ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ)
ವಿಧಾನಮಂಡಲ ಅಧಿವೇಶನ (ಸಂಗ್ರಹ ಚಿತ್ರ) 
ರಾಜ್ಯ

ವಿಧಾನಮಂಡಲ ಅಧಿವೇಶನ ಅನಿರ್ದಿಷ್ಟಾವಧಿಗೆ ಮುಂದೂಡಿಕೆ

Lingaraj Badiger

ಬೆಂಗಳೂರು: ಫೆಬ್ರವರಿ 12 ರಿಂದ ಆರಂಭವಾಗಿದ್ದ ಬಜೆಟ್ ಅಧಿವೇಶನಕ್ಕೆ ಗುರುವಾರ ತೆರೆ ಬಿದ್ದಿದೆ. ವಿಧಾನ ಮಂಡಲದ ಉಭಯ ಸದನಗಳ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉಭಯ ಸದನಗಳಲ್ಲಿ ಉತ್ತರ ನೀಡಿದರು. ಧನ ವಿನಿಯೋಗ ಮಸೂದೆಗಳಿಗೆ ಒಪ್ಪಿಗೆ ಪಡೆದ ಬಳಿಕ ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಒಟ್ಟು 13 ದಿನಗಳ ಕಾಲ ನಡೆದ ಅಧಿವೇಶನದಲ್ಲಿ ಸುಮಾರು 60 ಗಂಟೆ 10 ನಿಮಿಷಗಳ ಕಾಲ ಕಲಾಪ ನಡೆಸಲಾಗಿದೆ.

ಫೆ.12ರಂದು ರಾಜ್ಯಪಾಲರು ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ಭಾಷಣ ಮಾಡಿದ್ದು, ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ 12 ಸದಸ್ಯರು ಒಟ್ಟು 10 ಗಂಟೆ 17 ನಿಮಿಷಗಳ ಕಾಲ ಭಾಗವಹಿಸಿ ಚರ್ಚಿಸಿದ್ದಾರೆ. ವಂದನಾ ನಿರ್ಣಯದ ಪ್ರಸ್ತಾವವನ್ನು ಫೆ.20ರಂದು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಅವರು ಪ್ರಕಟಿಸಿದರು.

ಒಟ್ಟು 43 ಅಧಿಸೂಚನೆಗಳು ಮತ್ತು 162 ವಾರ್ಷಿಕ ವರದಿಗಳು, 163 ಲೆಕ್ಕ ಪರಿಶೋಧನಾ ವರದಿಗಳು, 4 ಅನುಪಾಲನ ವರದಿಗಳು, 6 ಅನುಸರಣಾ ವರದಿ

SCROLL FOR NEXT