ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಿರಿಧಾನ್ಯ ಮತ್ತು ಸಾವಯವ ಅಂತರರಾಷ್ಟ್ರೀಯ ವ್ಯಾಪಾರ ಮೇಳ 2024 ಅನ್ನು ಉದ್ಘಾಟಿಸಿದರು. 
ರಾಜ್ಯ

ಬಸವನಗುಡಿಯಲ್ಲಿ ಅವರೆಬೇಳೆ ಮೇಳ ಆರಂಭ: ಜನರ ಮನಸೆಳೆದ ವಿವಿಧ ಖಾದ್ಯಗಳು

ಶ್ರೀ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ವಾರ್ಷಿಕ ಅವರೆಬೇಳೆ ಮೇಳ ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದ್ದು, ವಿವಿಧ ಖಾದ್ಯಗಳು ಜನ ಮನಸೆಳೆದವು.

ಬೆಂಗಳೂರು: ಶ್ರೀ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ವಾರ್ಷಿಕ ಅವರೆಬೇಳೆ ಮೇಳ ಶುಕ್ರವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿದ್ದು, ವಿವಿಧ ಖಾದ್ಯಗಳು ಜನ ಮನಸೆಳೆದವು.

24ನೇ ಆವೃತಿಯ ಅವರೆಬೇಳೆ ಮೇಳ ಇದಾಗಿದ್ದು, ಮೇಳದಲ್ಲಿ ವಿವಿಧ ಖಾದ್ಯಗಳನ್ನು ಸವಿಯುವ ಅವಕಾಶ ನಾಗರಿಕರಿಗೆ ಲಭಿಸುತ್ತಿದೆ. ಅವರೆ ದೋಸೆ, ಪಾಯಸ, ಮಂಚೂರಿಯನ್, ವಡೆ, ಕೋಡುಬಳೆ, ಐಸ್‌ಕ್ರೀಂ, ಹಲ್ವಾ ಸೇರಿದಂತೆ ನೂರಕ್ಕೂ ಹೆಚ್ಚು ತಿನಿಸುಗಳು ಈ ಮೇಳದಲ್ಲಿ ಲಭ್ಯವಿದೆ.

ಈ ವರ್ಷ ಸುಮಾರು 80 ಸ್ಟಾಲ್‌ಗಳಿವೆ. ದೋಸೆಯಂತಹ ಹೆಚ್ಚು ಬೇಡಿಕೆಯಿರುವ ತಿನಿಸುಗಳಿಗೆ ಸುಮಾರು ಐದು ಕೌಂಟರ್‌ಗಳನ್ನು ಇರಿಸಲಾಗಿದೆ. ಹಿರಿಯ ನಾಗರೀಕರಿಗೆ ವಿಶೇಷ ಕೌಂಟರ್ ಜತೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗಿದೆ.

ಮೇಳದಲ್ಲಿ ಕೇವಲ ತಿಂಡಿ ತಿನಿಸು ಅಷ್ಟೇ ಅಲ್ಲದೆ, ಬಟ್ಟೆ, ಸೌಂದರ್ಯವರ್ಧಕಗಳ ಮಳಿಗೆಗಳು, ಮಕ್ಕಳಿಗೆ ಆಟದ ವಲಯಗಳನ್ನೂ ಸ್ಥಾಪಿಸಲಾಗಿದೆ.

ವಾಸವಿ ಕಾಂಡಿಮೆಂಟ್ಸ್‌ನ ಕೆ.ಎಸ್.ಸ್ವಾತಿ ಮಾತನಾಡಿ, ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸ್ಯಾನಿಟೈಸರ್ ವ್ಯವಸ್ಥೆಗಳನ್ನು ಮಾಡಲಾಗಿದೆ. ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಪ್ರತ್ಯೇಕ ಆಸನ ವ್ಯವಸ್ಥೆಗಳಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT