ಬೆಂಗಳೂರು : ನಮ್ಮ ಮೆಟ್ರೊ 75.06 ಕಿ.ಮೀ ವ್ಯಾಪ್ತಿಯ 2ನೇ ಹಂತದ ಕಾಮಗಾರಿ ವೆಚ್ಚವು ಸುಮಾರು 40,000 ಕೋಟಿ ರೂ.ಗೆ ಏರಿದೆ, ಇದು ದಶಕದ ಹಿಂದೆ ಶೇ.52 ರಷ್ಟು ಮೂಲ ವೆಚ್ಚ ಪ್ರಸ್ತಾಪಿಸಲಾಗಿತ್ತು.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಇತ್ತೀಚೆಗೆ ನಗರಾಭಿವೃದ್ಧಿ ಇಲಾಖೆ (UDD) ಮೂಲಕ ಅನುಮೋದನೆಗಾಗಿ ರಾಜ್ಯ ಹಣಕಾಸು ಇಲಾಖೆಗೆ ಪರಿಷ್ಕೃತ ವೆಚ್ಚದೊಂದಿಗೆ ಪ್ರಸ್ತಾವನೆಯನ್ನು ಕಳುಹಿಸಿದೆ. ಯೋಜನೆಯು 2014 ರಲ್ಲಿ 72 ಕಿಮೀಗೆ ಅನುಮೋದನೆ ನೀಡಲಾಯಿತು. ನಂತರ 3 ಕಿಮೀ ಸೇರಿಸಲಾಯಿತು. 26,405 ಕೋಟಿ ರು. ವೆಚ್ಚದಲ್ಲಿ 2019 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಆದರೆ 2021 ರ ವೇಳೆಗೆ, ವೆಚ್ಚವನ್ನು ರೂ 30,695 ಕೋಟಿಗೆ ಪರಿಷ್ಕರಿಸಲಾಯಿತು. ಇದು ಹೊರ ವರ್ತುಲ ರಸ್ತೆ ಮಾರ್ಗ (ಹಂತ-2ಎ) ಮತ್ತು ಕೆಆರ್ ಪುರದಿಂದ ಕೆಐಎ (ಹಂತ-2ಬಿ)ವರೆಗಿನ ವಿಮಾನ ನಿಲ್ದಾಣ ಮಾರ್ಗವನ್ನು ಒಳಗೊಂಡಿಲ್ಲ.
UDD ಹೆಚ್ಚುವರಿ ಮುಖ್ಯ ಕಾರ್ಯದರ್ಶಿ SR ಉಮಾಶಂಕರ್ ಅವರು ಈ ಸಂಬಂಧ ಹಲವು ವಿಷಯಗಳನ್ನು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಹಂಚಿಕೊಂಡಿದ್ದಾರೆ. ಪರಿಷ್ಕೃತ ಭೂಸ್ವಾಧೀನ ವೆಚ್ಚಗಳು, ಕೆಲವು ಕಿಲೋಮೀಟರ್‌ಗಳ ಸೇರ್ಪಡೆ, ಹಣದುಬ್ಬರ, ವಿಳಂಬಕ್ಕೆ ಕಾರಣವಾದ ಸಾಂಕ್ರಾಮಿಕ ರೋಗ ಮತ್ತು ಅಂತರರಾಷ್ಟ್ರೀಯ ಕರೆನ್ಸಿಗಳಲ್ಲಿನ ಏರಿಳಿತಗಳು ಹಿಂದಿನ ಅಂದಾಜಿಗಿಂತ ಸುಮಾರು 10,000 ಕೋಟಿ ರೂಪಾಯಿಗಳ ಏರಿಕೆಗೆ ಕಾರಣಗಳಾಗಿವೆ ಎಂದು ಅವರು ತಿಳಿಸಿದ್ದಾರೆ.ಬಿಎಂಆರ್‌ಸಿಎಲ್ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ ಎಂದು ಯುಡಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಳಂಬವೇ ಸಮಸ್ಯೆಗೆ ಪ್ರಮುಖ ಕಾರಣ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2ನೇ ಹಂತ 2019 ರ ವೇಳೆಗೆ ಪೂರ್ಣಗೊಳ್ಳಬೇಕಿತ್ತು. ಐದು ವರ್ಷಗಳ ನಂತರ, ಸಂಪೂರ್ಣ ನೆಟ್ವರ್ಕ್ ಇನ್ನೂ ಸಿದ್ಧವಾಗಿಲ್ಲ. ಮೂಲ ಗಡುವಿನ ನಂತರ ಕೋವಿಡ್ ಸಾಂಕ್ರಾಮಿಕ ಹರಡಿತು. ಆರಂಭದಲ್ಲಿ ಭೂಮಿ ಸ್ವಾಧೀನಪಡಿಸಿಕೊಳ್ಳುವಲ್ಲಿನ ವಿಳಂಬವು ಯೋಜನೆಯನ್ನು ಗಣನೀಯವಾಗಿ ತಡೆಹಿಡಿಯಿತು ಎಂದು ಅವರು ಹೇಳಿದರು.
ಪಶ್ಚಿಮದಲ್ಲಿ ರೀಚ್-2 ವಿಸ್ತರಣೆಯು ಕೆಂಗೇರಿಯಲ್ಲಿ ಕೊನೆಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನು ಚಲ್ಲಘಟ್ಟದವರೆಗೆ ವಿಸ್ತರಿಸಲಾಗಿದೆ. ನಾವು ಕಾಡುಗೋಡಿಯ (ವೈಟ್‌ಫೀಲ್ಡ್) ಪೂರ್ವ ಭಾಗದಲ್ಲಿ ಮತ್ತೊಂದು ಡಿಪೋವನ್ನು ಸೇರಿಸಿದ್ದೇವೆ ಎಂದು ಅವರು ಹೇಳಿದರು. ಅಂದುಕೊಂಡಿದ್ದಕಿಂತ 44 ಹೆಕ್ಟೇರ್ ಭೂಮಿಯನ್ನು ಹೆಚ್ಚುವರಿಯಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆ, ಪರಿಹಾರದ ಮೊತ್ತವು 438 ಕೋಟಿ ರೂನಿಂದ ಸುಮಾರು 6,300 ಕೋಟಿ ರೂ.ಗೆ ಏರಿಕೆಯಾಗಿದೆ. "ನಾವು ಮೂಲತಃ ಯೋಜಿತ 84.33 ಹೆಕ್ಟೇರ್ ಬದಲಿಗೆ 128.36 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ ಎಂದು ಅವರು ವಿವರಿಸಿದರು.
ಬೈಯಪ್ಪನಹಳ್ಳಿಯಿಂದ ಕಾಡುಗೋಡಿವರೆಗೆ ಹಾಗೂ ಯಲಚೇನಹಳ್ಳಿಯಿಂದ ಸಿಲ್ಕ್ ಇನ್‌ಸ್ಟಿಟ್ಯೂಟ್‌ವರೆಗೆ ಲವು ನಿಲ್ದಾಣಗಳ ಬಳಿ ಬಿಎಂಆರ್‌ಸಿಎಲ್ ರಸ್ತೆ ವಿಸ್ತರಣೆ ಕಾರ್ಯವನ್ನು ಕೈಗೆತ್ತಿಕೊಂಡಿದೆ. ರೀಚ್ -5 ಲೈನ್ (ಆರ್ ವಿ ರಸ್ತೆ-ಬೊಮ್ಮಸಂದ್ರ) ಗಾಗಿ ಹೆಚ್ಚುವರಿ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಯಿತು. ಹಣಕಾಸು ಇಲಾಖೆಯ ಅನುಮೋದನೆಯ ನಂತರ ಕೇಂದ್ರದ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಬೇಕಾಗಿದೆ ಎಂದು ಅವರು ಹೇಳಿದರು.