ಮಂಗಳೂರು: ಕೆಎಸ್ ಆರ್ ಪಿ ಇನ್ಸ್ಪೆಕ್ಟರ್ ಓರ್ವ ಪೇದೆಯಿಂದ ಲಂಚ ಪಡೆಯುತ್ತಿದ್ದಾಗ ಬಲೆಗೆ ಬಿದ್ದಿದ್ದಾರೆ.
ಮಂಗಳೂರಿನಲ್ಲಿ ಈ ಘಟನೆ ವರದಿಯಾಗಿದ್ದು ಕೆಎಸ್ ಆರ್ ಪಿ ಇನ್ಸ್ಪೆಕ್ಟರ್ 18,000 ರೂಪಾಯಿ ಲಂಚ ಪಡೆಯುತ್ತಿದ್ದರು.
ಆರೋಪಿ ಇನ್ಸ್ಪೆಕ್ಟರ್ ಮೊಹಮ್ಮದ್ ಆರಿಸ್ ಹಾಗೂ ದೂರು ನೀಡಿದ ಪೇದೆ ಅನಿಲ್ ಕುಮಾರ್ ಕೊಣಾಜೆಯಲ್ಲಿರುವ ಕೆಎಸ್ ಆರ್ ಪಿಯ 7 ನೇ ಬ್ಯಟಾಲಿಯನ್ ಗೆ ಸೇರಿದ ಸಿಬ್ಬಂದಿಗಳಾಗಿದ್ದಾರೆ.
ಲೋಕಾಯುಕ್ತ ಎಸ್ ಪಿ ನಟರಾಜ್ ಎಂಎ ಪ್ರಕಾರ, ಆರೋಪಿ ಇನ್ಸ್ಪೆಕ್ಟರ್, ಪೊಲೀಸ್ ಪೇದೆಗೆ ಪೊಲೀಸ್ ಅತಿಥಿ ಗೃಹದಲ್ಲಿ, ಕೆಲಸ ಮಾಡಲು ಮುಂದುವರೆಸುವುದಕ್ಕಾಗಿ, ಒಮ್ಮೆ 20,000 ರೂಪಾಯಿ ಹಾಗೂ ಮಾಸಿಕ 6,000 ರೂಪಾಯಿಗಳ ಲಂಚಕ್ಕೆ ಬೇಡಿಕೆ ಇಟ್ಟಿದ್ದ.
ಪೊಲೀಸ್ ಪೇದೆ ಪ್ರತಿ ತಿಂಗಳು ಇನ್ಸ್ಪೆಕ್ಟರ್ ಗೆ 6,000 ರೂಪಾಯಿ ಲಂಚ ನೀಡುತ್ತಿದ್ದ ಈ ವರೆಗೂ 50,000 ರೂಪಾಯಿ ನೀಡಿದ್ದಾನೆ ಎಂದು ತಿಳಿದುಬಂದಿದೆ.
ಆದರೆ ಪೇದೆಯ ತಂದೆಗೆ ಅನಾರೋಗ್ಯ ಇದ್ದ ಕಾರಣ ಕಳೆದ 3 ತಿಂಗಳಿನಿಂದ ಪೇದೆಗೆ ಲಂಚ ನೀಡಲು ಸಾಧ್ಯವಾಗಿರಲಿಲ್ಲ. ಬಾಕಿ ಉಳಿದಿರುವ 18,000 ರೂಪಾಯಿ ಲಂಚ ನೀಡುವಂತೆ ಮೊಹಮ್ಮದ್ ಆರಿಸ್ ಪ್ರತಿದಿನ ಪೀಡಿಸುತ್ತಿದ್ದ ಮತ್ತು ಪಾವತಿಸಲು ವಿಫಲವಾದರೆ ಕರ್ತವ್ಯವನ್ನು ಬದಲಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದರು. ಈ ವೇಳೆ ಕಾನ್‌ಸ್ಟೆಬಲ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಲೋಕಾಯುಕ್ತ ಡಿವೈಎಸ್ಪಿಗಳಾದ ಗಣ ಪಿ.ಕುಮಾರ್ ಮತ್ತು ಚೆಲುವರಾಜು ಬಿ.ಇನ್ಸ್‌ಪೆಕ್ಟರ್‌ಗಳಾದ ಅಮಾನುಲ್ಲಾ ಎ, ಸುರೇಶ್ ಕುಮಾರ್, ಚಂದ್ರಶೇಖರ್ ಸಿಎಲ್ ನೇತೃತ್ವದ ತಂಡ ಮಹಮ್ಮದ್ ಆರಿಸ್ ಗಾಗಿ ಬಲೆ ಬೀಸಿ ಅನಿಲ್ ಕುಮಾರ್ ಅವರಿಂದ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.