ಸಾಂದರ್ಭಿಕ ಚಿತ್ರ 
ರಾಜ್ಯ

28 ರಾಜ್ಯಗಳಲ್ಲಿ 11 ಖದೀಮರ ಕೈಚಳಕ: ಕರ್ನಾಟಕದಲ್ಲೇ 158 ಕೋಟಿ ವಂಚನೆ; ಸೈಬರ್ ಕಳ್ಳರ 'ಮಹಾಜಾಲ' ಭೇದಿಸಿದ ಪೊಲೀಸರು!

ದೇಶಾದ್ಯಂತ ವರದಿಯಾದ 2,143 ಪ್ರಕರಣಗಳಲ್ಲಿ ಬಂಧಿತರು ಆರೋಪಿಗಳು ಎಂದು ವರದಿಯಾಗಿದೆ,  ಈ 11 ಮಂದಿ ಕರ್ನಾಟಕದಲ್ಲಿ 158.94 ಕೋಟಿ ರೂ. ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಗ್ಯಾಂಗ್  ರಾಜ್ಯದ  265 ಜನರನ್ನು ವಂಚಿಸಿದ್ದು, ಅವರಲ್ಲಿ 135 ಮಂದಿ ಬೆಂಗಳೂರಿನವರಾಗಿದ್ದಾರೆ.

ಬೆಂಗಳೂರು: ಆನ್‌ಲೈನ್ ಉದ್ಯೋಗ ಮತ್ತು ಹೂಡಿಕೆ ವಂಚನೆ ದಂಧೆಯನ್ನು ಭೇದಿಸಿರುವ ಸೈಬರ್ ಕ್ರೈಂ ಪೊಲೀಸರು 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. 

ಹೆಚ್ಚಿನ ಬಡ್ಡಿದರ ನೀಡುವ ಆಸೆ ತೋರಿಸಿ ಹಣವನ್ನು ಹೂಡಿಕೆ ಮಾಡಲು ಜನರಿಗೆ ಆಮಿಷವೊಡ್ಡುತ್ತಿದ್ದ 11 ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.. ದೇಶಾದ್ಯಂತ ವರದಿಯಾದ 2,143 ಪ್ರಕರಣಗಳಲ್ಲಿ ಬಂಧಿತರು ಆರೋಪಿಗಳು ಎಂದು ವರದಿಯಾಗಿದೆ,  ಈ 11 ಮಂದಿ ಕರ್ನಾಟಕದಲ್ಲಿ 158.94 ಕೋಟಿ ರೂ.  ವಂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಈ ಗ್ಯಾಂಗ್ ಕನಿಷ್ಠ 265 ಜನರನ್ನು ವಂಚಿಸಿದ್ದು, ಅವರಲ್ಲಿ 135 ಮಂದಿ ಬೆಂಗಳೂರಿನವರಾಗಿದ್ದಾರೆ.

ಆರೋಪಿಗಳು ಗೃಹಿಣಿಯರು ಮತ್ತು ಇತರರಿಗೆ ಮನೆಯಿಂದ ಕೆಲಸ ನೀಡುವ ಮೂಲಕ ಟಾರ್ಗೆಟ್ ಮಾಡುತ್ತಿದ್ದರು. ಅವರು ಆರಂಭದಲ್ಲಿ ತಾವು ಮಾಡುವ ಸಣ್ಣ ಹೂಡಿಕೆಗಳಿಗೆ ಹೆಚ್ಚಿನ-ಬಡ್ಡಿ ದರಗಳನ್ನು ನೀಡುತ್ತಿದ್ದರು. ಸಂತ್ರಸ್ತರು ಬಲೆಗೆ ಬಿದ್ದು ಹೆಚ್ಚು ಹೂಡಿಕೆ ಮಾಡಲು ಪ್ರಾರಂಭಿಸಿದ ನಂತರ, ಆರೋಪಿಗಳು ಬ್ಯಾಂಕ್‌ಗಳಿಂದ ಹಣವನ್ನು ಪಡೆದು ಪರಾರಿಯಾಗುತ್ತಿದ್ದರು.

