ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೊಸದುರ್ಗದ ಬ್ರಹ್ಮವಿದ್ಯಾನಗರ ಸುಕ್ಷೇತ್ರದಲ್ಲಿ ಜಗದ್ಗುರು ಡಾ.ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳ 25ನೇ ವರ್ಷದ ಪಟ್ಟಾಭಿಷೇಕದ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಭಗೀರಥ ಜಯಂತ್ಸೋತ್ಸವ ಹಾಗೂ ಉಪ್ಪಾರ ಸಮುದಾಯದ ಬೃಹತ್ ಸಮಾವೇಶವನ್ನು ಉದ್ಘಾಟಿಸಿದರು 
ರಾಜ್ಯ

ಶೋಷಿತ ಸಮುದಾಯದವರು ನೀವೇ ದೇಗುಲ ನಿರ್ಮಿಸಿಕೊಂಡು ನೀವೇ ಪೂಜಾರಿಗಳಾಗಿ: ಸಿಎಂ ಸಿದ್ದರಾಮಯ್ಯ

ಶೋಷಿತ ಸಮುದಾಯದ ಜನರು ನೀವೇ ದೇಗುಲ ನಿರ್ಮಿಸಿಕೊಳ್ಳಿ. ನೀವೇ ದೇವಸ್ಥಾನಗಳಲ್ಲಿ ಪೂಜಾರಿಗಳಾಗಿ ಎಂದು  ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಚಿತ್ರದುರ್ಗ: ಶೋಷಿತ ಸಮುದಾಯದ ಜನರು ನೀವೇ ದೇಗುಲ ನಿರ್ಮಿಸಿಕೊಳ್ಳಿ. ನೀವೇ ದೇವಸ್ಥಾನಗಳಲ್ಲಿ ಪೂಜಾರಿಗಳಾಗಿ ಎಂದು  ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ ನಡೆದ ಉಪ್ಪಾರ ಸಮಾವೇಶದಲ್ಲಿ ಚನ್ನಕೇಶವ ದೇವಸ್ಥಾನದಲ್ಲಿ ಕುರುಬ ಸ್ವಾಮೀಜಿಗೆ ನಿರ್ಬಂಧ ವಿಚಾರವಾಗಿ ಮಾತನಾಡಿದ ಅವರು, ಇತ್ತೀಚೆಗೆ ಗರ್ಭಗುಡಿಗೆ ಶ್ರೀಗಳಿಗೆ ನಿರ್ಬಂಧ ವಿಚಾರ ತಿಳಿದು ಬೇಸರವಾಯಿತು. ಪಟ್ಟಭದ್ರರಿಂದ ಎಚ್ಚರವಾಗಿರಿ, ಬಿಕೇರ್ ಫುಲ್. ಶಿಕ್ಷಣದಿಂದ ವಂಚಿತರನ್ನಾಗಿಸುವ ಕೆಲಸ ಹಿಂದಿನಿಂದಲೂ ನಡೆದಿದೆ. ಮೊದಲು ಶಿಕ್ಷಿತರಾಗಿ ಬಳಿಕ ಸಾಮಾಜಿಕ, ಆರ್ಥಿಕವಾಗಿ ಸಬಲರಾಗಿರಿ. ನಾನು ಚಿಕ್ಕಂದಿನಲ್ಲಿ ಬಾವಿ ನೀರು ತರಲು ಹೋಗುತ್ತಿದ್ದೆನು. ಕಸ ತಿಳಿಗೊಳಿಸಿ ಕೊಡದಲ್ಲಿ ನೀರು ತುಂಬಿಕೊಳ್ಳುತ್ತಿದ್ದೆನು. ಬಳಿಕ ಮತ್ತೆ ನೀರ ಮೇಲೆ‌ ಕಸ‌ ಮುಚ್ಚಿಕೊಳ್ಳುತ್ತಿತ್ತು. ದಾರ್ಶನಿಕರು ಜಾಗೃತಿ ಮೂಡಿಸಿದಾಗ ಜಾತಿ ವ್ಯವಸ್ಥೆ ತಿಳಿಯಾಗಿದೆ. ಬಳಿಕ ಮತ್ತೆ ಜಾತಿ ವ್ಯವಸ್ಥೆ ಗಟ್ಟಿ ಆಗುತ್ತಲೇ ಸಾಗಿದೆ ಎಂದರು.

