ವಿನಾಯಕ ಗೌಡ ಕೆಕ್ಕಾರ 
ರಾಜ್ಯ

ಅಯೋಧ್ಯೆ ರಾಮಮಂದಿರಕ್ಕೆ ಮತ್ತೊಬ್ಬ ಕನ್ನಡಿಗನ ಅಳಿಲು ಸೇವೆ: ಕೆಕ್ಕಾರ ಹುಡುಗ ಕೆತ್ತಿದ ಗಣೇಶನ ಶಿಲ್ಪಕ್ಕೆ ದೇವಾಲಯದಲ್ಲಿ ಸ್ಥಾನ!

ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಕೆತ್ತಿದ ಮತ್ತೊಂದು ಮೂರ್ತಿಯೂ ನೆಲೆಯಾಗುತ್ತಿದೆ.

ಹೊನ್ನಾವರ (ಉತ್ತರ ಕನ್ನಡ): ಮೈಸೂರು ಮೂಲದ ಅರುಣ್‌ ಯೋಗಿರಾಜ್‌ ಅವರು ಕೆತ್ತಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮ ಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಟಾಪನೆಯಾಗಿದ್ದು, ಇದರ ಬೆನ್ನಲ್ಲೇ ಮತ್ತೊಬ್ಬ ಕನ್ನಡಿಗ ಕೆತ್ತಿದ ಮತ್ತೊಂದು ಮೂರ್ತಿಯೂ ನೆಲೆಯಾಗುತ್ತಿದೆ.

ಉತ್ತರ ಕನ್ನಡದ ಹೊನ್ನಾವರ ಮೂಲದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಅವರು ಕೆತ್ತಿರುವ ಗಣಪತಿ ಪ್ರತಿಮೆ ಜನವರಿ 22ರಂದು ಪ್ರಾಣ ಪ್ರತಿಷ್ಠಾನದ ಸಂದರ್ಭದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಸ್ಥಾಪನೆಗೊಳ್ಳಲಿದೆ.

ಮಂದಿರದ ರಂಗಮಂಟಪವನ್ನು ರಚಿಸುವ ಹೊಣೆಯನ್ನು ಇವರಿದ್ದ ತಂಡಕ್ಕೆ ವಹಿಸಲಾಗಿತ್ತು. ಅದರಲ್ಲಿ ಇವರು ರಚಿಸಿದ ಗಣಪತಿ ಮೂರ್ತಿ ಹಾಗೂ ಕೆತ್ತನೆಗಳು ಸೇರಿರಲಿವೆ ಎಂದು ತಿಳಿದುಬಂದಿದೆ.

ಉತ್ತರ ಕನ್ನಡವು ತನ್ನ ವಿಶಿಷ್ಟ ಗಣಪತಿ ಪ್ರತಿಮೆಗಳಿಗೆ ಹೆಸರುವಾಸಿಯಾಗಿದೆ. ಅವುಗಳಲ್ಲಿ ಹಲವು ಸಾವಿರ ವರ್ಷಗಳ ಹಿಂದಿನ ಇತಿಹಾಸವನ್ನು ಹೊಂದಿವೆ. ಅದರಂತೆ ಹೊನ್ನಾವರದ ಯುವ ಶಿಲ್ಪಿ ವಿನಾಯಕ ಗೌಡ ಕೆಕ್ಕಾರ ಅವರಿಗೆ ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಗಣಪತಿ ವಿಗ್ರಹವನ್ನು ಕೆತ್ತುವ ಜವಾಬ್ದಾರಿಯನ್ನು ನೀಡಲಾಗಿದ್ದು, ಈ ಶಿಲ್ಪ ಶೀಘ್ರದಲ್ಲೇ ಮಂದಿರದಲ್ಲಿ ಪ್ರತಿಷ್ಟಾಪನೆಗೊಳ್ಳಲಿದೆ.

ಸಾಧಾರಣ ಕುಟುಂಬದಲ್ಲಿ ಜನಿಸಿದ ವಿನಾಯಕ ಗೌಡ ಅವರು, ಹೆಚ್ಚು ಶಿಕ್ಷಣ ಪಡೆದಿಲ್ಲ. ಇವರು ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಶಿಲ್ಪಕಲೆಯ ಬಗ್ಗೆ ಉತ್ಸಾಹ ಹೊಂದಿದ್ದ ಇವರು, ಬಿಡುವಿನ ವೇಳೆಯಲ್ಲಿ ಅದನ್ನು ಕಲಿತಿದ್ದರು.