ಆರೋಪಿಗಳಲ್ಲಿ ನಾಲ್ವರು ಮಹಾರಾಷ್ಟ್ರದವರು, ಐವರು ತೆಲಂಗಾಣ ಮತ್ತು ಇಬ್ಬರು ಕರ್ನಾಟಕದವರು. ಈ ಆರೋಪಿಗಳು 28 ರಾಜ್ಯಗಳ ಸಂತ್ರಸ್ತರಿಗೆ ವಂಚಿಸಿದ್ದಾರೆ. ಸಂತ್ರಸ್ತರಿಗೆ ವಂಚಿಸಲು ಬಳಸಿದ ಅದೇ 30 ಬ್ಯಾಂಕ್ ಖಾತೆ ಸಂಖ್ಯೆಗಳ ಆಧಾರದ ಮೇಲೆ 2,143 ಪ್ರಕರಣಗಳನ್ನು ದಾಖಲಿಸಲಾಗಿದೆ. ಎಲ್ಲಾ 30 ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಉಳಿದ ಹಣವನ್ನು ಗ್ಯಾಂಗ್ ಹಿಂಪಡೆದಿದ್ದರಿಂದ ಪೊಲೀಸರು ಕೇವಲ 62 ಲಕ್ಷ ರೂ. ಮಾತ್ರ ವಶಕ್ಕೆ ಪಡೆಯಲಾಗಿದೆ.

ಹನ್ನೊಂದು ಮೊಬೈಲ್ ಫೋನ್‌ಗಳು, ಎರಡು ಲ್ಯಾಪ್‌ಟಾಪ್‌ಗಳು, ಸಿಮ್ ಕಾರ್ಡ್‌ಗಳು, ಚೆಕ್ ಬುಕ್‌ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು 11 ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಗ್ಯಾಂಗ್ ಒಂದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿದೆ. ಎನ್‌ಸಿಆರ್‌ಬಿ ಪೋರ್ಟಲ್‌ನಿಂದ 2,143 ಪ್ರಕರಣಗಳ ವಿವರಗಳನ್ನು ಪಡೆಯಲಾಗಿದೆ. ಕರ್ನಾಟಕದಲ್ಲಿ 265 ಮಂದಿಗೆ ವಂಚಿಸಿದ ಗ್ಯಾಂಗ್, ಬೆಂಗಳೂರಿನಲ್ಲಿ 135 ಮಂದಿಗೆ ಪಂಗನಾಮ ಹಾಕಿದ್ದಾರೆ.

ಆರೋಪಿಗಳ ವಿರುದ್ಧ ಬೆಂಗಳೂರಿನ 14 ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳಿವೆ. 11 ಆರೋಪಿಗಳ ಪೈಕಿ ಕೆಲವರು ಖಾತೆದಾರರಾಗಿದ್ದಾರೆ. ವಿದೇಶದಿಂದ ಕಾರ್ಯಾಚರಣೆ ನಡೆಸುತ್ತಿರುವ ಹೆಚ್ಚಿನ ಗ್ಯಾಂಗ್‌ಗಳಿವೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಲ್ಲಾ 11 ಆರೋಪಿಗಳನ್ನು ಬಂಧಿಸಿರುವುದು ಇದೇ ಮೊದಲು. ಗ್ಯಾಂಗ್‌ನ ವಿಧಾನ ಒಂದೇ ಆಗಿರುತಿತ್ತು. ಎಲ್ಲಾ 30 ಖಾತೆ ಸಂಖ್ಯೆಗಳು ಸಹ ಒಂದೇ ಆಗಿರುತ್ತವೆ. ಇದು ಬಹಳ ಸುಸಜ್ಜಿತವಾದ ಸಂಘಟಿತ ಅಪರಾಧ ಸಿಂಡಿಕೇಟ್ ಆಗಿದೆ. ಅವರು ವಿಭಿನ್ನ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹೊಂದಿದ್ದರು ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದರು.

ಇದೇ ಸೈಬರ್ ಕ್ರೈಂ ಪೊಲೀಸರು ಈ ಹಿಂದೆ ಸಾವಿರಾರು ಜನರಿಗೆ 854 ಕೋಟಿ ರೂಪಾಯಿ ವಂಚನೆ ಮಾಡಿದ್ದ ಮತ್ತೊಂದು ದಂಧೆಯನ್ನು ಬೇಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ವಂಚನೆಗೆ ಸಂಬಂಧಿಸಿದಂತೆ ಸುಮಾರು 5,000 ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ 17 ಪ್ರಕರಣಗಳು ದಾಖಲಾಗಿದ್ದು, 60 ಲಕ್ಷ ರೂ. ವಶಕ್ಕೆ ಪಡೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

SCROLL FOR NEXT