ಸಾಂದರ್ಭಿಕ ಚಿತ್ರ 
ರಾಜ್ಯ

ಕೋವಿಡ್-19 ಭೀತಿ: ಶೀತ ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬೇಡಿ, ಇದು ಈಗ ಸಾಮಾನ್ಯವಲ್ಲ: ವೈದ್ಯರ ಎಚ್ಚರಿಕೆ

ಕೋವಿಡ್-19 ಹೆಚ್ಚಳ ಭೀತಿ ನಡುವೆಯೇ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬೇಡಿ.. ಅವುಗಳು ಈಗ ಸಾಮಾನ್ಯ ರೋಗ ಲಕ್ಷಣಗಳಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಕೋವಿಡ್-19 ಹೆಚ್ಚಳ ಭೀತಿ ನಡುವೆಯೇ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬೇಡಿ.. ಅವುಗಳು ಈಗ ಸಾಮಾನ್ಯ ರೋಗ ಲಕ್ಷಣಗಳಲ್ಲ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ವೈದ್ಯರು ಮತ್ತು ಅಧಿಕಾರಿಗಳು ನಾಗರಿಕರಿಗೆ ಎಚ್ಚರಿಕೆ ನೀಡಿದ್ದು, ಇನ್ನು ಮುಂದೆ ಶೀತ ಮತ್ತು ಕೆಮ್ಮನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಎಚ್ಚರಿಸಿದ್ದಾರೆ. ರೋಗಿಗಳ ಬಗ್ಗೆ ಸಂವೇದನಾಶೀಲರಾಗಿರಲು ಮತ್ತು ಅವರ ಕಳವಳಗಳನ್ನು ಅರ್ಥಮಾಡಿಕೊಳ್ಳಲು ವೈದ್ಯರಿಗೆ ಭಾರತೀಯ ವೈದ್ಯಕೀಯ ಸಂಘ (IMA) ಕೇಳುತ್ತಿದೆ. ವೈರಾಲಜಿಸ್ಟ್‌ಗಳು ಮತ್ತು ಶ್ವಾಸಕೋಶಶಾಸ್ತ್ರಜ್ಞರು ಶೀತ ಮತ್ತು ಕೆಮ್ಮಿನಿಂದ ಬಳಲುತ್ತಿರುವ ಜನರ ಪ್ರಕರಣಗಳಲ್ಲಿ ಹೆಚ್ಚಳವನ್ನು ವರದಿ ಮಾಡುತ್ತಿರುವ ಸಮಯದಲ್ಲೇ ಐಎಂಎ ಎಚ್ಚರಿಕೆ ಕುತೂಹಲ ಕೆರಳಿಸಿದೆ.

ವೈರಾಲಜಿಸ್ಟ್‌ಗಳು ವೈರಸ್‌ಗಳ ರೂಪಾಂತರಗಳ ಹೆಚ್ಚಳ ಕುರಿತು ಮಾಹಿತಿ ನೀಡುತ್ತಿದ್ದು, ಸರ್ಕಾರ ಮತ್ತು ಅಧಿಕಾರಿಗಳು ಕೇವಲ ಕೋವಿಡ್‌ನ ಬಗ್ಗೆ ಕಾಳಜಿ ವಹಿಸುತ್ತಾರೆ, ಆದರೆ ವಾಸ್ತವದಲ್ಲಿ ವೈರಸ್‌ಗಳಲ್ಲಿ ಹಲವು ರೂಪಾಂತರಗಳಿವೆ. ಅಲ್ಲಿ ಕಾಳಜಿ ಹೆಚ್ಚುತ್ತಿದೆ. ವೈರಲ್ ಔಷಧಿಗಳಲ್ಲಿ ಸ್ವಲ್ಪ ಆಯ್ಕೆಗಳಿವೆ. ಹೀಗಾಗಿ ಸ್ಟೀರಾಯ್ಡ್‌ಗಳು ಮತ್ತು ಆ್ಯಂಟಿಬಯೋಟಿಕ್‌ಗಳ ಬಳಕೆ ಹೆಚ್ಚಾಗುತ್ತಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.