ನಂತರ 18 ತಿಂಗಳ ಕಾಲ ಶಿಲ್ಪಕಲೆಯನ್ನು ಅಧಿಕೃತವಾಗಿ ಕಲಿತರು. ಪ್ರಸಿದ್ಧ ಶಿಲ್ಪಿಗಳಾದ ಸುರೇಶ್ ಗುಡಿಗಾರ್ ಮತ್ತು ಅಶೋಕ್ ಗುಡಿಗಾರ್ ಅವರಲ್ಲಿ ವಿಶೇಷ ತರಬೇತಿ ಪಡೆದರು. ವಿವಿಧ ಮಾಧ್ಯಮಗಳನ್ನು ಬಳಸಿಕೊಂಡು ವಿವಿಧ ಕೃತಿಗಳನ್ನು ರಚಿಸಿದರು.

“ಹುಬ್ಬಳ್ಳಿ ಮೂಲದ ರವೀಂದ್ರ ಆಚಾರ್ ಅವರ ಸಹಾಯದಿಂದ ಅಯೋಧ್ಯೆಯಲ್ಲಿ ಗಣಪತಿ ಪ್ರತಿಮೆಯನ್ನು ಕೆತ್ತಲು ನನಗೆ ಅವಕಾಶ ಸಿಕ್ಕಿತು. ಈ ಗೌರವವನ್ನು ನಾನು ನಿರೀಕ್ಷಿಸಿರಲಿಲ್ಲ. “ನಮಗೆ ರಂಗಮಂಟಪದ ರಚನೆಯನ್ನು ಒಪ್ಪಿಸಲಾಯಿತು. ಅಲ್ಲಿ ನಾವು 68 ಗಣಪತಿಗಳನ್ನು ವಿವಿಧ ವಿನ್ಯಾಸಗಳು ಮತ್ತು ರೂಪಗಳಲ್ಲಿ ಕೆತ್ತಬೇಕಾಗಿತ್ತು.

ಕರ್ನಾಟಕದ ಐವರು ಕಲಾವಿದರು- ನಾನು, ಚಿತ್ರದುರ್ಗದ ಕೀರ್ತಿ ಮತ್ತು ಶಿವಮೊಗ್ಗದ ರಾಜೇಶ್ ನಾಲ್ಕು ಗಣಪತಿಗಳನ್ನು ಕೆತ್ತಿದ್ದೇವೆ. ರಮೇಶ್ ಗದಗ, ನಾಗಮೂರ್ತಿ ಗದಗ, ರವೀಂದ್ರ ಆಚಾರ್ ಅವರ ಬಳಿ ಕೆಲಸ ಮಾಡಿದ್ದೇವೆ. ಅವರು ಚಿತ್ರ ಬಿಡಿಸುತ್ತಿದ್ದರು. ನಾವು ಅವುಗಳನ್ನು ಕೆತ್ತಿದ್ದೇವೆ. ನಾನು ಎರಡು ವಿಗ್ರಹಗಳನ್ನು ಕೆತ್ತಿದ್ದೇನೆ. ರಮೇಶ್ ಮತ್ತು ನಾಗಮೂರ್ತಿ ದೇವಸ್ಥಾನದ ವಿನ್ಯಾಸಗಳನ್ನು ಕೆತ್ತಿದ್ದಾರೆ” ಎಂದು ವಿನಾಯಕ್ ಅವರು ಹೇಳಿದ್ದಾರೆ.

“ಈ ದೇವಾಲಯವು ಎಲ್ಲಾ ಭಾರತೀಯ ಕಲಾ ಪ್ರಕಾರಗಳ ಪರಾಕಾಷ್ಠೆಯಾಗಿದೆ. ದೇವಾಲಯವು ಮೊದಲ ಮಹಡಿಯಲ್ಲಿ ಸುಮಾರು 160 ಕಂಬಗಳಿದ್ದು, ಇದು ಸಿಂಹ ದ್ವಾರ, ರಂಗಮಂಟಪ ಮತ್ತು ಇತರ ದ್ವಾರಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಅಯೋಧ್ಯೆ ರಾಮ ಮಂದಿರ ನಿರ್ಮಾಣ ಪೂರ್ಣ: ರಾಮ-ಸೀತೆ ವಿವಾಹ ಪರ್ವದಂದೇ ದೇಗುಲದ ಶಿಖರದ ಮೇಲೆ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ

"Misfit For Army": ಗುರುದ್ವಾರ ಪ್ರವೇಶಿಸಲು ನಿರಾಕರಣೆ; ಕ್ರಿಶ್ಚಿಯನ್ ಸೇನಾ ಅಧಿಕಾರಿಗೆ ಸುಪ್ರೀಂ ಕೋರ್ಟ್ ತರಾಟೆ!

ಭ್ರಷ್ಟರಿಗೆ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಶಾಕ್: ಏಕ ಕಾಲದಲ್ಲಿ ರಾಜ್ಯದ 10 ಕಡೆ ದಾಳಿ- ಪರಿಶೀಲನೆ

WPL 2026 auction: ಈ ಬಾರಿಯ 'ಮೋಸ್ಟ್ ಡಿಮ್ಯಾಂಡ್' ಆಟಗಾರ್ತಿ ಯಾರು?

SCROLL FOR NEXT