ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್  
ರಾಜ್ಯ

ಬೆಂಗಳೂರಿನ ಜಲಸಮಸ್ಯೆ ಬಗೆಹರಿಸಲು ಕ್ರಮ: ಬೋರ್ ವೆಲ್ ತೆಗೆಸಲು ನಿರ್ಧಾರ

131 ಕೋಟಿ ರೂ ಮೀಸಲು, ನೀರಿನ ಟ್ಯಾಂಕರ್​ಗಳಿಗೆ ದರ ನಿಗದಿ

ಬೆಂಗಳೂರು: ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆ ರಾಜಧಾನಿ ಬೆಂಗಳೂರಿನಲ್ಲಿ ನೀರಿಗೆ ಹಾಹಾಕಾರ ಕೇಳಿಬರುತ್ತಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ, ಟ್ಯಾಂಕರ್ ನೀರಿಗೆ ನಾಗರಿಕರಿಂದ ಹಣ ಸುಲಿಗೆ ಮಾಡಲಾಗುತ್ತಿದೆ ಎಂಬ ದೂರುಗಳ ಮಧ್ಯೆ ಶನಿವಾರ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಕುರಿತು ಸಭೆ ನಡೆಸಿ ಚರ್ಚಿಸಿದ ಬಳಿಕ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸುದ್ದಿಗೋಷ್ಠಿ ನಡೆಸಿ ಹಲವು ವಿಷಯಗಳನ್ನು ಪ್ರಕಟಿಸಿದರು.

ನೀರಿನ ಸಮಸ್ಯೆ ನೀಗಿಸಲು 131 ಕೋಟಿ ರೂ.ಮೀಸಲು: ಬೆಂಗಳೂರಿನಲ್ಲಿ ಉಂಟಾಗಿರುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುತ್ತೇವೆ. ಇದಕ್ಕಾಗಿ 131 ಕೋಟಿ ಹಣ ಮೀಸಲಿಡಲಾಗಿದೆ, ಆರ್ ಆರ್ ನಗರ, ಮಹದೇವಪುರದಲ್ಲಿ ಹೆಚ್ಚಿನ ಸಮಸ್ಯೆಯಾಗಿವೆ. ಆರ್ ಆರ್ ನಗರದ 25 ಕಡೆ ನೀರಿನ ಸಮಸ್ಯೆಯಾಗಿದೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಖಾಸಗಿ ನೀರಿನ ಟ್ಯಾಂಕರ್​ಗಳನ್ನು ನಾವೇ ತೆಗೆದುಕೊಂಡು ದರ ನಿಗದಿ ಮಾಡುತ್ತೇವೆ. ಆ ದರವನ್ನು ಖಾಸಗಿ ಟ್ಯಾಂಕರ್​​ ಮಾಲೀಕರಿಗೆ ನೀಡುತ್ತೇವೆ ಎಂದು ತುಷಾರ್ ಗಿರಿನಾಥ್ ತಿಳಿಸಿದರು.

