ರಾಜ್ಯ

ಬೆಂಗಳೂರು: ಕಾಸ್ಮೆಟಿಕ್ ಚಿಕಿತ್ಸೆಗೆ ಬಂದ ಮಹಿಳೆ; ಐಷಾರಾಮಿ ಕಾರು ಕೊಡಿಸೋದಾಗಿ ವೈದ್ಯ ದಂಪತಿಗೆ 6.20 ಕೋಟಿ ವಂಚನೆ!

Shilpa D

ಬೆಂಗಳೂರು: ಕಾಸ್ಮೆಟಿಕ್ಸ್ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬಳು ಖಾಸಗಿ ಆಸ್ಪತ್ರೆಯ ವೈದ್ಯ ದಂಪತಿ ಸೆಕೆಂಡ್ ಹ್ಯಾಂಡ್ ಐಷಾರಾಮಿ ಕಾರು ಕೊಡಿಸುವುದಾಗಿ ಭರವಸೆ ನೀಡಿ 6 ಕೋಟಿ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿ ಐಶ್ವರ್ಯ ಗೌಡ ಅವರು 2022 ರಲ್ಲಿ ತಮ್ಮ ಆಸ್ಪತ್ರೆಯಲ್ಲಿ ಕಾಸ್ಮೆಟಿಕ್ಸ್ ಶಸ್ತ್ರಚಿಕಿತ್ಸೆಗೆ ಒಳಗಾದಾಗ ಡಾ.ಗಿರೀಶ್ ಮತ್ತು ಅವರ ಪತ್ನಿ ಡಾ. ಮಂಜುಳಾ ಅವರನ್ನು ಭೇಟಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಸಂಭಾಷಣೆಯ ಸಮಯದಲ್ಲಿ, ದಂಪತಿಗಳ ಸಂಪತ್ತಿನ ಬಗ್ಗೆ ತಿಳಿದುಕೊಂಡ ನಂತರ, ಐಶ್ವರ್ಯಾ ಅವರು ರಿಯಲ್ ಎಸ್ಟೇಟ್, ಹಣಕಾಸು ಮತ್ತು ಹಣಕಾಸು ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಐಷಾರಾಮಿ ಕಾರು ವ್ಯಾಪಾರ ಮಾಡುತ್ತಿದ್ದು ಪ್ರಭಾವಿ ಜನರೊಂದಿಗೆ ಸಂಬಂಧ ಇರುವುದಾಗಿ ತಿಳಿಸಿದ್ದಾಳೆ.

ಐಷಾರಾಮಿ ಕಾರು ಖರೀದಿಸಲು ಉತ್ಸುಕರಾಗಿದ್ದ ಡಾ ಗಿರೀಶ್ ಅವರು ಐಶ್ವರ್ಯಾಳನ್ನು  ಸಂಪರ್ಕಿಸಿ, 2. 75 ಕೋಟಿ ರೂ.ಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಿದರು. ಕೆಲವು ದಿನಗಳ ನಂತರ, ಅವರು ರೂ 3.25 ಕೋಟಿ ಹಣವನ್ನು ಹಸ್ತಾಂತರಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಹಲವಾರು ತಿಂಗಳುಗಳು ಕಳೆದರೂ ಕಾರಿನ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ, ಡಾ. ಗಿರೀಶ್ ಐಶ್ವರ್ಯಾಗೆ ತನ್ನ ಹಣವನ್ನು ಹಿಂದಿರುಗಿಸುವಂತೆ ವಿನಂತಿಸಿದ್ದಾರೆ. ಆದರೆ ಹಣಕೇಳಿದ್ದಕ್ಕೆ ಆಕ್ರೋಶಗೊಂಡ ಐಶ್ವರ್ಯ ಅತ್ಯಾಚಾರ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾಳೆ.

ವೈದ್ಯರು ಜೋರು ಮಾಡಿದಾಗ ಹಣದ ವಿಚಾರ ಮಾತುಕತೆಗೆ ವಿಜಯನಗರ ಕ್ಲಬ್ ಬಳಿ ಬರುವಂತೆ ಆರೋಪಿ ಸೂಚಿಸಿದ್ದಳು. ಅಂತೆಯೇ ಕ್ಲಬ್ ಬಳಿ ತೆರಳಿದ ವೈದ್ಯ ಗಿರೀಶ್ ದಂಪತಿ ಮೇಲೆ ಐಶ್ವರ್ಯ ಗಲಾಟೆ ಮಾಡಿದ್ದಾಳೆ. 'ನೀನು ಹಣ ಕೇಳಿದರೆ ಅತ್ಯಾಚಾರ ಮಾಡಿರುವುದಾಗಿ ಪ್ರಕರಣ ದಾಖಲಿಸುತ್ತೇನೆ. ಮಾಧ್ಯಮಗಳಿಗೆ ತಿಳಿಸಿ ನಿಮ್ಮ ಮರ್ಯಾದೆ ಕಳೆಯುವುದಾಗಿ ಆಕೆ ಬೆದರಿಸಿ ಮತ್ತೆ 5 ಲಕ್ಷ ಹಣ ಸುಲಿಗೆ ಮಾಡಿದ್ದಾಳೆ

ಮತ್ತೆ ಐಶ್ವರ್ಯಾಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ  ಆಕೆ ಕರೆಗಳಿಗೆ ಉತ್ತರಿಸಲಿಲ್ಲ, ನಂತರ ವೈದ್ಯ ದಂಪತಿ  ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಬಂಧಿಸಿಲ್ಲ.

SCROLL FOR NEXT