'ಕ್ಯಾನ್ಸರ್‌ ಪ್ರಿವೆನ್ಷನ್ ಎ ಗೈಡ್‌' ಬಿಡುಗಡೆ 
ರಾಜ್ಯ

ಕ್ಯಾನ್ಸರ್‌ನಿಂದ ದೂರವಿರಲು 'ಕ್ಯಾನ್ಸರ್‌ ಪ್ರಿವೆನ್ಷನ್ ಎ ಗೈಡ್‌' ಬಿಡುಗಡೆ

ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಭಾನುವಾರ ನಗರದಲ್ಲಿ ಸೊಸೈಟಿ ಫಾರ್‌ ಪ್ರಿವೆನ್ಷನ್‌ ಆಫ್‌ ಕ್ಯಾನ್ಸರ್‌(ಎಸ್‌ಪಿಒಸಿ)  ವತಿಯಿಂದ  ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೂವರು ಕ್ಯಾನ್ಸರ್‌ ತಜ್ಞ ವೈದ್ಯರು ರಚಿಸಿರುವ "ಕ್ಯಾನ್ಸರ್‌ ಪ್ರಿವೆನ್ಷನ್ ಎ ಗೈಡ್‌"...

ಬೆಂಗಳೂರು: ವಿಶ್ವ ಕ್ಯಾನ್ಸರ್‌ ದಿನದ ಅಂಗವಾಗಿ ಭಾನುವಾರ ನಗರದಲ್ಲಿ ಸೊಸೈಟಿ ಫಾರ್‌ ಪ್ರಿವೆನ್ಷನ್‌ ಆಫ್‌ ಕ್ಯಾನ್ಸರ್‌(ಎಸ್‌ಪಿಒಸಿ)  ವತಿಯಿಂದ  ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೂವರು ಕ್ಯಾನ್ಸರ್‌ ತಜ್ಞ ವೈದ್ಯರು ರಚಿಸಿರುವ "ಕ್ಯಾನ್ಸರ್‌ ಪ್ರಿವೆನ್ಷನ್ ಎ ಗೈಡ್‌" ಎಂಬ ವಿಶೇಷ ಪುಸ್ತಕವನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಎಂ.ಕೆ.ರಮೇಶ್ ಅವರು ಬಿಡುಗಡೆ ಮಾಡಿದರು.

ಪುಸ್ತಕ ಬಿಡುಗಡೆಗೊಳಿಸಿದ ಬಳಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ತಡೆಗಟ್ಟುವಿಕೆ ಹಿನ್ನೆಲೆ ಪುಸ್ತಕ ರಚಿಸಿದರ ಕುರಿತು ಸಂತಸ ವ್ಯಕ್ತಪಡಿಸಿದರು. ಪ್ರಸ್ತುತ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಅಳವಡಿಸಿಕೊಂಡಲ್ಲಿ ಕ್ಯಾನ್ಸರ್‌ ವಿರುದ್ಧ ಹೋರಾಟ ನಡೆಸಲು ಸಾ‍ಧ್ಯ ಮತ್ತು ಆರೋಗ್ಯಕರ ಸಮಾಜವನ್ನು ಬೆಳೆಸಲು ಈ ಪುಸ್ತಕ ಕೊಡುಗೆ ನೀಡುತ್ತದೆ ಎಂದು ಲೇಖಕರನ್ನು ಶ್ಲಾಘಿಸಿದರು.

ಪುಸ್ತಕದ ಸಹ ಸಂಪಾದಕರಾದ ಡಾ. ನಂದಾ ರಜನೀಶ್(ಸೊಸೈಟಿ ಫಾರ್‌ ಪ್ರಿವೆನ್ಷನ್‌ ಆಫ್‌ ಕ್ಯಾನ್ಸರ್‌ - ಸಂಸ್ಥಾಪಕ-ನಿರ್ದೇಶಕರು ಮತ್ತು ಅಧ್ಯಕ್ಷರು) ಮಾತನಾಡಿ, ಕ್ಯಾನ್ಸರ್ ತಡೆಗಟ್ಟುವಿಕೆಗೆ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಲು  ಸಲಹೆ ನೀಡಿದರು. ಪ್ರಸ್ತುತ ಪುಸ್ತಕವು ಕ್ಯಾನ್ಸರ್‌ ತಡೆಗಟ್ಟುವ ಕ್ರಮಗಳಿಗೆ ಮಾತ್ರವಲ್ಲದೆ ಕ್ಯಾನ್ಸರ್ ರೋಗಿಗಳಿಗೂ ಕೂಡ ಕ್ಯಾನ್ಸರ್‌ ವಿರುದ್ಧ ಹೋರಾಡಲು ಮಾರ್ಗದರ್ಶನ ನೀಡುತ್ತದೆ ಎಂದರು. 
  
ಕಾರ್ಯಕ್ರಮದಲ್ಲಿ ಸಹ ಸಂಪಾದಕರಾದ ಹಾಗೂ ಯೆನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಎಂ. ವಿಜಯ್ ಕುಮಾರ್ ಮಾತನಾಡಿ, ಪುಸ್ತಕದಲ್ಲಿ ಎಲ್ಲಾ ರೀತಿಯ ಕ್ಯಾನ್ಸರ್‌ ತಡೆಗಟ್ಟುವಿಕೆಗೆ ಮಾರ್ಗದರ್ಶನ ನೀಡಲಾಗಿದೆ. ಕ್ಯಾನ್ಸರ್‌ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ ಎಂದು ಒತ್ತಿ ಹೇಳಿದರು. ಅಲ್ಲದೆ ಇನ್ನಷ್ಟು ವಿಷಯಗಳ ಅಳವಡಿಕೆಯೊಂದಿಗೆ ಪುಸ್ತಕದ ಎರಡನೇ ಆವೃತ್ತಿಯನ್ನು ಬಿಡುಗಡೆ ಮಾಡಲು ಯೋಜಿಸಿರುವುದಾಗಿ ತಿಳಿಸಿದರು.

ಮತ್ತೋರ್ವ ಸಹ ಸಂಪಾದಕರಾದ ಡಾ. ರೋಹನ್ ಥಾಮಸ್ ಮ್ಯಾಥ್ಯೂ ಅವರು ಮಾತನಾಡಿ, ಪುಸ್ತಕದಲ್ಲಿ ನೀಡಲಾಗಿರುವ ಪ್ರಾಯೋಗಿಕ ಸಲಹೆಗಳ ಕುರಿತು ವಿವರಿಸಿದರು. ತಂಬಾಕು ಹಾಗೂ ಮದ್ಯಪಾನವನ್ನು ತ್ಯಜಿಸುವುದರಿಂದ ಹಿಡಿದು ಸಮಗ್ರ ಚಿಕಿತ್ಸೆಗಳ ಕುರಿತಾಗಿ ಮಾಹಿತಿ ನೀಡಿದರು. ಎರಡು ವರ್ಷಗಳ ನಿರಂತರ ಶ್ರಮದಿಂದ ರಚಿಸಲಾದ ಈ ಕೃತಿಯು ಶೈಕ್ಷಣಿಕ ಮಾಹಿತಿಗೆ ಸೀಮಿತವಾಗಿರದೆ ಪ್ರತಿಯೊಬ್ಬರಿಗೂ ಮಾರ್ಗದರ್ಶಿಯಾಗಿದೆ ಎಂದರು. ಪುಸ್ತಕದ ಪ್ರತಿ ಅಧ್ಯಾಯವು ಕ್ಯಾನ್ಸರ್ ತಡೆಗಟ್ಟುವಿಕೆಯ ಬಗ್ಗೆ ಒತ್ತಿ ಹೇಳುತ್ತದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ. ಹರಿಪ್ರಸಾದ್

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

Idre Nemdiyaag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

SCROLL FOR NEXT