ಸಾಂದರ್ಭಿಕ ಚಿತ್ರ 
ರಾಜ್ಯ

ನಕಲಿ ವಕೀಲರ ಹಾವಳಿಯಿಂದ ನ್ಯಾಯಾಂಗ ಅಪಾಯದಲ್ಲಿ: ವಿಶೇಷ ಕೋರ್ಟ್ ಕಳವಳ

ನಕಲಿ ವಕೀಲರ ಕೈಯಿಂದ ವಕೀಲರ ಪವಿತ್ರ ವೃತ್ತಿಯು ಗಂಭೀರ ಅಪಾಯದಲ್ಲಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಂಬಂಧಪಟ್ಟ ವ್ಯಕ್ತಿಗಳು ಮೂಕ ಪ್ರೇಕ್ಷಕರಾಗಿ ಉಳಿದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಬೆಂಗಳೂರು: ಅರ್ಹ ಕಾನೂನು ಪದವಿಗಳನ್ನು ಪಡೆಯದೇ ಸಾಕಷ್ಟು ಮಂದಿ ಇನ್ನೂ ವಕೀಲರಾಗಿ ವೃತ್ತಿ ನಡೆಸುತ್ತಿರುವುದು ಇಂದು ಬಹಿರಂಗ ರಹಸ್ಯವಾಗಿದೆ. ಇಂತಹ ನಕಲಿ ವಕೀಲರು ವ್ಯವಸ್ಥೆಯನ್ನು ಕಲುಷಿತಗೊಳಿಸುವುದು ಮಾತ್ರವಲ್ಲದೆ ನಿಜವಾದ ವಕೀಲರು ಮತ್ತು ಸಮಾಜಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ ಎಂದು ವಿಶೇಷ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಕಲಿ ವಕೀಲರ ಕೈಯಿಂದ ವಕೀಲರ ಪವಿತ್ರ ವೃತ್ತಿಯು ಗಂಭೀರ ಅಪಾಯದಲ್ಲಿದೆ, ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಸಂಬಂಧಪಟ್ಟ ವ್ಯಕ್ತಿಗಳು ಮೂಕ ಪ್ರೇಕ್ಷಕರಾಗಿ ಉಳಿದಿರುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಮತ್ತು ನಕಲಿಗಳ ಹಾವಳಿಗೆ ಕಡಿವಾಣ ಹಾಕಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಕೋರ್ಟ್ ಗಮನಿಸಿದೆ.

ಅಪರಾಧ ತನಿಖಾ ವಿಭಾಗದ (ಸಿಐಡಿ) ಉಪ ಪೊಲೀಸ್ ವರಿಷ್ಠಾಧಿಕಾರಿ ಕನಕಲಕ್ಷ್ಮಿ ಬಿಎಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಗಳವಾರ ತಿರಸ್ಕರಿಸಿದ ನ್ಯಾಯಾಧೀಶ ಕೆ ಎಂ ರಾಧಾಕೃಷ್ಣ ಅವರು ಈ ವಿಷಯ ತಿಳಿಸಿದರು. ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ, ಕಾನೂನು ಪದವೀಧರೆ, ಉದ್ಯಮಿ ಎಸ್ ಜೀವಾ ಅವರು ಬಿಟ್ಟು ಹೋಗಿರುವ ಡೆತ್ ನೋಟ್ ಆಧರಿಸಿ, ಕನಕಲಕ್ಷ್ಮಿ ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಲಂಚದ ಆರೋಪದ ಮೇಲೆ ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದಕ್ಕೂ ಮುನ್ನ, ಆರೋಪಿ ನಿರಪರಾಧಿ ಮತ್ತು ಆಕೆಯನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ ಎಂದು ಹೇಳಿದ್ದಲ್ಲದೆ, ಮೃತ ಜೀವಾ ವಕೀಲರಲ್ಲ, ಆದರೆ ದೂರುದಾರರಾಗಿರುವ ತನ್ನ ಸಹೋದರಿಯೊಂದಿಗೆ ವ್ಯಾಪಾರ ಸಂಸ್ಥೆಯನ್ನು ನಡೆಸುತ್ತಿದ್ದಾರೆ ಎಂದು ಕನಕಲಕ್ಷ್ಮಿ ಪರ ವಕೀಲರು ವಾದಿಸಿದರು.

ಮೃತರು ಭೋವಿ ನಿಗಮ ಹಗರಣದ ಅಪರಾಧದ ಆದಾಯದ ಫಲಾನುಭವಿಗಳಲ್ಲಿ ಒಬ್ಬರು. ವೈಟ್ ಕಾಲರ್ ಕ್ರಿಮಿನಲ್‌ಗಳು ವಕಾಲತ್ತು ವಹಿಸಿ ಕಾನೂನಿನ ಕಪಿಮುಷ್ಠಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ವಕೀಲರ ಈ ವಾದಕ್ಕೆ ನ್ಯಾಯಾಲಯ ಮೆಚ್ಚುಗೆ ವ್ಯಕ್ತ ಪಡಿಸಿತು.

ನಿರೀಕ್ಷಣಾ ಜಾಮೀನು ತಿರಸ್ಕಾರಕ್ಕೆ ಕಾರಣಗಳನ್ನು ನೀಡಿದ ನ್ಯಾಯಾಲಯವು ಮತ್ತು ಪ್ರಾಸಿಕ್ಯೂಷನ್ ತನ್ನ ಮುಂದೆ ಇರಿಸಿರುವ ವಿಷಯಗಳ ಬಗ್ಗೆ ವಿವರಿಸಿ, ನಿರೀಕ್ಷಣಾ ಜಾಮೀನು ನೀಡಿದರೆ ಸಾಕ್ಷಿಗಳಿಗೆ ಬೆದರಿಕೆ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆಯಿದೆ ಎಂಬ ಪಬ್ಲಿಕ್ ಪ್ರಾಸಿಕ್ಯೂಟರ್‌ನ ಆತಂಕವನ್ನು ನ್ಯಾಯಾಲಯವು ಗಮನಿಸಿತು.

ಆದ್ದರಿಂದ ನಿಸ್ಸಂಶಯವಾಗಿ, ಈ ಸಾಧ್ಯತೆಯನ್ನು ತಪ್ಪಿಸಲು ಮತ್ತು ಅಪರಾಧದ ಪರಿಣಾಮಕಾರಿ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಕಸ್ಟಡಿಯಲ್ ವಿಚಾರಣೆಯ ಅವಶ್ಯಕತೆಯಿದೆ. ಆದ್ದರಿಂದ, ಇದು ಬಂಧನ ಪೂರ್ವ ಜಾಮೀನು ನೀಡಲು ಯೋಗ್ಯವಾದ ಪ್ರಕರಣವಲ್ಲ ಎಂದು ನ್ಯಾಯಾಲಯ ಹೇಳಿದೆ. ಮೃತ ಜೀವಾ ಬರೆದಿರುವ ಡೆತ್ ನೋಟ್ ಹಾಗೂ ಆಕೆಯ ಸಹೋದರಿ ನೀಡಿದ ದೂರಿನ ಆಧಾರದ ಮೇಲೆ ಕನಕ ಲಕ್ಷ್ಮಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪ ಹಾಗೂ 25 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಡಿ ಪ್ರಕರಣ ದಾಖಲಾಗಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT