ಸಾಂದರ್ಭಿಕ ಚಿತ್ರ 
ರಾಜ್ಯ

ಇಬ್ಬರನ್ನು ಬಲಿ ಪಡೆದ ಆನೆ ಸೆರೆಗೆ ಕರ್ನಾಟಕ, ತಮಿಳುನಾಡು ಅರಣ್ಯಾಧಿಕಾರಿಗಳ ಹರ ಸಾಹಸ!

ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗಟ್ಟಿಗುಂದದಲ್ಲಿ ಹೊಲದಿಂದ ಹಿಂತಿರುಗುತ್ತಿದ್ದ ರೈತ ಸುರೇಶ್ (45) ಎಂಬುವರನ್ನು ಒಂಟಿ ಆನೆ ತುಳಿದು ಕೊಂದಿದೆ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ 38 ವರ್ಷದ ವ್ಯಕ್ತಿಯೊಬ್ಬರು ಬೆಳಗಿನ ಜಾವ 3 ಗಂಟೆಗೆ ಹೊಲಕ್ಕೆ ಹೋಗುತ್ತಿದ್ದಾಗ ಆನೆ ತುಳಿದು ಕೊಂದು ಹಾಕಿತ್ತು.

ಬೆಂಗಳೂರು: ಕಳೆದ ಐದು ದಿನಗಳಲ್ಲಿ ಇಬ್ಬರನ್ನು ಬಲಿ ಪಡೆದ ಆನೆ ಸೆರೆಗೆ ಕರ್ನಾಟಕ ಮತ್ತು ತಮಿಳುನಾಡು ಅರಣ್ಯಾಧಿಕಾರಿಗಳು ಹರಸಾಹಸಪಡುತ್ತಿದ್ದಾರೆ. ತಮಿಳುನಾಡಿನ ಗಡಿಭಾಗ ಕೋಡಿಹಳ್ಳಿ ವಲಯ ವ್ಯಾಪ್ತಿಯ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಬಳಿ ಇಬ್ಬರು ತುಳಿದು ಕೊಂದಿರುವ ಆನೆ ಪತ್ತೆಗೆ ಕರ್ನಾಟಕ ಅರಣ್ಯ ಅಧಿಕಾರಿಗಳು ಎಲ್ಲಾ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ.

ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಗಟ್ಟಿಗುಂದದಲ್ಲಿ ಹೊಲದಿಂದ ಹಿಂತಿರುಗುತ್ತಿದ್ದ ರೈತ ಸುರೇಶ್ (45) ಎಂಬುವರನ್ನು ಒಂಟಿ ಆನೆ ತುಳಿದು ಕೊಂದಿದೆ ಎಂದು ಹೇಳಲಾಗಿದೆ. ನಾಲ್ಕು ದಿನಗಳ ಹಿಂದೆ 38 ವರ್ಷದ ವ್ಯಕ್ತಿಯೊಬ್ಬರು ಬೆಳಗಿನ ಜಾವ 3 ಗಂಟೆಗೆ ಹೊಲಕ್ಕೆ ಹೋಗುತ್ತಿದ್ದಾಗ ಆನೆ ತುಳಿದು ಕೊಂದು ಹಾಕಿತ್ತು. ಈ ಘಟನೆ ನಡೆದ ಪ್ರದೇಶಗಳ ನಡುವಿನ ಅಂತರವು 6 ಕಿ.ಮೀ. ಆಗಿದ್ದು, ಸಾವಿನಿಂದ ಆಕ್ರೋಶಗೊಂಡ ರೈತರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ ಕಚೇರಿ ಬಳಿ ಪ್ರತಿಭಟನೆ ನಡೆಸಿ, ಬ್ಯಾರಿಕೇಡ್‌ಗಳನ್ನು ಹಾಕಿ ಆನೆ ಸೆರೆ ಹಿಡಿಯುವಂತೆ ಆಗ್ರಹಿಸಿದ್ದರು.

'ಮೊದಲು ಬರಗಾಲದಿಂದ ಮತ್ತು ಈಗ ಮಳೆಯಿಂದಾಗಿ ಆನೆಗಳ ಓಡಾಟ ಹೆಚ್ಚುತ್ತಿದೆ. ಆನೆಗಳ ಸಂಖ್ಯೆ ಹೆಚ್ಚಿದೆ. Hejje app ಬಳಸಿ ಒಂದು ಆನೆಯನ್ನು ಗುರುತಿಸಲಾಗಿದೆ. ಆನೆ ಚಲನೆ ಪತ್ತೆಗೆ ರಾತ್ರಿ ವೇಳೆ ಕಾಣುವ ಡ್ರೋನ್ ಬಳಸಲಾಗುತ್ತಿದೆ. ಸದಸ್ಯ ಅದು ತಮಿಳುನಾಡು ಕಡೆಗೆ ಹೋಗಿದೆ. ಇದರ ಬಗ್ಗೆ ನಮ್ಮ ಸಹೋದ್ಯೋಗಿಗಳಿಗೆ ತಿಳಿಸಲಾಗಿದೆ. ಇಬ್ಬರನ್ನು ಕೊಂದಿದ್ದು ಇದೇ ಪ್ರಾಣಿ ಎಂಬುದು ದೃಢಪಟ್ಟ ಬಳಿಕ ಅದನ್ನು ಸೆರೆ ಹಿಡಿಯುವ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಅರಣ್ಯಾಧಿಕಾರಿ ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಪದೇ ಪದೇ ಎಚ್ಚರಿಕೆ ನೀಡುತ್ತಿದ್ದು, ಆನೆಗಳ ಚಲನವಲನದ ಬಗ್ಗೆ ಮುಂಜಾಗ್ರತೆ ವಹಿಸುವಂತೆ ರಾತ್ರಿ ಅಥವಾ ಮುಂಜಾನೆ ಹೊರಗೆ ಹೋಗಬೇಡಿ ಎಂದು ಸೂಚನೆ ನೀಡಲಾಗಿದೆ. ಮೃತರ ಮರಣೋತ್ತರ ಪರೀಕ್ಷೆಯಲ್ಲಿ ಆನೆ ದಾಳಿಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ. ನಿಯಮಾನುಸಾರ, ಮೃತರ ಕುಟುಂಬ ಸದಸ್ಯರಿಗೆ 15 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಅಧಿಕಾರಿ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

ಆಪರೇಷನ್ ಸಿಂಧೂರ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ? ಕಾಂಗ್ರೆಸ್

ಬೆಂಗಳೂರು: ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ BMTC ಬಸ್ ಕಂಡೆಕ್ಟರ್; ನೆಟ್ಟಿಗರು ಆಕ್ರೋಶ, Video!

SCROLL FOR NEXT