ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರು: ಮಾಜಿ ಸಚಿವ ಎಲ್ ಜಿ ಹಾವನೂರು ಪುತ್ರ ಹಾಗೂ ಕಾನೂನು ಕಾಲೇಜು ಮಾಲೀಕ ಅಶೋಕ್ ಹಾವನೂರು ಆತ್ಮಹತ್ಯೆ!

ಮಾಜಿ ಕಾನೂನು ಸಚಿವ ದಿವಂಗತ ಎಲ್.ಜಿ ಹಾವನೂರು ಅವರ ಪುತ್ರ ಅಶೋಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ನಡೆದಿದೆ.

ಬೆಂಗಳೂರು: ಮಾಜಿ ಕಾನೂನು ಸಚಿವ ದಿವಂಗತ ಎಲ್.ಜಿ ಹಾವನೂರು ಅವರ ಪುತ್ರ ಅಶೋಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ನಡೆದಿದೆ.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ, ತಮ್ಮ ಮನೆಯಲ್ಲೇ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ತುಮಕೂರು-ಬೆಂಗಳೂರು ಮುಖ್ಯರಸ್ತೆಯ ಹಾವನೂರು ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭಾನುವಾರ ಮಧ್ಯಾಹ್ನದವರೆಗೂ ಕೊಠಡಿಯಿಂದ ಹೊರಗೆ ಬಾರದಿದ್ದಾಗ, ಅವರ ಪತ್ನಿ ಮತ್ತು ಮಕ್ಕಳು ಹೋಗಿ ಪರಿಶೀಲಿಸಿದಾಗ ಒಳಗಿನಿಂದ ಬಾಗಿಲು ಹಾಕಿರುವುದು ಕಂಡು ಬಂದಿದೆ. ನಂತರ ಬಾಗಿಲು ಒಡೆದು ನೋಡಿದಾಗ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಪೊಲೀಸರಿಗೆ ಯಾವುದೇ ಡೆತ್ ನೋಟ್ ಸಿಕ್ಕಿಲ್ಲ, ಡಿಜಿಟಲ್ ರೂಪದಲ್ಲಿ ಯಾವುದೇ ನೋಟು ಇದೆಯೇ ಎಂದು ಪರಿಶೀಲಿಸುತ್ತಿದ್ದಾರೆ.

ಈ ಸಂಬಂಧ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕೆಲವು ದಿನಗಳಿಂದ ಒಬ್ಬಂಟಿಯಾಗಿರುತ್ತಿದ್ದ ಅವರು ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೃತರು ಕಳೆದ ಹದಿನೈದು ದಿನಗಳಿಂದ ಮನೆಯಲ್ಲಿದ್ದರು ಮತ್ತು ಹೊರಗೆ ಎಲ್ಲಿಯೂ ಹೋಗುತ್ತಿರಲಿಲ್ಲ. ಅವರು ಖಿನ್ನತೆಯಿಂದ ಬಳಲುತ್ತಿದ್ದ ಕಾರಣ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

ಮಹಾರಾಷ್ಟ್ರ: 3 ತಿಂಗಳು ಬಂದ್ ಆಗಿದ್ದ ಪೆಟ್ರೋಲ್ ಬಂಕ್‌ ಸೀಲ್ ಮಾಡಲು ಹೋದ ಇಂಡಿಯನ್ ಆಯಿಲ್ ಅಧಿಕಾರಿಗೆ 7 ಬಾರಿ ಇರಿತ!

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲಲ್ಲ, ಹೃದಯದಲ್ಲಿದೆ': ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