ಈ ಕುರಿತು ಐಎಂಎ ರಾಷ್ಟ್ರೀಯ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ಅವರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ ನೊಂದಿಗೆ ಮಾತನಾಡಿದ್ದು, ಈಗ ಸಾಮಾನ್ಯ ನೆಗಡಿ ಮತ್ತು ಕೆಮ್ಮು ಎಂಬುದು ಇಲ್ಲ. ಹೀಗಾಗಿ ಔಷಧಗಳು, ಸ್ಟೀರಾಯ್ಡ್‌ಗಳು ಮತ್ತು ಆ್ಯಂಟಿಬಯೋಟಿಕ್‌ಗಳ ವಿವೇಚನಾಯುಕ್ತ ಬಳಕೆಯ ಬಗ್ಗೆ ವೈದ್ಯರಿಗೆ ಅರಿವು ಮೂಡಿಸಲಾಗುತ್ತಿದೆ. ನಮಗೆ ಈಗ ಸಾಮಾನ್ಯ ಶೀತವಿಲ್ಲ. ಮೂರು ದಿನ ಇರುತ್ತೆ, ಹೋಗುತ್ತೆ’ ಎನ್ನುವ ಹಳೇ ವಿಧಾನವನ್ನು ಈಗ ಅನುಸರಿಸಬೇಡಿ. ನೆಗಡಿ, ಕೆಮ್ಮು ಇದ್ದರೆ ಮೊದಲ ದಿನವೇ ವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ ಎಂದು ಹೇಳಿದರು.

ಅಂತೆಯೇ ದೈಹಿಕವಾಗಿ ಒಬ್ಬ ವ್ಯಕ್ತಿಯು ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವಂತೆ ತೋರುವಂತೆ ಕಾಣುತ್ತದೆಯಾದರೂ ಕೆಲ ಸಂದರ್ಭಗಳಲ್ಲಿ ಸಂಪೂರ್ಣ ಪರೀಕ್ಷೆಯ ನಂತರ ಅವರು ವೈರಲ್ ನ್ಯುಮೋನಿಯಾದಿಂದ ಬಳಲುತ್ತಿದ್ದಾ ಎಂದು ತಿಳಿಯುತ್ತದೆ. ಹೀಗಾದಾಗ ಶ್ವಾಸಕೋಶಗಳು ತೀವ್ರವಾಗಿ ಹಾನಿಗೊಳಗಾಗುತ್ತವೆ ಎಂದು ತಿಳಿಸಿದರು.

ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶ ರೋಗಗಳ ನಿರ್ದೇಶಕ ಡಾ.ವಿವೇಕ್ ಆನಂದ್ ಪಡೆಗಲ್ ಮಾತನಾಡಿ, ನೆಗಡಿ ಮತ್ತು ಕೆಮ್ಮಿನಿಂದ ಬರುವ ರೋಗಿಗಳ ಒಪಿಡಿಯಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಮೊದಲ 36 ಗಂಟೆಗಳಲ್ಲಿ ಸರಿಯಾದ ಚಿಕಿತ್ಸೆಯನ್ನು ನೀಡಿದರೆ, ನಂತರ ಚೇತರಿಕೆಯ ಸಾಧ್ಯತೆಗಳು ವೇಗವಾಗಿ ಮತ್ತು ಉತ್ತಮವಾಗಿರುತ್ತವೆ ಎಂದು ಅಧ್ಯಯನಗಳು ತೋರಿಸಿವೆ ಎಂದರು.

ಎಲ್ಲಾ ರೀತಿಯ ವೈರಸ್‌ಗಳು ಹೆಚ್ಚಾಗುತ್ತಿವೆ ಎಂದು ಹೆಸರು ಹೇಳಲು ಇಚ್ಛಿಸದ ಟಿಎಸಿ ಸದಸ್ಯರೊಬ್ಬರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT