ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದಲ್ಲಿ ಕೃಷಿ ಅರಣ್ಯ ಪ್ರದೇಶಗಳ ಹೆಚ್ಚಳ: ತಜ್ಞರ ಅಭಿಮತ

ಕೃಷಿ ಅರಣ್ಯವು ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 8.65 ನ್ನು ಒಳಗೊಂಡಿದೆ, ಅಂದರೆ ಒಟ್ಟು 28.42 ಮಿಲಿಯನ್ ಹೆಕ್ಟೇರ್ ಪ್ರದೇಶವಿದೆ.

ಬೆಂಗಳೂರು: ನೀತಿ ಆಯೋಗದ ವರದಿಯ ನಂತರ - ಕೃಷಿ ಅರಣ್ಯ (GROW) ಜೊತೆ ಪಾಳುಭೂಮಿಯ ಹಸಿರೀಕರಣ ಮತ್ತು ಮರುಸ್ಥಾಪನೆ ಕ್ರಮದಲ್ಲಿ, ಕರ್ನಾಟಕ ಸರ್ಕಾರವು ಕೃಷಿ ಅರಣ್ಯ ಪ್ರದೇಶವನ್ನು ಮೌಲ್ಯಮಾಪನ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಲಿದೆ.

ರಿಮೋಟ್ ಸೆನ್ಸಿಂಗ್ ಮತ್ತು ಜಿಐಎಸ್ ಬಳಸಿ ಭಾರತದ ಎಲ್ಲಾ ಜಿಲ್ಲೆಗಳಿಗೆ ಸೂಕ್ತವಾದ ಕೃಷಿ ಅರಣ್ಯವನ್ನು ನಿರ್ಣಯಿಸಲು ವರದಿಯನ್ನು ಸಿದ್ಧಪಡಿಸಲಾಗಿದೆ. ಹೊಸದಾಗಿ ಅಭಿವೃದ್ಧಿಪಡಿಸಿದ ಭುವನ್ ಪೋರ್ಟಲ್‌ನಲ್ಲಿ GROW ನಕ್ಷೆಯನ್ನು ಅಪ್‌ಲೋಡ್ ಮಾಡಲಾಗಿದೆ. ಕೃಷಿ ಅರಣ್ಯ ಸೂಕ್ತ ಸೂಚ್ಯಂಕವನ್ನು (ASI) ಪಾಳು ಭೂಮಿಗಳು, ಭೂ ಬಳಕೆ, ಭೂ ಹೊದಿಕೆ, ಜಲಮೂಲಗಳು, ಮಣ್ಣಿನ ಸಾವಯವ ಇಂಗಾಲ ಮತ್ತು ಇಳಿಜಾರು ಸೇರಿದಂತೆ ಬಹು ಅಂಕಿಅಂಶ ಸೆಟ್‌ಗಳನ್ನು ಸಂಯೋಜಿಸಲು ಅಭಿವೃದ್ಧಿಪಡಿಸಲಾಗಿದೆ.

ವರದಿಯ ಪ್ರಕಾರ, ಕೃಷಿ ಅರಣ್ಯವು ಭಾರತದ ಒಟ್ಟು ಭೌಗೋಳಿಕ ಪ್ರದೇಶದ ಶೇಕಡಾ 8.65 ನ್ನು ಒಳಗೊಂಡಿದೆ, ಅಂದರೆ ಒಟ್ಟು 28.42 ಮಿಲಿಯನ್ ಹೆಕ್ಟೇರ್ ಪ್ರದೇಶವಿದೆ. ಪ್ರಸ್ತುತ ವರದಿಯು ಕಡಿಮೆ ಬಳಕೆಯಾಗದ ಪ್ರದೇಶಗಳನ್ನು ವಿಶೇಷವಾಗಿ ಪಾಳುಭೂಮಿಗಳನ್ನು ಕೃಷಿ ಅರಣ್ಯಕ್ಕಾಗಿ ಪರಿವರ್ತಿಸುವ ಸಂಭಾವ್ಯ ಪ್ರಯೋಜನಗಳನ್ನು ಒತ್ತಿಹೇಳುತ್ತದೆ.

GROW ಉಪಕ್ರಮದಡಿ 2030 ರ ವೇಳೆಗೆ 26 ಮಿಲಿಯನ್ ಹೆಕ್ಟೇರ್‌ಗಳಷ್ಟು ನಾಶವಾದ ಭೂಮಿಯನ್ನು ಪುನಃಸ್ಥಾಪಿಸಲು ಮತ್ತು 2.5 ರಿಂದ 3 ಶತಕೋಟಿ ಟನ್‌ಗಳಷ್ಟು ಇಂಗಾಲದ ಡೈಆಕ್ಸೈಡ್‌ಗೆ ಸಮಾನವಾದ ಹೆಚ್ಚುವರಿ ಕಾರ್ಬನ್ ಸಿಂಕ್ ನ್ನು ರಚಿಸುವ ಗುರಿಯನ್ನು ಹೊಂದಿದೆ.

2014 ರಲ್ಲಿ, ಪರ್ಯಾಯ ಭೂ ಬಳಕೆಯ ವ್ಯವಸ್ಥೆಗಳ ಮೂಲಕ ಸುಸ್ಥಿರತೆ ಮತ್ತು ಲಾಭದಾಯಕತೆಯನ್ನು ಸುಧಾರಿಸಲು ಭಾರತವು ರಾಷ್ಟ್ರೀಯ ಕೃಷಿ ಅರಣ್ಯ ನೀತಿಯನ್ನು ಪರಿಚಯಿಸಿತು. ಇದು ಪ್ಯಾರಿಸ್ ಒಪ್ಪಂದ, ಬಾನ್ ಚಾಲೆಂಜ್, ಯುಎನ್ ಸುಸ್ಥಿರ ಅಭಿವೃದ್ಧಿ ಗುರಿಗಳು (SDGs), ಮರುಭೂಮಿಯನ್ನು ಎದುರಿಸಲು ಯುಎನ್ ಕನ್ವೆನ್ಶನ್ (UNCCD), ಮತ್ತು ಗ್ರೀನ್ ಇಂಡಿಯಾ ಮಿಷನ್‌ನಂತಹ ಜಾಗತಿಕ ಮತ್ತು ರಾಷ್ಟ್ರೀಯ ಬದ್ಧತೆಯನ್ನು ತೋರಿಸುತ್ತದೆ.

2022-23 ರಲ್ಲಿ ಕೇಂದ್ರ ಸರ್ಕಾರವು ಕೃಷಿ ಅರಣ್ಯ ಮತ್ತು ಖಾಸಗಿ ಅರಣ್ಯವನ್ನು ಆದ್ಯತೆಯಾಗಿ ಉತ್ತೇಜಿಸಲು ಒತ್ತಿಹೇಳಿದೆ. ನಿರ್ಮಾಣ ಪ್ರದೇಶದ ಹೆಚ್ಚಳ, ಭೂಮಿಯ ಅವನತಿ ಮತ್ತು ಅಸಮತೋಲನದ ಸಂಪನ್ಮೂಲಗಳಂತಹ ಸಮಸ್ಯೆಗಳನ್ನು ಎದುರಿಸುತ್ತಿರುವ ಏಳನೇ ಅತಿದೊಡ್ಡ ದೇಶ ಭಾರತವಾಗಿದೆ.

ಹಸಿರು ತೆರಿಗೆ: ಬಂಡೀಪುರ 10 ತಿಂಗಳಲ್ಲಿ 4.5 ಕೋಟಿ ರೂ

‘ಹಸಿರು ತೆರಿಗೆ’ ಮೂಲಕ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅಧಿಕಾರಿಗಳು ಕೇವಲ 10 ತಿಂಗಳಲ್ಲಿ 4.5 ಕೋಟಿ ರೂಪಾಯಿ ಆದಾಯವನ್ನು ಅಂತಾರಾಜ್ಯ ವಾಹನಗಳಿಂದ ಸಂಗ್ರಹಿಸಿದ್ದಾರೆ. ಅಧಿಕಾರಿಗಳು ಬಸ್ ಮತ್ತು ಮಿನಿ ಬಸ್‌ಗಳಿಗೆ 50 ರೂಪಾಯಿ ಮತ್ತು ಬಂಡೀಪುರ ಮೂಲಕ ತಮಿಳುನಾಡು ಮತ್ತು ಕೇರಳದ ಕಡೆಗೆ ಹಾದುಹೋಗುವ ಕಾರುಗಳಿಗೆ 20 ರೂಪಾಯಿ ಶುಲ್ಕವನ್ನು ವಿಧಿಸುತ್ತಿದ್ದಾರೆ. ಉಪಕ್ರಮವನ್ನು 2019 ರಲ್ಲಿ ಪ್ರಸ್ತಾಪಿಸಲಾಗಿದ್ದರೂ, ಸೆಸ್ ಸಂಗ್ರಹವು ಏಪ್ರಿಲ್ 2023 ರಿಂದ ಪ್ರಾರಂಭವಾಯಿತು.

ಸೆಸ್ ಸಂಗ್ರಹದ ಕುರಿತು ಮಾತನಾಡಿದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ರಮೇಶ್ ಕುಮಾರ್, ಸಂಗ್ರಹಿಸಿದ ಮೊತ್ತವನ್ನು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಯ ವೇತನ ಪಾವತಿಸಲು ಬಳಸಲಾಗುತ್ತದೆ. ಅಂತರ ಜಿಲ್ಲಾ ಮತ್ತು ಅಂತರ ರಾಜ್ಯ ವಾಹನಗಳಿಂದ ತೆರಿಗೆ ಸಂಗ್ರಹಿಸಲಾಗುತ್ತಿದೆ. ಸರಕಾರದಿಂದ ಹಣ ಮಂಜೂರಾತಿಗೆ ಕಾಯದೆ ತೆರಿಗೆಯಿಂದ ಸಂಗ್ರಹವಾಗುವ ಮೊತ್ತವನ್ನು ಸಿಬ್ಬಂದಿಯ ವೇತನ ಮತ್ತು ಕಲ್ಯಾಣಕ್ಕೆ ಬಳಸಲಾಗುವುದು ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಕುರ್ಚಿ ಕಸರತ್ತು: ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ, ರಾಹುಲ್-ಸೋನಿಯಾ ಜೊತೆ ಚರ್ಚಿಸಿ ಗೊಂದಲ ಬಗೆಹರಿಸುವೆ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ: ಸಿದ್ದುಗೆ ಪರೋಕ್ಷ ಟಾಂಗ್ ಕೊಟ್ಟರೇ ಡಿಕೆಶಿ..?

ಮೊದಲು ಪರಮೇಶ್ವರ್ ಕೂಲಿ ಚುಕ್ತಾ ಮಾಡಲಿ: ನಂತರ ವಿಧಾನಸಭೆ ವಿಸರ್ಜಿಸಿ ಡಿಕೆಶಿ ನೇತೃತ್ವದಲ್ಲೇ ಚುನಾವಣೆಗೆ ಹೋಗೋಣ!

ನಾವು ಬಿಟ್ಟರು ಧರ್ಮ, ಜಾತಿ ನಮ್ಮನ್ನು ಬಿಡುವುದಿಲ್ಲ: ಒಕ್ಕಲಿಗನಾಗಿ ಹುಟ್ಟಿದ್ದೇನೆ; ಅಶೋಕಣ್ಣನಿಗೆ ಬ್ಯಾಡ್ಜ್ ಕಳಿಸುತ್ತೇನೆ ಹಾಕಿಕೊಳ್ಳಲಿ; DKS

ಅಮೆರಿಕ ಶಕ್ತಿ ಕೇಂದ್ರ ಶ್ವೇತಭವನ ಬಳಿ ಇಬ್ಬರು ಯುಎಸ್ ರಾಷ್ಟ್ರೀಯ ಗಾರ್ಡ್ ಗಳ ಮೇಲೆ ಗುಂಡಿನ ದಾಳಿ: ಶಂಕಿತನ ಗುರುತು ಪತ್ತೆ

SCROLL FOR NEXT