ಬೆಂಗಳೂರು: ಮಹಾತ್ಮಾ ಗಾಂಧಿಯವರ 76 ನೇ ಪುಣ್ಯಸ್ಮರಣೆ ಇಂದು ಜನವರಿ 30ರಂದು ಆಗಿರುವುದರಿಂದ ಬೆಂಗಳೂರಿನ ವಿಧಾನ ಸೌಧದ ಗಾಂಧಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಸಿಎಂ ಸಿದ್ದರಾಮಯಯ್ಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗಾಂಧೀಜಿಯವರು ಪಾಲಿಸಿದ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಸಮಾಜದಲ್ಲಿ ಅಸಮಾನತೆ ಮತ್ತು ಅಸ್ವೃಶ್ಯತೆಯನ್ನು ಹೋಗಲಾಡಿಸಲು ಒಟ್ಟಾಗಿ ಹೋರಾಡಿದರೆ ಅದು ಮಹಾತ್ಮನಿಗೆ ಸಲ್ಲಿಸಬಹುದಾದ ಅತ್ಯುತ್ತಮ ಶ್ರದ್ಧಾಂಜಲಿಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಬರೆದುಕೊಟ್ಟ ಮುಚ್ಚಳಿಕೆ ಉಲ್ಲಂಘಿಸಿ ಭಗವಾ ಧ್ವಜ ಹಾರಿಸಿ ಸಮಾಜದಲ್ಲಿ ಶಾಂತಿ ಕದಡಿದ್ದಾರೆ: ಸಿಎಂ ಸಿದ್ದರಾಮಯ್ಯ ಕಿಡಿ
ಗಾಂಧೀಜಿಯವರು ಸಾಯುವಾಗಲೂ ಹೇ ರಾಮ್ ಅನ್ನುತ್ತಾ ಪ್ರಾಣಬಿಟ್ಟರು, ಅವರು ಮತ್ತು ನಾವೆಲ್ಲ ಆರಾಧಿಸುವ ರಾಮನೇ ಬೇರೆ, ಬಿಜೆಪಿಯವರ ರಾಮನೇ ಬೇರೆ. ಸಾಯುವಾಗಲೂ ಹೇ ರಾಮ್ ಅಂದ ಗಾಂಧೀಜಿಯನ್ನು ಕೊಂದವರೂ ರಾಮನ ಜಪ ಮಾಡುತ್ತಿದ್ದಾರೆ, ಅವರು ಶ್ರೀರಾಮನನ್ನು ಕೇವಲ ರಾಜಕೀಯಕ್ಕೆ ಮಾತ್ರ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.