ಹುಂಡಿಯಲ್ಲಿ ಪತ್ತೆಯಾದ ಕೈ ಬರಹದ ನೋಟು 
ರಾಜ್ಯ

Viral News: 'ಅತ್ತೆ ಬೇಗ ಸಾಯುವಂತೆ ಮಾಡು'; 20 ರೂ ನೋಟಿನಲ್ಲಿ ದೇವರಿಗೆ ವಿಚಿತ್ರ ಕೋರಿಕೆ!

ಭಕ್ತೆಯೊಬ್ಬರು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದ ನೋಟಿನ ಮೇಲೆ 'ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಬರೆದು ಹಾಕಿದ್ದಾರೆ.

ಕಲಬುರಗಿ: ಹುಂಡಿ ಹಣ ಎಣಿಕೆ ವೇಳೆ ನೋಟಿನ ಮೇಲೆ ಭಕ್ತರೊಬ್ಬರು ಬರೆದಿದ್ದ ಸಾಲುಗಳನ್ನು ನೋಡಿ ದೇವಸ್ಥಾನದ ಸಿಬ್ಬಂದಿಗಳೇ ತಬ್ಬಿಬಾದ ಘಟನೆ ಕರ್ನಾಟಕದಲ್ಲಿ ನಡೆದಿದೆ.

ಕರ್ನಾಟಕದ ಕಲಬುರಗಿ ಜಿಲ್ಲೆ ಅಫಜಲಾಪುರ ತಾಲೂಕಿನ ಘತ್ತರಗಿ ಗ್ರಾಮದ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಘಟನೆ ನಡೆದಿದ್ದು, ಭಕ್ತೆಯೊಬ್ಬರು ದೇವಸ್ಥಾನದ ಹುಂಡಿಯಲ್ಲಿ ಹಾಕಿದ್ದ ನೋಟಿನ ಮೇಲೆ 'ನಮ್ಮ ಅತ್ತೆ ಬೇಗ ಸಾಯಬೇಕು ಎಂದು ಬರೆದು ಹಾಕಿದ್ದಾರೆ. ಇತ್ತೀಚೆಗೆ ದೇಗುಲದ ಹುಂಡಿ ಹಣ ಎಣಿಕೆ ವೇಳೆ ಸಿಬ್ಬಂದಿ ಈ ನೋಟನ್ನು ನೋಡಿ ತಬ್ಬಿಬ್ಬಾಗಿದ್ದಾರೆ.

ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಮಾಡುವಾಗ ಈ 20 ರೂಪಾಯಿ ನೋಟು ಪತ್ತೆಯಾಗಿದೆ. ನೋಟಿನ ಮೇಲೆ ಬರೆದಿರುವ ಈ ವಾಕ್ಯ ನೋಡಿ ಸಿಬ್ಬಂದಿ ಅಚ್ಚರಿಗೊಂಡರು. ಕೂಡಲೇ ಸಿಬ್ಬಂದಿ ದೇವಸ್ಥಾನದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಇದೀಗ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.

ಅಂದಹಾಗೆ ಭಾಗ್ಯವಂತಿ ದೇವಿ ದೇವಸ್ಥಾನದಲ್ಲಿ ಪ್ರತಿ ವರ್ಷ ಹುಂಡಿ ಎಣಿಕೆ ನಡೆಯುತ್ತದೆ. ಈ ವರ್ಷ ಹುಂಡಿಯಿಂದ ಸುಮಾರು ರೂ. 60 ಲಕ್ಷ ನಗದು ಹಾಗೂ 1 ಕೆಜಿ ಬೆಳ್ಳಿ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ. ದೇಗುಲಕ್ಕೆ ಬರುವ ಕೆಲ ಭಕ್ತರು ತಮ್ಮ ಕೋರಿಕೆಗಳನ್ನು ಬರೆದು ಅದನ್ನು ಹುಂಡಿಗೆ ಹಾಕುತ್ತಾರೆ. ಇದೇ ರೀತಿ ಸೊಸೆಯೊಬ್ಬರು ತಮ್ಮ ಅತೆ ಸಾವಿನ ಕೋರಿಕೆ ಕೋರಿ ಹುಂಡಿಗೆ ಹಣ ಹಾಕಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ ವ್ಯಾಪಾರದ ಗುರಿ; Video

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು 'ನಿಕಾಹ್ ಸಮಾರಂಭ', 12 ಮಂದಿಗೆ ಗಾಯ, Video

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!