ಬೆಂಗಳೂರಿನಲ್ಲಿ ನೀರಿನ ಲಭ್ಯತೆ ಪರಿಸ್ಥಿತಿ ಈಗ ಹೇಗಿದೆ?: 1,477 ದಶಲಕ್ಷ ಲೀಟರ್ ನೀರು ಈಗ ಲಭ್ಯತೆಯಿದೆ. ಮಾರ್ಚ್ ಏಪ್ರಿಲ್ ಮೇ ತಿಂಗಳಲ್ಲಿ ನೀರನ್ನ ಒದಗಿಸಲು ಕ್ರಮ ತೆಗೆದುಕೊಳ್ಳಲಾಗುತ್ತದೆ. 1,450 ಎಂಎಲ್ ಡಿ ನೀರಿನ ಸಾಮರ್ಥ್ಯವಿದೆ. 110 ಹಳ್ಳಿಗಳಿಗೆ ಏಪ್ರಿಲ್ ಕಡೆಯಲ್ಲಿ ಕಾವೇರಿ ನೀರು ನೀಡಲಾಗುತ್ತದೆ. ಬಿಬಿಎಂಪಿ ಕಡೆಯಿಂದ ಹಣ ವರ್ಗಾವಣೆಯಾಗಲಿದೆ. ಒಟ್ಟು 58 ಕಡೆಗಳಲ್ಲಿ ಸಾಕಷ್ಟು ಸಮಸ್ಯೆ ಕಂಡು ಬಂದಿದೆ. ಆಡಳಿತಾಧಿಕಾರಿ ನೇತೃತ್ವದಲ್ಲಿ ಬೇಸಿಗೆಯಲ್ಲಿ ನೀರಿನ ಪರಿಸ್ಥಿತಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಎಸಿಎಸ್ ಹಲವು ನಿರ್ದೇಶನಗಳನ್ನು ನೀಡಿದ್ದಾರೆ. ಬಿಬಿಎಂಪಿ ಹಾಗೂ ಜಲಮಂಡಳಿ ಕಡೆಯಿಂದ ಹಲವು ಕಾರ್ಯವನ್ನು ಕೈಗೊಂಡಿದ್ದೇವೆ ಎಂದು ಹೇಳಿದರು.

ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್​ವೆಲ್

ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮಕೈಗೊಳ್ಳಲಾಗುತ್ತದೆ. BBMP, BWSSB, BDA ಸಮನ್ವಯದಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. 1,472 ಎಂಎಲ್ ಡಿ ನೀರು ಸರಬರಾಜು ಮಾಡಬಹುದು. ಕಾವೇರಿ 5ನೇ ಹಂತ ಕಾಮಗಾರಿ ಮುಗಿದು ಏಪ್ರಿಲ್ ನಿಂದ ನೀರು ಪೂರೈಕೆ ಮಾಡಬಹುದು. ನಾವು ಹಾಗೂ BWSSBಯವರು ಈಗ ಬೋರ್​ವೆಲ್ ಕೊರೆಸುತ್ತೇವೆ. ನಾವು ಪ್ರತಿ ಕ್ಷೇತ್ರಕ್ಕೆ 10 ಕೋಟಿ ಹಣ BWSSBಗೆ ಕೊಡುತ್ತೇವೆ. ಡಿಸಿಎಂ ಗ್ರಾಂಟ್ ನಲ್ಲಿ ಮಾಡಿಸುತ್ತೇವೆ. 110 ಹಳ್ಳಿಗಳಿಗೆ 40 ಸಾವಿರ ಸಂಪರ್ಕ ಕೊಟ್ಟಿದ್ದೇವೆ. ಕಾವೇರಿ 5ನೇ ಹಂತ ಬರುವರೆಗೂ ವಲಯ ಆಯುಕ್ತರು ಹಾಗೂ bwssb ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ ಎಂದರು.

110 ಹಳ್ಳಿಗಳ ನೀರಿನ ನಿರ್ವಹಣೆ ಬಿಬಿಎಂಪಿ ಮಾಡುತ್ತದೆ. ಸಿಟಿ ಲಿಮಿಟ್ಸ್ ನಲ್ಲಿ BWSSB ನಿರ್ವಹಣೆ ಮಾಡುತ್ತದೆ. ಖಾಸಗಿ ಟಾಂಕರ್ ಗಳನ್ನು ಕೂಡ ನಾವು ದುಡ್ಡು ಕೊಟ್ಟು ಕೆಲ ದಿನ ಖರೀದಿ ಮಾಡುತ್ತೇವೆ. ಖಾಸಗಿ ಟ್ಯಾಂಕರ್ ದರ ಕಡಿಮೆ ಮಾಡಲು ನಾವು ಅವರಿಂದ ಖರೀದಿ ಮಾಡುತ್ತೇವೆ. 200 ಟ್ಯಾಂಕರ್ ನಾವು ತೆಗೆದುಕೊಂಡಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT