ವಿಧಾನಸಭೆ 
ರಾಜ್ಯ

ಪರಿಷತ್ತಿನಲ್ಲಿ ಸೋಲಾಗಿದ್ದ ಹಿಂದೂ ಧಾರ್ಮಿಕ ದತ್ತಿ ಮಸೂದೆಗೆ ವಿಧಾನಸಭೆಯಲ್ಲಿ ಮತ್ತೆ ಅಂಗೀಕಾರ!

ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿ(ಎಸ್) ಮೈತ್ರಿಯಿಂದ ಪರಾಭವಗೊಂಡಿದ್ದ 10 ಲಕ್ಷ ರೂ.ಗೂ ಅಧಿಕ ವಾರ್ಷಿಕ ಆದಾಯವಿರುವ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸುವ ಮಸೂದೆಯನ್ನು ಮರುಪರಿಶೀಲನೆಗೆ ಗುರುವಾರ ಮತ್ತೊಮ್ಮೆ ಕೈಗೆತ್ತಿಕೊಂಡು ವಿಧಾನಸಭೆ ಅಂಗೀಕರಿಸಿದೆ.

ಬೆಂಗಳೂರು: ಕಳೆದ ವಾರ ವಿಧಾನ ಪರಿಷತ್ತಿನಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿ(ಎಸ್) ಮೈತ್ರಿಯಿಂದ ಪರಾಭವಗೊಂಡಿದ್ದ 10 ಲಕ್ಷ ರೂ.ಗೂ ಅಧಿಕ ವಾರ್ಷಿಕ ಆದಾಯವಿರುವ ದೇವಸ್ಥಾನಗಳಿಂದ ನಿಧಿ ಸಂಗ್ರಹಿಸುವ ಮಸೂದೆಯನ್ನು ಮರುಪರಿಶೀಲನೆಗೆ ಗುರುವಾರ ಮತ್ತೊಮ್ಮೆ ಕೈಗೆತ್ತಿಕೊಂಡು ವಿಧಾನಸಭೆ ಅಂಗೀಕರಿಸಿದೆ. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ದತ್ತಿಗಳ (ತಿದ್ದುಪಡಿ) ಮಸೂದೆ, 2024ನ್ನು ಈಗ ನೇರವಾಗಿ ರಾಜ್ಯಪಾಲರ ಒಪ್ಪಿಗೆಗಾಗಿ ಕಳುಹಿಸಲಾಗುವುದು ನಂತರ ಅದು ಕಾನೂನಾಗಿ ಪರಿಣಮಿಸುತ್ತದೆ.

ಫೆಬ್ರವರಿ 21 ರಂದು ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ ನಂತರ ಫೆಬ್ರವರಿ 23 ರಂದು ಪ್ರತಿಪಕ್ಷಗಳು ಬಹುಮತ ಹೊಂದಿರುವ ಮೇಲ್ಮನೆಯಲ್ಲಿ ಧ್ವನಿ ಮತದಿಂದ ಮಸೂದೆಗೆ ಸೋಲಾಗಿತ್ತು.

ಗುರುವಾರ ವಿಧಾನಸಭೆಯಲ್ಲಿ ವಿಧೇಯಕವನ್ನು ಪ್ರಾಯೋಗಿಕವಾಗಿ ಮಂಡಿಸಿ ಮಾತನಾಡಿದ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ, ಈ ಮಸೂದೆಯನ್ನು ವಿಧಾನಸಭೆಯಲ್ಲಿ ಈ ಹಿಂದೆಯೇ ಅಂಗೀಕರಿಸಲಾಗಿತ್ತು, ಆದರೆ ಮೇಲ್ಮನೆಯಲ್ಲಿ ಸೋಲಾಗಿತ್ತು. ಮತ್ತೊಮ್ಮೆ ಮಸೂದೆಯನ್ನು ಅಂಗೀಕರಿಸುವಂತೆ ವಿಧಾನಸಭೆಯಲ್ಲಿ ವಿನಂತಿಸುವುದಾಗಿ ಹೇಳಿದರು.

ನಂತರ ಸ್ಪೀಕರ್ ಯು ಟಿ ಖಾದರ್ ಮಸೂದೆಯನ್ನು ಮತಕ್ಕೆ ಹಾಕಿದರು ಮತ್ತು ಅದನ್ನು ಧ್ವನಿ ಮತದಿಂದ ಅಂಗೀಕರಿಸಲಾಯಿತು.'ಕರ್ನಾಟಕ ಸರ್ಕಾರದ ಗೆಜೆಟರ್ ಪ್ರಕಾರ ಮುಜರಾಯಿ' ಎಂಬುದು ಧಾರ್ಮಿಕ, ದತ್ತಿ ಉದ್ದೇಶಗಳಿಗಾಗಿ ಮತ್ತು ಧಾರ್ಮಿಕ, ದತ್ತಿ ಸಂಸ್ಥೆಗಳ ನಿರ್ವಹಣೆಗಾಗಿ ಸರ್ಕಾರದಿಂದ ಮಾಡಿದ ಅನುದಾನವನ್ನು ಸೂಚಿಸುತ್ತದೆ. ಧಾರ್ಮಿಕ ಮತ್ತು ದತ್ತಿ ಇಲಾಖೆಯು ಮುಜರಾಯಿ ಇಲಾಖೆ ಎಂದು ಜನಪ್ರಿಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಸ್ಪಾದಲ್ಲಿ ಅಕ್ರಮ ಚಟುವಟಿಕೆ' ಎಂದು ಆರೋಪಿಸಿ ದಾಂಧಲೆ; 5 ಲಕ್ಷ ರೂ ಗೆ ಬೇಡಿಕೆ, 1 ಲಕ್ಷ ವಸೂಲಿ! ಶಾಕಿಂಗ್ ಘಟನೆ

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!