ಅನುಭವ ಮಂಟಪದ ತೈಲಚಿತ್ರ 
ರಾಜ್ಯ

ಸುವರ್ಣ ಸೌಧದಲ್ಲಿ 'ಅನುಭವ ಮಂಟಪ'ದ ತೈಲವರ್ಣ ಚಿತ್ರ: ಖಂಡೇರಾವ್ ರಚಿತ ಕಲಾಕೃತಿ ಕದ್ದ ಆರೋಪ; ವಿವಾದ ಸೃಷ್ಟಿ

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಹಾಗೂ ಕರ್ನಾಟಕ ರಾಜ್ಯ ಲಲಿತಕಲಾ ಅಕ್ಯಾಡೆಮಿಯ ಮಾಜಿ ಅಧ್ಯಕ್ಷರೂ ಆದ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರು ರಚಿಸಿದ ಕಲಾಕೃತಿಯನ್ನು ಕದಿಯಲಾಗಿದ ಎಂದು ಖಂಡೇರಾವ್‌ ಪುತ್ರ ಬಸವರಾಜ ಖಂಡೇರಾವ್ ಅವರು ಹೇಳಿದ್ದಾರೆ.

ಬೆಂಗಳೂರು: ಬೆಳಗಾವಿಯ ಸುವರ್ಣಸೌಧದಲ್ಲಿ ಇತ್ತೀಚೆಗೆ ಅನಾವರಣಗೊಳಿಸಲಾದ ‘ಅನುಭವ ಮಂಟಪ’ ತೈಲವರ್ಣ ಚಿತ್ರದ ಕುರಿತು ಭಾರೀ ವಿವಾದ ಸೃಷ್ಟಿಯಾಗಿದೆ. ಈ ಕಲಾಕೃತಿ ನಕಲಿ ಎಂದು ತಜ್ಞರು ಕಿಡಿಕಾರಿದ್ದಾರೆ.

ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತ ಹಿರಿಯ ಕಲಾವಿದ ಹಾಗೂ ಕರ್ನಾಟಕ ರಾಜ್ಯ ಲಲಿತಕಲಾ ಅಕ್ಯಾಡೆಮಿಯ ಮಾಜಿ ಅಧ್ಯಕ್ಷರೂ ಆದ ನಾಡೋಜ ಡಾ. ಜೆ.ಎಸ್. ಖಂಡೇರಾವ್ ಅವರು ರಚಿಸಿದ ಕಲಾಕೃತಿಯನ್ನು ಕದಿಯಲಾಗಿದ ಎಂದು ಖಂಡೇರಾವ್‌ ಪುತ್ರ ಬಸವರಾಜ ಖಂಡೇರಾವ್ ಅವರು ಹೇಳಿದ್ದಾರೆ.

ಬಸವಣ್ಣ ಮತ್ತು ಅಕ್ಕಮಹಾದೇವಿ ಅವರು ವಿಚಾರ ವಿಮರ್ಶೆಯಲ್ಲಿ ತೊಡಗಿರುವ ಅನುಭವ ಮಂಟಪದ ತೈಲವರ್ಣ ಕಲಾಕೃತಿಯ ರಚನೆಗಾಗಿ ಖಂಡೇರಾವ್ ಅವರು ಎರಡೂವರೆ ವರ್ಷ ತೆಗೆದುಕೊಂಡಿದ್ದಾರೆ. ಸಾಕಷ್ಟು ಅಧ್ಯಯನ ಮಾಡಿ, ಪರಿಣಿತರ ಸಲಹೆಯನ್ನೂ ಪಡೆದಿದ್ದರು. ಆದರೆ, ರಾಜ್ಯ ಸರ್ಕಾರವು ಕಲಾಕೃತಿ ಅಳವಡಿಕೆಗೂ ಮುನ್ನ ಖಂಡೇರಾವ್ ಅವರನ್ನು ಸಂಪರ್ಕಿಸಿ ಅನುಮತಿಯನ್ನೂ ಪಡೆಯಲಿಲ್ಲ. ಕಲಾಕೃತಿ ಅಳವಡಿಕೆಗೆ ನಮ್ಮ ವಿರೋಧವಿಲ್ಲ. ಆದರೆ, ಅಳವಡಿಸುವ ಮುನ್ನ ಮೂಲ ಕಲಾವಿದರ ಗಮನಕ್ಕೂ ತರದೆ ನಕಲಿ ಕಲಾಕೃತಿ ಅಳವಡಿಕೆ ಮಾಡಿರುವುದು ಸರಿಯಲ್ಲ. ಈಗ ಅಳವಡಿಸಿರುವ ಕಲಾಕೃತಿಯನ್ನು ತೆಗೆಯಬೇಕು. ಈ ಬಗ್ಗೆ ಕಾನೂನು ಹೋರಾಟದ ಬಗ್ಗೆಯೂ ಚಿಂತನೆ ನಡೆಯುತ್ತಿದೆ ಎಂದು ತಿಳಿಸಿದರು.

ವಿವಾದ ಕುರಿತು ಪ್ರತಿಕ್ರಿಯೆ ನೀಡಿದ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರು, 8-9ಶತಮಾನಗಳ ಹಿಂದೆ ಅನುಭವ ಮಂಟಪ ಹೇಗಿತ್ತು ಎಂಬುದು ಯಾರಿಗೂ ತಿಳಿದಿಲ್ಲ, ಶತಮಾನಗಳಿಂದಲೂ ಅನೇಕ ಕಲಾವಿದರು ತಮ್ಮದೇ ಶೈಲಿಯಲ್ಲಿ ಅದನ್ನು ಮರುರೂಪಿಸಿದ್ದಾರೆ. ಆದರೆ, ವಿವಾದದ ಬಗ್ಗೆ ಪರಿಶೀಲಿಸುವುದಾಗಿ ಹೇಳಿದರು.

ಚಿತ್ರಕಲಾ ಪರಿಷತ್ತಿನ ಉಪಾಧ್ಯಕ್ಷ ಟಿ.ಪ್ರಭಾಕರ್ ಅವರು ಮಾತನಾಡಿ, ಈ ವರ್ಷವೊಂದರಲ್ಲೇ ಚಿತ್ರ ಸಂತೆಗೆ ಸುಮಾರು 3,500 ಅರ್ಜಿಗಳು ಬಂದಿವೆ. ಸಾಕಷ್ಟು ಕಾಲವಿದರು ಮಹಿಳೆ ದೀಪ ಹಿಡಿದರುವ ಚಿತ್ರಗಳನ್ನು ಬಿಡಿಸಿದ್ದಾರೆ. ಆ ಎಲ್ಲಾ ಚಿತ್ರಗಳು ಒಂದೇ ರೀತಿ ಕಾಣಿಸುತ್ತವೆ. ಅದನ್ನು ಕೃತಿಚೌರ್ಯ ಎಂದು ಕರೆಯಬಹುದೇ? ಎಂದು ಪ್ರಶ್ನಿಸಿದ್ದಾರೆ.

ಈ ಚಿತ್ರಕಲೆಯನ್ನು ಚಿತ್ರಕಲಾ ಪರಿಷತ್ತಿನ ಸತೀಶ್ ರಾವ್, ದಾವಣಗೆರೆಯ ಶ್ರೀಕಾಂತ್ ಹೆಗ್ಡೆ, ಕೆನ್ ಶಾಲೆಯ ಅಶೋಕ್ ಯು, ವೀರೇಶ್ ಮತ್ತು ಮಹೇಶ್ ಅವರು ರಚಿಸಿದ್ದಾರೆಂದು ಮೂಲಗಳು ತಿಳಿಸಿವೆ.

ಚಿತ್ರಕಲಾ ಪರಿಷತ್ತಿನ ಸತೀಶ್ ರಾವ್ ಅವರು ಮಾತನಾಡಿ, ನಾನು ಭಾವಿಚಿತ್ರ ಕಲಾವಿದ. ನಾನೂ ಕೂಡ ಈ ತಂಡದ ಭಾಗವಾಗಿದ್ದೇನೆ. ನವೆಂಬರ್‌ನಲ್ಲಿ ವಿಧಾನಸೌಧ ಅಧಿಕಾರಿಗಳು ನಮ್ಮನ್ನು ಸಂಪರ್ಕಿಸಿ ಎರಡು ವಾರಗಳ ಗಡುವು ನೀಡಿದ್ದರು. ಸಾಮಾನ್ಯವಾಗಿ, ಪೂರ್ಣ, ಮೂಲ ಚಿತ್ರಕಲೆಗಾಗಿ ನಮಗೆ ಕನಿಷ್ಠ ಮೂರು ತಿಂಗಳ ಕಾಲಾವಕಾಶ ಬೇಕು. ಆದರೆ, ನಮಗೆ ಸಮಯವಿರಲಿಲ್ಲ. ಹೀಗಾಗಿ ಗಡುವು ಪೂರೈಸಲು ನಾವು ಇಂಟರ್ನೆಂಟ್ ಬಳಕೆ ಮಾಡಿ, ಕಲಾಕೃತಿ ರಚಿಸಿದ್ದೆವು ಎಂದು ಹೇಳಿದ್ದಾರೆ.

ಅಧಿಕಾರಿಗಳು ಕಲಾಕೃತಿಗಳನ್ನು ಒಪ್ಪಿಕೊಂಡ ಬಳಿಕ ಪೇಂಟಿಂಗ್ ಮಾಡಿದ್ದೆವು. ಇದು ನಕಲು ಅಲ್ಲ. ಆದರೆ, ಹೋಲಿಕೆ ಮಾಡಿದರೆ, ವಿನ್ಯಾಸ ಹೋಲುವಂತಿದೆ. ಕನಿಷ್ಠ 15 ವ್ಯತ್ಯಾಸಗಳು ಈ ಚಿತ್ರಗಳಲ್ಲಿವೆ. ಕಲಾವಿದನಾಗಿ ನಾನು ಆ ಭರವಸೆಯನ್ನು ನೀಡಬಲ್ಲೆ. ನಾವು ಯಾವುದೇ ಚಿತ್ರವನ್ನು ನಕಲಿಸಿಲ್ಲ. ಸ್ಫೂರ್ತಿಗಾಗಿ ಬಳಸಿದ್ದೇವೆಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT