ಮಂಡ್ಯದಲ್ಲಿ ನಡೆದ 87 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಸಂಜೆ ತೆರೆ ಬಿದ್ದಿದೆ. 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ಆಯೋಜಿಸಲು ಶನಿವಾರ ನಡೆದ ಕನ್ನಡ ಸಾಹಿತ್ಯ ಪರಿಷತ್ತು ಸಭೆಯಲ್ಲಿ ನಿರ್ಧರಿಸಲಾಗಿದೆ. ಬಳ್ಳಾರಿ, ಕೋಲಾರ, ಯಾದಗಿರಿ ಸೇರಿದಂತೆ ಹೊಸ ಜಿಲ್ಲೆಗಳು ಸಾಹಿತ್ಯ ಸಮ್ಮೇಳನಕ್ಕೆ ಅತಿಥ್ಯಕ್ಕೆ ಕೋರಿಕೆ ಸಲ್ಲಿಸಿದವು. ಆದರೆ, ಅಂತಿಮವಾಗಿ ಬಳ್ಳಾರಿ ಜಿಲ್ಲೆಗೇ ಸಮ್ಮೇಳನದ ಅತಿಥ್ಯ ನೀಡಲು ಎಲ್ಲ ಜಿಲ್ಲಾ ಸಮಿತಿಗಳು ನಿರ್ಧರಿಸಿವೆ.
ಬಳ್ಳಾರಿಗೆ 66 ವರ್ಷದ ಬಳಿಕ ಮರಳಿ ಸಾಹಿತ್ಯ ಸಮ್ಮೇಳನದ ಅತಿಥ್ಯ ದೊರೆಯುತ್ತಿದೆ. ಈ ಹಿಂದೆ 1926, 1938 ಮತ್ತು 1958ರಲ್ಲಿ ಸಾಹಿತ್ಯ ಸಮ್ಮೇಳನ ನಡೆದಿತ್ತು. ದಾಖಲೆ ಪ್ರಮಾಣದಲ್ಲಿ ಸಾಹಿತ್ಯಾಭಿಮಾನಿಗಳು ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಕಳೆದ ಎರಡು ದಿನಗಳಲ್ಲಿ ಸಾಹಿತ್ಯ ಸಮ್ಮೇಳನಕ್ಕೆ 3 ಲಕ್ಷ ಜನರು ಆಗಮಿಸುವ ಮೂಲಕ ದಾಖಲೆ ನಿರ್ಮಿಸಿದ್ದರು. ಸಮ್ಮೇಳನದ ಅಂಗವಾಗಿ 450 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿತ್ತು. ಇನ್ನು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಂಸಾಹಾರ ವಿತರಣೆ ಮಾಡಿರುವ ವಿಚಾರ ಇದೀಗ ರಾಜ್ಯದಲ್ಲಿ ವ್ಯಾಪಕ ಸುದ್ದಿಗೆ ಕಾರಣವಾಗಿದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಡಬೇಕು ಎಂದು ಪ್ರಗತಿಪರರು ಧ್ವನಿ ಎತ್ತಿದ್ದರು. ಆದರೆ ಪ್ರತಿವರ್ಷದಂತೆ ಈ ಬಾರಿ ಕೂಡ ಸಸ್ಯಹಾರವನ್ನು ನೀಡಲಾಗುತ್ತಿತ್ತು. ಆದರೆ ಆದರೆ ಕೊನೆಯ ದಿನವಾದ ಇಂದು ಸಮ್ಮೇಳನದಲ್ಲಿ ಬಾಡೂಟ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕಲಬುರಗಿಯ ನಗರದಲ್ಲಿ ನಿರ್ಮಿಸಿರುವ ಜಯದೇವ ಹೃದ್ರೋಗ ವಿಜ್ಙಾನ ಮತ್ತು ಸಂಶೋಧನ ಸಂಸ್ಥೆಯ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ಡಾ.ಎಸ್.ಎಂ ಪಂಡಿತ್ ರಂಗಮಂದಿರದ ಎದುರಿನ ಏಳು ಎಕರೆ ಪ್ರದೇಶದಲ್ಲಿ ಈ ಕಟ್ಟಡ ನಿರ್ಮಾಣ ಮಾಡಲಾಗಿದ್ದು ಒಟ್ಟು 371 ಬೆಡ್ ಸಾಮರ್ಥ್ಯವಿದೆ. 377 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಬೆಂಗಳೂರು, ಮೈಸೂರು ನಂತರ ಕಲ್ಯಾಣ ಕರ್ನಾಟಕದಲ್ಲಿ ಮೊದಲ ಜಯದೇವ ಹೃದ್ರೋಗ ಆಸ್ಪತ್ರೆ ಇದಾಗಿದ್ದು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದೆ.
ಪ್ರೇಯಸಿಯರನ್ನು ಅದಲು ಬದಲು ಮಾಡಿಕೊಳ್ಳುವ ದೊಡ್ಡ ಜಾಲವೊಂದನ್ನು ಬೆಂಗಳೂರು ಪೊಲೀಸರು ಬಯಲಿಗೆಳೆದಿದ್ದು, ಯುವತಿ ಮೇಲೆ ಅತ್ಯಾಚಾರ ನಡೆಸಿದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗೆಳತಿಯನ್ನು ಪಾರ್ಟಿಗೆ ಆಹ್ವಾನಿಸಿ ಅತ್ಯಾಚಾರ ನಡೆಸಿದ್ದ ಹರೀಶ್ ಹಾಗೂ ಹೇಮಂತ್ ಎಂಬ ಇಬ್ಬರು ಬಂಧಿತ ವ್ಯಕ್ತಿಗಳಾಗಿದ್ದಾರೆ.
ಇವರಿಬ್ಬರೂ ಪರಸ್ಪರ ತಮ್ಮ ತಮ್ಮ ಪ್ರೇಯಸಿಯರನ್ನು ಅದಲು ಬದಲು ಮಾಡಿಕೊಂಡು ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಸಹಕರಿಸದಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎನ್ನಲಾಗಿದೆ. ತನ್ನ ಪ್ರಿಯಕರ ಬೇರೆ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸುತ್ತಿದ್ದಾನೆ ಎಂದು ಮಹಿಳೆಯೊಬ್ಬರು ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ದೂರು ನೀಡಿದ್ದರು.
ಸಿಟಿ ರವಿ ಅವರನ್ನ ಫೇಕ್ಎನ್ಕೌಂಟರ್ ಮಾಡುವ ವಿಚಾರ ಪೊಲೀಸರಿಗೆ ಇತ್ತು ಅನಿಸುತ್ತೆ. ನಾವು ಏನು ಮಾಡಬೇಕು ಅದನ್ನ ನಾವು ಮಾಡುತ್ತೇವೆ. ಈ ಬಗ್ಗೆ ನಾವು ಸುಮ್ಮನೆ ಕೂರುವುದಿಲ್ಲ, ಹೋರಾಟ ಮಾಡುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆರೋಪ ಮಾಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಜೋಶಿ, ಅವಕಾಶ ಸಿಕ್ಕರೆ ಸಿ.ಟಿ.ರವಿ ಮುಗಿಸಬೇಕೆಂಬ ಉದ್ದೇಶವಿತ್ತು ಅನಿಸುತ್ತೆ. ಆದರೆ, ಸರಿಯಾದ ಅವಕಾಶ ಸಿಕ್ಕಿಲ್ಲ. ನಮ್ಮ ಎಂಎಲ್ಸಿ ಕೇಶವಪ್ರಸಾದ್ ಕೂಡ ಅವರ ಹಿಂದೆ ಇದ್ದರು. ನಮಗೆ ಸಿ.ಟಿ.ರವಿ ಅವರ ಲೈವ್ ಲೊಕೇಶನ್ ಸಿಗುತ್ತಿತ್ತು. ಅಂತಹ ರಾತ್ರಿಯೊಳಗೆ ಬೆಳಗಾವಿ ಮಾಧ್ಯಮದವರು ಬೆನ್ನು ಹತ್ತಿದ್ದರು. ಬೆಳಗಾವಿ ಕಮಿಷನರ್ ದುಷ್ಟ ಕೆಲಸ ಮಾಡಿದ್ದಾರೆ. ತಮ ವ್ಯಾಪ್ತಿಯಲ್ಲಿ ಬರದ ಜಾಗದಲ್ಲಿ ಸಿಟಿ ರವಿ ಅವರನ್ನು ಓಡಾಡಿಸಿದ್ದಾರೆ ಎಂದು ಜೋಶಿ ಗರಂ ಆಗಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹ ಶಬ್ದಗಳನ್ನು ಬಳಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಸಿಟಿ ರವಿ ಬಿಡುಗಡೆಯಾದ ವೇಳೆ ಸ್ವಾಗತ ಕೋರಲು ಆ್ಯಂಬುಲೆನ್ಸ್ಗಳನ್ನು ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ. ಚಿಕ್ಕಮಗಳೂರಿನಲ್ಲಿ ಭರ್ಜರಿ ರೋಡ್ ಶೋ ವೇಳೆ ಸಿ.ಟಿ.ರವಿ ಸ್ವಾಗತಕ್ಕೆ ಆ್ಬಂಬುಲೆನ್ಸ್ಗಳು ಸೈರನ್ ಹಾಕಿಕೊಂಡು ಬಂದಿದ್ದವು. ಈ ಸಂಬಂಧ 7 ಆ್ಯಂಬ್ಯುಲೆನ್ಸ್ ಚಾಲಕ, ಮಾಲೀಕರ ವಿರುದ್ಧ ಸಾರ್ವಜನಿಕರ ಶಾಂತಿ ಭಂಗ ಆರೋಪದಡಿ ಎಫ್ಐಆರ್ ದಾಖಲಾಗಿದೆ.