ಸಂಗ್ರಹ ಚಿತ್ರ 
ರಾಜ್ಯ

ಮಳೆ ರಜೆ ಬಗ್ಗೆ ನಕಲಿ ಆದೇಶ ವೈರಲ್: FIRಗೆ ಡಿಸಿ ಆದೇಶ

ಜುಲೈ 18 ರಂದು ರಜೆ ಘೋಷಿಸಲಾಗಿದೆ ಎಂಬ ನಕಲಿ ಪತ್ರವೊಂದು ಬುಧವಾರ ಸಂಜೆ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು: ಮಳೆಯ ಕಾರಣಕ್ಕಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದು ಸಾಮಾಜಿಕ ಜಾಲಾ ತಾಣಗಳಲ್ಲಿ ನಕಲಿ ಆದೇಶ ಪ್ರತಿ ರವಾನಿಸುವವರ ವಿರುದ್ಧ ಎಫ್‌ಐಆರ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗು ವುದು ಎಂದು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಚ್ಚರಿಕೆ ನೀಡಿದ್ದಾರೆ.

ಜುಲೈ 18 ರಂದು ರಜೆ ಘೋಷಿಸಲಾಗಿದೆ ಎಂಬ ನಕಲಿ ಪತ್ರವೊಂದು ಬುಧವಾರ ಸಂಜೆ ವೈರಲ್ ಆದ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಈ ಎಚ್ಚರಿಕೆ ನೀಡಿದ್ದಾರೆ.

ರಜೆಯ ವಿಚಾರವಾಗಿ ಜಿಲ್ಲಾಧಿಕಾರಿಗಳ ಅಧಿಕೃತ ಮೊಬೈಲ್ ನಂಬರ್ ಗೆ ನಿರಂತರ ಕರೆಗಳು ಬರುತ್ತಿದೆ. ಇದರಿಂದ ಮಳೆಯಿಂದ ಸಂಭವಿಸುವ ವಿಪತ್ತು ನಿರ್ವಹಣೆಗೂ ಅಡ್ಡಿಯಾಗುತ್ತಿದೆ. ಶಾಲಾ ಮಕ್ಕಳ ಹೊರತಾಗಿ ಬೇರೆಯವರು ಇಂತಹ ಕರೆ ಮಾಡುತ್ತಿದ್ದು, ಇದರಿಂದ ಅಧಿಕೃತ ಮೊಬೈಲ್ ಉಪಯೋಗ ಇಲ್ಲದಂತಾಗಿದೆ ಎಂದಿರುವ ಜಿಲ್ಲಾಧಿಕಾರಿ, ಈ ಬಗ್ಗೆ ಕಠಿಣ ನಿರ್ಧಾರ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ರೆಡ್ ಅಲರ್ಟ್ ಇದ್ದ ಕಾರಣದಿಂದ ನಿರಂತರ ಶಾಲೆಗೆ ರಜೆ ಘೋಷಣೆ ಮಾಡಲಾಗಿತ್ತು. ಬುಧವಾರ(ಜು.17)ಮೊಹರಂ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಇದ್ದು, ಗುರುವಾರ(ಜು.18) ಶಾಲೆ ಪುನರಾರಂಭಗೊಳ್ಳಲಿದೆ. ಆದರೆ ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಗುರುವಾರ ಕೂಡಾ ರಜೆ ಘೋಷಣೆ ಮಾಡಲಾಗಿದೆ ಎಂಬ ಆದೇಶ ಪತ್ರ ಹರಿದಾಡಿದೆ. ಕಿಡಿಗೇಡಿಗಳು ಈ ನಕಲಿ ಆದೇಶ ಪತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಏ.10 ಕ್ಕೆ ರಾಜ್ಯಸಭಾ ಸದಸ್ಯರಾಗಿ ನಿತೀಶ್ ಕುಮಾರ್ ಪ್ರಮಾಣ ವಚನ ಸ್ವೀಕಾರ! ಸಿಎಂ ಸ್ಥಾನಕ್ಕೆ ರಾಜೀನಾಮೆ?

ಬಾಗಲಕೋಟೆ ಉಪಚುನಾವಣೆ: BJP ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ: ಇಬ್ಬರು ಪೊಲೀಸ್ ಅಧಿಕಾರಿಗಳ ಎತ್ತಂಗಡಿ!

ವಿಶೇಷ ಪಡೆ, ಹತ್ತಾರು ಸೇನಾ ವಿಮಾನ: ಶತ್ರು ನೆಲದಲ್ಲಿ ಬಿದ್ದ ತನ್ನ ಪೈಲಟ್​ ನ್ನು ಅಮೆರಿಕ ರಕ್ಷಿಸಿದ್ದೇ ರೋಚಕ!

ಅಕ್ರಮ ಬಾಂಗ್ಲಾ ವಲಸಿಗರಿಗೆ ಹೊಸ ತಲೆನೋವು; ಗಡಿಗಳಲ್ಲಿ ಹಾವು. ಮೊಸಳೆಗಳ ನಿಯೋಜನೆ: BSF ಗಂಭೀರ ಚಿಂತನೆ!

ಇರಾನ್ ವಿರುದ್ಧದ ಯುದ್ಧ ಅಮೆರಿಕಾಗೆ ತಿರುಗುಬಾಣ!: ಇಂಧನ, ಸಾರಿಗೆ ದರ ದುಪ್ಪಟ್ಟು, ಜನಸಾಮಾನ್ಯರು ಹೈರಾಣ; ಟ್ರಂಪ್ ಗೆ ಹಿಡಿಶಾಪ!

SCROLL FOR NEXT