ಪ್ರತಿಭೆ ಯಾರ ಸ್ವತ್ತಲ್ಲ, ಜಾತಿಯಿಂದ ಬರುವಂಥದಲ್ಲ. ಮಹಾನ್ ವಿದ್ವಾಂಸ ಅಂಬೇಡ್ಕರ್ ಯಾವ ಜಾತಿಯಲ್ಲಿ ಹುಟ್ಟಿದವರು? ಭಗೀರಥ ಮಹರ್ಷಿ ಶಿವನಿಗೆ ಒಲಿಸಿ ನೀರು ತರಲಿಲ್ಲವೇ ಎಂದು ಸಿದ್ದರಾಮಯ್ಯ ಕೇಳಿದರು. 

ಗ್ಯಾರಂಟಿ ಬಗ್ಗೆ ಟೀಕೆ ಮಾಡ್ತಾರೆ: ಜನಪರ ಯೋಜನೆಗಳನ್ನು ಮಾಡದವರು ಗ್ಯಾರಂಟಿ ಟೀಕಿಸುತ್ತಾರೆ. ಗ್ಯಾರಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡುತ್ತಾರೆ, ಹೀಯಾಳಿಸುತ್ತಾರೆ. ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸಲ್ಲ. ನಾವೆಲ್ಲಾ ಶ್ರೀರಾಮನ ಭಕ್ತರಲ್ಲವೇ, ರಾಮಾಯಣ ಓದಿಲ್ಲವೇ. ಪಿತೃ ವಾಕ್ಯ ಪರಿಪಾಲನೆ, ರಾಮರಾಜ್ಯ ನಿರ್ಮಿಸಿದ್ದಕ್ಕೆ ಶ್ರೀರಾಮನ ಪೂಜಿಸುತ್ತೇವೆ ಎಂದು ಹೇಳಿದ್ದಾರೆ.

ಕಷ್ಟಪಟ್ಟು ಓದಿದ್ದಕ್ಕೆ ಇಂದು ಮುಖ್ಯಮಂತ್ರಿ: ನನ್ನ ತಂದೆ ಪ್ರತಿಯೊಂದಕ್ಕೂ ಶಾನುಭೋಗರ ಬಳಿ ಕೇಳುತ್ತಿದ್ದರು. ಕಾನೂನು ಪದವಿ ಅಭ್ಯಾಸಕ್ಕೆಂದು ಕೇಳಿದಾಗ ಬೇಡ ಅಂದಿದ್ದರು. ನಾನು ಊರ ಪಂಚಾಯಿತಿ ಸೇರಿಸಿ ಕಾನೂನು ಪದವಿ ಓದಿದೆ. ಕಾನೂನು ಪದವಿ ಓದಿದ್ದಕ್ಕೆ ನಾನು ಈಗ ಮುಖ್ಯಮಂತ್ರಿ ಆಗಿದ್ದೇನೆ. ಅವಕಾಶ ಸಿಕ್ಕರೆ ಎಲ್ಲವೂ ಸಾಧ್ಯ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

30 ನಿಮಿಷಗಳಲ್ಲಿ ಹಿಂದಕ್ಕೆ ಹೋಗಿ: ಶಾಂತಿ ಮಾತುಕತೆ ಮಧ್ಯೆ ಹಾರ್ಮುಜ್'ಗೆ ನುಗ್ಗಿದ ಅಮೆರಿಕದ Destroyer ಯುದ್ಧನೌಕೆಗೆ ಇರಾನ್ ಎಚ್ಚರಿಕೆ!

"ಇರಾನ್ ದೊಡ್ಡ ಮಟ್ಟದಲ್ಲಿ ಸೋಲುತ್ತಿದೆ": ಮಾತುಕತೆ ಮುಕ್ತಾಯಕ್ಕೂ ಮುನ್ನ ಟ್ರಂಪ್ ಘೋಷಣೆ

IPL 2026: ಸ್ಯಾಮ್ಸನ್ ಬ್ಯಾಟಿಂಗ್ ಅಬ್ಬರ; DC ವಿರುದ್ಧ CSK ಗೆ 23 ರನ್ ಗಳ ಭರ್ಜರಿ ಜಯ

ಖ್ಯಾತ ಗಾಯಕಿ ಆಶಾ ಭೋಸ್ಲೆಗೆ ಹೃದಯಾಘಾತ: ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲು

IPL 2026: ಚೆನ್ನೈ ಪರ ಸಂಜು ಸ್ಯಾಮ್ಸನ್ ಸ್ಫೋಟಕ ಬ್ಯಾಟಿಂಗ್; MS ಧೋನಿ ದಾಖಲೆ ಪುಡಿ; ದಿಗ್ಗಜರ ಗುಂಪಿಗೆ ಸೇರ್ಪಡೆ

SCROLL FOR NEXT