ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಅಮಾನವೀಯ ಘಟನೆ: ಬೆಳಗಾವಿಯಲ್ಲಿ ಎರಡು ತಿಂಗಳ ಹೆಣ್ಣು ಮಗುವನ್ನು ಕೆರೆಗೆ ಎಸೆದ ತಾಯಿ!

ಬೆಳಗಾವಿ‌‌ ತಾಲೂಕಿನ ಕಣಬರಗಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ತನ್ನ ಎರಡು ತಿಂಗಳ ಹೆಣ್ಣು ಮಗುವನ್ನೇ ಕೆರೆಗೆ ಎಸೆದಿರುವ ಘಟನೆ ನಡೆದಿದೆ.

Vishwanath S
Updated On : 15 Dec 2024, 7:14 pm

ಬೆಳಗಾವಿ: ಬೆಳಗಾವಿ‌‌ ತಾಲೂಕಿನ ಕಣಬರಗಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು ತನ್ನ ಎರಡು ತಿಂಗಳ ಹೆಣ್ಣು ಮಗುವನ್ನೇ ಕೆರೆಗೆ ಎಸೆದಿರುವ ಘಟನೆ ನಡೆದಿದೆ. ಕಣಬರಗಿ ಗ್ರಾಮದ ನಿವಾಸಿ ಶಾಂತಿ ಕರವಿನಕೊಪ್ಪ ಮಗುವಿಗೆ ಪಿಡ್ಸ್​ ಬರುತ್ತೆ ಅಂತ ಹೆತ್ತ ಮಗುವನ್ನೇ ಕೆರೆಗೆ ಎಸೆದಿದ್ದು ಇದನ್ನು ನೋಡಿದ ಕೆಲ ಯುವಕರು ತಕ್ಷಣವೇ ಕೆರೆಗೆ ಹಾರಿ ಮಗು ರಕ್ಷಣೆ ಮಾಡಿದ್ದಾರೆ. ಬಳಿಕ ಬೆಳಗಾವಿ ನಗರದ ಚಿಕ್ಕ ಮಕ್ಕಳ ಖಾಸಗಿ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ತಾಯಿ ಶಾಂತಿಯನ್ನು ಬಂಧಿಸಿದ್ದಾರೆ. ಇನ್ನೂ ಮಗುವನ್ನ ಕೆರೆಗೆ ಎಸೆದ ಕುರಿತು ವಿಚಾರಿಸಿದಾಗ ಮಗುವಿಗೆ ನಿರಂತರವಾಗಿ ಪಿಡ್ಸ್ ಬರ್ತಿದ್ದು ನಿನ್ನೆಯಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಕೊಂಡು ಬರಲಾಗಿತ್ತು ಎಂದು ಹೇಳಿದ್ದಾರೆ.

Also Read

Rape Attempt: ಅತ್ಯಾಚಾರಕ್ಕೆ ನಿರಾಕರಿಸಿದ ಸೊಸೆಯನ್ನೇ ಕೊಂದು ಹಾಕಿದ ಕಾಮುಕ ಮಾವ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement