ಅಪ್ಪು ಅಭಿಮಾನಿ ಮುತ್ತು ಸೆಲ್ವಂ 
ರಾಜ್ಯ

ಸೈಕಲ್ ನಲ್ಲಿ ಅಪ್ಪು ಅಭಿಮಾನಿ ವಿಶ್ವ ಪರ್ಯಟನೆ, ಗಿನ್ನಿಸ್ ದಾಖಲೆ ಮೇಲೆ ಕಣ್ಣು!

ತಮಿಳುನಾಡಿನ ಕೊಯಮತ್ತೂರಿನ ಯುವಕನೊರ್ವ ಪ್ರಪಂಚದಾದ್ಯಂತ ತನ್ನನ್ನು ಗುರುತಿಸಿಕೊಳ್ಳಲು ಹೊರಟಿದ್ದಾರೆ. ಮುತ್ತು ಸೆಲ್ವನ್ (26) ಅಪ್ಪು ಅವರ ಅಪಟ್ಟ ಅಭಿಮಾನಿಯಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಮತ್ತಿತರ ದೇಶಗಳನ್ನೊಳಗೊಂಡ ಬೈಸಿಕಲ್ ಪ್ರವಾಸದಲ್ಲಿದ್ದಾರೆ. 

ಗದಗ: ತಮಿಳುನಾಡಿನ ಕೊಯಮತ್ತೂರಿನ ಯುವಕನೋರ್ವ ಪ್ರಪಂಚದಾದ್ಯಂತ ತನ್ನನ್ನು ಗುರುತಿಸಿಕೊಳ್ಳಲು ಹೊರಟಿದ್ದಾರೆ. ಮುತ್ತು ಸೆಲ್ವನ್ (26) ಅಪ್ಪು ಅವರ ಅಪಟ್ಟ ಅಭಿಮಾನಿಯಾಗಿದ್ದು, ಭಾರತ, ಚೀನಾ, ವಿಯೆಟ್ನಾಂ ಮತ್ತಿತರ ದೇಶಗಳನ್ನೊಳಗೊಂಡ ಬೈಸಿಕಲ್ ಪ್ರವಾಸದಲ್ಲಿದ್ದಾರೆ. ಡಿಸೆಂಬರ್ 21, 2023 ರಂದು ತಮ್ಮ ಸೈಕಲ್ ಪ್ರವಾಸ ಆರಂಭಿಸಿದ ಸೆಲ್ವಂ ಶನಿವಾರ ಗದಗ ಜಿಲ್ಲೆ ತಲುಪಿದರು. 

ಎಂಬಿಎ ಪದವೀಧರರಾಗಿರುವ ಸೆಲ್ವಂ ಬಯೋ-ಮೆಡಿಕಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದಾರೆ ಆದರೆ ತಮ್ಮ ಬೈಸಿಕಲ್ ಪ್ರವಾಸಕ್ಕಾಗಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಸೈಕಲ್ ಮುಂಭಾಗದಲ್ಲಿ ಅಪ್ಪು ಅವರ ಫೋಟೋ ಹಾಕಿದ್ದು, ಅಪ್ಪುವಿನ ಚಿತ್ರವಿರುವ ಬಟ್ಟೆಗಳನ್ನೂ ಧರಿಸುತ್ತಾರೆ. ಪೆಟ್ರೋಲ್ ಬಂಕ್, ಮಠ ಮತ್ತು ಕ್ರೀಡಾಂಗಣದಲ್ಲಿ ಮಲಗುವ ಸೆಲ್ವಂ, ಪ್ರವಾಸದ ಸಮಯದಲ್ಲಿ ತಾವೇ ಆಹಾರ ತಯಾರಿಸಿಕೊಳ್ಳುತ್ತಾರೆ. ಆಹಾರ ಪದಾರ್ಥಗಳು, ಬಟ್ಟೆಗಳು ಸೇರಿದಂತೆ ನಿತ್ಯ 150 ಕೆಜಿ ತೂಕದ ಸಾಮಾನುಗಳನ್ನು ಸಾಗಿಸುತ್ತಾರೆ.

ಶನಿವಾರ ಮತ್ತು ಭಾನುವಾರ ಗದಗ ಜಿಲ್ಲೆಯ ನರೇಗಲ್, ರೋಣ, ನರಗುಂದ ಮತ್ತಿತರ ಕಡೆಗಳಲ್ಲಿ ತೆರಳಿದ ಸೆಲ್ವಂ ಅವರಿಗೆ ಸ್ಥಳೀಯರು ಸ್ವಾಗತಿಸಿ, ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾನು ಅಪ್ಪು ಅವರ ಅಭಿಮಾನಿ ಮತ್ತು ಅವರ ವ್ಯಕ್ತಿತ್ವ, ಜೀವನ ಮತ್ತು ಸಾಧನೆಗಳ ಬಗ್ಗೆ ಜನರಿಗೆ ಹೇಳುತ್ತೇನೆ. ಅಮೆರಿಕದ ಲಿಖಲ್ ಅವರು 752 ದಿನಗಳಲ್ಲಿ ವಿಶ್ವ ಪ್ರವಾಸ ಕೈಗೊಳ್ಳುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ. ಹಾಗಾಗಿ ಈ ದಾಖಲೆ ಮುರಿಯಲು ನಿರ್ಧರಿಸಿದ್ದೇನೆ. 1,111 ದಿನಗಳಲ್ಲಿ ಕೆಲವು ದೇಶಗಳನ್ನು ಸುತ್ತುವ ಯೋಜನೆಯನ್ನು ಹೊಂದಿದ್ದೇನೆ. ಕಳೆದ ಎರಡು ವರ್ಷಗಳಿಂದ  ನನ್ನ ಊರಿಗೆ ಹೋಗಿಲ್ಲ ಎಂದು ತಿಳಿಸಿದರು.

ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಿಂದ ಡಿಸೆಂಬರ್ 21 ರಂದು ತಮ್ಮ ಸೈಕಲ್ ಪ್ರಯಾಣವನ್ನು ಪ್ರಾರಂಭಿಸಿದ ಸ್ವೆಲ್ವಂ ಭಾರತದ ವಿವಿಧ ರಾಜ್ಯಗಳಿಗೆ ಮತ್ತು ನೇಪಾಳ, ವಿಯೆಟ್ನಾಂ ಮತ್ತು ಚೀನಾದಂತಹ ದೇಶಗಳಿಗೆ ಭೇಟಿ ನೀಡುವ ಯೋಜನೆಯನ್ನು ಹೊಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

SCROLL FOR NEXT