ಸುಚನಾ ಸೇಠ್ 
ರಾಜ್ಯ

ನಾಲ್ಕು ವರ್ಷದ ಮಗು ಹತ್ಯೆ ಪ್ರಕರಣ: ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಚಾಕು ವಶಕ್ಕೆ!

ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಚಾಕು ಹಾಗೂ ಬ್ಯಾಗ್ ನಲ್ಲಿದ್ದ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು/ಪಣಜಿ: ತನ್ನ ನಾಲ್ಕು ವರ್ಷದ ಮಗುವನ್ನು ಹತ್ಯೆ ಮಾಡಿದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪ್ರಕರಣ ತನಿಖೆ ಕೈಗೊಂಡಿರುವ ಪೊಲೀಸರು ಸುಚನಾ ಸೇಠ್ ತಂಗಿದ್ದ ಹೋಟೆಲ್ ನಲ್ಲಿ ಚಾಕು ಹಾಗೂ ಬ್ಯಾಗ್ ನಲ್ಲಿದ್ದ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.

ಪ್ರಕರಣ ಸಂಬಂಧ ಸುಚನಾ ಸೇಠ್ ಮಾನಸಿಕ ಸ್ಥಿತಿಯ ಕುರಿತು ಹಲವು ಪ್ರಶ್ನೆಗಳು ಮೂಡತೊಡಗಿದ್ದು, ಈ ಬಗ್ಗೆ ಪರೀಕ್ಷೆ ನಡೆಸಿರುವ ಮನೋವೈದ್ಯರು ಯಾವುದೇ ಮಾಹಿತಿಗಳನ್ನೂ ಬಹಿರಂಗಪಡಿಸಿಲ್ಲ.

ಗುರುವಾರ ಗೋವಾ ಪೊಲೀಸರು ಸುಚನಾಳನ್ನು ಗೋವಾದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಪರೀಕ್ಷೆಗಾಗಿ ಕರೆದೊಯ್ದಿದ್ದು, ವೈದ್ಯರು ಪರೀಕ್ಷೆ ನಡೆಸಿದ್ದಾರೆ.

ಈ ನಡುವೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಆರೋಪಿ ನೆಲೆಸಿದ್ದ ಹೋಟೆಲ್ ರೂಮ್ ನಲ್ಲಿ (ಅಪರಾಧ ನಡೆದ ಸ್ಥಳ) ಚಾಕು ಹಾಗೂ ಬ್ಯಾಗ್ ನಲ್ಲಿ ಪತ್ರವೊಂದನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ತನಿಖೆ ವೇಳೆ ಸುಚನಾ ಮಲಗಿದ್ದಾಗ ಮಗು ಸಾವನ್ನಪ್ಪಿದೆ ಎಂದು ಹೇಳಿಕೊಂಡಿದ್ದು, ಒಂದು ವೇಳೆ ಮಗು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದರೆ, ಹೋಟೆಲ್ ಸಿಬ್ಬಂದಿ ಅಥವಾ ವೈದ್ಯರ ಸಹಾಯವನ್ನೇಕೆ ಕೇಳಲಿಲ್ಲ? ಮಗುವಿನ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಇರಿಸಿ, ಮಗು ಇದೆ ಎಂದು ಏಕೆ ಬಿಂಬಿಸಲಾಗಿತ್ತು ಎಂದು ಪೊಲೀಸರು ವಿಚಾರಣೆ ವೇಳೆ ಪ್ರಶ್ನಿಸಿದ್ದಾರೆಂದು ತಿಳಿದುಬಂದಿದೆ.

ಇನ್ನು ಬ್ಯಾಗ್ ನಲ್ಲಿ ಪತ್ತೆಯಾದ ಪತ್ರದಲ್ಲಿ ತನ್ನ ಅತ್ತೆ-ಮಾವಂದಿರು ತನಗೆ ನೀಡಿದ ಕಿರುಕುಳದ ಬಗ್ಗೆ ಬರೆದಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಮಗುವಿನ ಮೃತದೇಹವನ್ನು ಸೂಟ್ ಕೇಸ್ ನಲ್ಲಿ ಇರಿಸಿಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಸುಚನಾ ಸಂಚಾರ ದಟ್ಟಣೆಯಿಂದಾಗಿ ಕ್ಯಾಬ್ ನಲ್ಲಿ 4 ಗಂಟೆಗಳ ಕಾಲ ಸಿಲುಕಿಕೊಂಡಿದ್ದಳು ಎಂಬ ವಿಚಾರ ಇದೀಗ ತಿಳಿದುಬಂದಿದೆ. ಒಂದು ವೇಳೆ ಕ್ಯಾಬ್ ನಲ್ಲಿ ಸಿಲುಕಿಕೊಳ್ಳದೇ ಹೋಗಿದ್ದರೆ, ಆಕೆ ಬೆಂಗಳೂರು ತಲುಪಿ ಬಿಡುತ್ತಿದ್ದಳು ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಈ ಮಧ್ಯೆ, ಹೇಳಿಕೆ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು, ಗೋವಾ ಪೊಲೀಸರು ಕೊಲೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಹಾಡಲಿದ್ದಾರೆಂದು ಎಂದು ಹೇಳಿದ್ದಾರೆ.

ಪ್ರಕರಣವನ್ನು ಭೇದಿಸುವ ಮೂಲಕ ಗೋವಾ ಪೊಲೀಸರು ಇಲ್ಲಿಯವರೆಗೆ ಉತ್ತಮ ಕೆಲಸ ಮಾಡಿದ್ದಾರೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಡಿಸೆಂಬರ್‌ನಲ್ಲಿ ತಮ್ಮ ಮಗನನ್ನು ಭೇಟಿಯಾಗಲು ಸುಚನಾ ತನ್ನ ಪತಿ ವೆಂಕಟ್ ರಾಮನ್ ಅವರಿಗೆ ಅವಕಾಶ ನೀಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಡಿಸೆಂಬರ್ 7 ರಂದು ಗೋವಾದಲ್ಲಿದ್ದ ಸುಚನಾ ತನ್ನ ಗಂಡನ ವೀಡಿಯೊ ಕರೆಗೆ ಉತ್ತರಿಸಿದ್ದಳು. ಇದು ಮಗನೊಂದಿಗಿನ ರಾಮನ್ ಅವರು ಮಾತನಾಡಿದ್ದ ಕೊನೆಯ ಸಂಭಾಷಣೆಯಾಗಿತ್ತು ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT