ಮೈಸೂರು: ನೀವು ಯಾರ ಬಳಿಯೂ, ಯಾರ ಆಮೀಷಕ್ಕೆ ಒಳಗಾಗಿಲ್ವಾ? ನಿಮ್ಮ ಕಾನೂನು ಹೋರಾಟಕ್ಕೆ ಲಕ್ಷ ಲಕ್ಷ ಹಣ ಎಲ್ಲಿಂದ ಬರುತ್ತಿದೆ? ಬೆಂಗಳೂರಿನಲ್ಲಿ ನಿಮಗೆ ಪ್ರತ್ಯೇಕ ರೂಂ ಒದಗಿಸಿಕೊಟ್ಟಿಲ್ವಾ.? ನಿಮಗೆ ದೊಡ್ಡ ಹೋಟೆಲ್ ನಲ್ಲಿ ಉಳಿದುಕೊಳ್ಳಲು ರೂಂ ವ್ಯವಸ್ಥೆ ಮಾಡಿರುವರು ಯಾರು? ಎಂದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣಾಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಅವರು ಗುರುವಾರ ಪ್ರಶ್ನೆ ಮಾಡಿದ್ದಾರೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಗಂಭೀರ ಆರೋಪ ಮಾಡಿದ್ದು, ಇಬ್ಬರು ವ್ಯಕ್ತಿಗಳು ನನಗೆ ಹಣದ ಆಮಿಷವೊಡ್ಡಲು ಬಂದಿದ್ದರು ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ,
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಲಕ್ಷ್ಮಣ್ ಅವರು, ಸ್ನೇಹಮಯಿ ಕೃಷ್ಣಗೆ ಫಂಡಿಂಗ್ ಮಾಡುವವರು ಯಾರು ಅನ್ನೋದು ಗೊತ್ತಿದೆ ಎಂದು ಕಿಡಿಕಾರಿದರು.
ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಯಾವುದೇ ಕಾರಣಕ್ಕೂ ಅಂತಹ ಕೀಳು ಮಟ್ಟಕ್ಕೆ ಇಳಿಯುವವರಲ್ಲ. ಸ್ನೇಹಮಯಿ ಕೃಷ್ಣ ಅವರೇ ಹಣದ ಆಮಿಷಕ್ಕೆ ಒಳಗಾಗಿ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಳ್ಳು ಪತ್ರ ನೀಡಿದ್ದಾರೆ ಎಂದು ಹೇಳಿದರು.
ಮಿಷಕ್ಕೆ ಒಳಗಾಗದಿದ್ದರೇ ಸ್ನೇಹಮಯಿ ಕೃಷ್ಣ ಪುತ್ರ ಏಕೆ ಹರ್ಷ ಮತ್ತು ಶ್ರೀನಿಧಿ ಜೊತೆ ಹೋದರು. ಅವರು ಕೊಟ್ಟಿರುವುದು ಬೆಳಿಗ್ಗೆ 10:30ರ ಫುಟೇಜ್ ಮಾತ್ರ. ಅಂದಿನ ಇಡೀ ದಿನದ ಫುಟೇಜ್ ಕೊಡಬೇಕು. ನಮ್ಮ ಬಳಿಯೂ ಕೆಲವು ಫುಟೇಜ್ ಗಳಿವೆ. ಅವನ್ನು ನಾವು ಪೊಲೀಸರಿಗೆ ಕೊಡುತ್ತೇವೆ ಎಂದು ತಿಳಿಸಿದರು.
ನೀವು ಯಾರ ಬಳಿಯೂ, ಯಾರ ಆಮೀಷಕ್ಕೆ ಒಳಗಾಗಿಲ್ವಾ? ನಿಮ್ಮ ಕೋರ್ಟ್ ಹೋರಾಟಕ್ಕೆ ಹಣ ಎಲ್ಲಿಂದ ಬರುತ್ತೆ.? ಬೆಂಗಳೂರಿನಲ್ಲಿ ನಿಮಗೆ ಪ್ರತ್ಯೇಕ ರೂಂ ಒದಗಿಸಿಕೊಟ್ಟಿಲ್ವಾ.? ನಿಮಗೆ ದೊಡ್ಡ ಹೋಟೆಲ್ ನಲ್ಲಿ ಉಳಿದುಕೊಳ್ಳಲು ರೂಂ ವ್ಯವಸ್ಥೆ ಮಾಡಿರುವರು ಯಾರು ಅಂತ ಗೊತ್ತು. ನೀವು ಯಾವಾಗ ದೆಹಲಿಗೆ ಹೋಗಿದ್ದು ಎಲ್ಲಾ ಗೊತ್ತು. ಸ್ನೇಹಮಯಿ ಕೃಷ್ಣ ಈ ಸಿನಿಮಾದಲ್ಲಿ ಕೇವಲ ಸೈಡ್ ಆಕ್ಟರ್ ಅಷ್ಟೇ. ಡೈರೆಕ್ಟರ್, ನಿರ್ಮಾಪಕರೇ ಬೇರೆ ಇದಾರೆ ಎಂದು ವಾಗ್ದಾಳಿ ನಡೆಸಿದರು.