲ್ಲಿ ಮಾರಾಟವಾದ ಫ್ಲಾಟ್ ಗಳ ಹಂಚಿಕೆದಾರರಿಗೆ ಸ್ಥಳದಲ್ಲಿಯೇ ತಾತ್ಕಾಲಿಕ ಪತ್ರವನ್ನು ಹಸ್ತಾಂತರಿಸಲಾಗುವುದು, ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಕಣಮಿಣಿಕೆ ವಸತಿ ಸಮುಚ್ಚಯದ ಬಳಿ ಫ್ಲಾಟ್ ಮೇಳ ನಡೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಬೆಂಗಳೂರು-ಮೈಸೂರು ರಸ್ತೆಗೆ ಸಮೀಪವಿರುವ ಕಣಮಿಣಿಕೆ ವಸತಿ ಸಂಕೀರ್ಣದಲ್ಲಿ ಒಟ್ಟು 748 2BHK ಮತ್ತು 464 3BHK ಫ್ಲಾಟ್‌ಗಳನ್ನು ಹಂಚಿಕೆ ಮಾಡಲಾಗುತ್ತಿದೆ. 2BHK ಫ್ಲಾಟ್‌ಗಳ ಬೆಲೆ ರೂ. 25 ಲಕ್ಷದಿಂದ 30 ಲಕ್ಷ, 3BHK ಫ್ಲಾಟ್‌ಗಳ ಬೆಲೆ ರೂ. 40 ಲಕ್ಷದಿಂದ 64 ಲಕ್ಷ ವಿದೆ. ತಿಪ್ಪಸಂದ್ರ ವಸತಿ ಯೋಜನೆಯ 1BHK ಫ್ಲಾಟ್‌ಗಳ ಬೆಲೆ ರೂ. 14.5 ಲಕ್ಷ ಎಂದು ಮಾಹಿತಿ ನೀಡಲಾಗಿದೆ.

ತಿಪ್ಪಸಂದ್ರ ವಸತಿ ಯೋಜನೆಯನ್ನು ಜೆ. ಪಿ. ನಗರ 9ನೇ ಫೇಸ್‌ನಲ್ಲಿ ನಿರ್ಮಾಣ ಮಾಡಲಾಗಿದ್ದು, ಕನಕಪುರ ರಸ್ತೆಯಲ್ಲಿರುವ ಸೌತ್ ಫೋರಂ ಮಾಲ್ ಮತ್ತು ದೊಡ್ಡಕಲ್ಲಸಂದ್ರ ಮೆಟ್ರೋ ನಿಲ್ದಾಣದಿಂದ 1 ಕಿ. ಮೀ. ದೂರದಲ್ಲಿದೆ.

ಕಣಿಮಿಣಿಕೆ ವಸತಿ ಯೋಜನೆ ಮಾಹಿತಿಗಾಗಿ 6362512234/ 8747877469 ಸಂಖ್ಯೆಗೆ ಮತ್ತು ತಿಪ್ಪಸಂದ್ರ ವಸತಿ ಯೋಜನೆಯ ಮಾಹಿತಿಗೆ 7795869883 ಸಂಖ್ಯೆಗೆ ಕರೆ ಮಾಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT